
ಕೆಎಸ್ಎಸ್ ನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ.
ಗಜೇಂದ್ರಗಡ : ಸತ್ಯಮಿಥ್ಯ ( ಜೂ-29).
ವಿದ್ಯಾರ್ಥಿಗಳ ಗುರಿ ಸಾಧನೆಯೆಡೆಗೆ ಮುಖ ಮಾಡಿರಲಿ ಎಂದು ಕೆ.ಎಸ್. ಎಸ್. ಕಲಾ ಹಾಗೂ ವ್ಯಾಣಿಜ್ಯ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರದೀಪ ಹುಲ್ಲೂರ ತಿಳಿಸಿದರು.
ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸದಾ ಗುರಿಯತ್ತ ತಮ್ಮ ಚಿತ್ತವನ್ನು ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಪದವಿ ಮುಗಿದ ತಕ್ಷಣ ಕೆಲವರು ಉದ್ಯೋಗದತ್ತ ಮುಖ ಮಾಡಿದರೆ ಮತ್ತೆ ಕೆಲವರು ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ಇದರ ಜತೆಗೆ ಜತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಭವಿಷ್ಯದಲ್ಲಿ ಬೇಕಾದ ಎಲ್ಲಾ ರೀತಿಯ ಸೌಲಭ್ಯ ನೀಡಲು ಸಂಸ್ಥೆ ಸದಾ ಸಿದ್ಧವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಪ್ರದೀಪ ಹುಲ್ಲೂರ ಸೇರಿದಂತೆ ಉಪನ್ಯಾಸಕರಾದ ಎಚ್.ಎನ್. ಗೌಡರ , ಕಟ್ಟಿಮನಿ, ಚಂದೂಕರ, ಅಚ್ಚಲಕರ್, ಹಡಪದ , ಪೂಜಾರ , ಕಾವ್ಯಶ್ರೀ, ಗುಳೆದಗುಡ್ಡ, ಗೌರಿಮಠ, ಸಂಕನೂರ, ಮತ್ತು ಜಾಲಿಹಾಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಿರಿಯ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಶುಭ ಹಾರೈಸಿದರು. ಕಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ವರದಿ : ಮುತ್ತು ಗೋಸಲ.