
ಗಜೇಂದ್ರಗಡ: ಬಿ ಎಸ್ ಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ.
ಗಜೇಂದ್ರಗಡ : ಸತ್ಯಮಿಥ್ಯ (ಜೂ-29).
ವಿದ್ಯಾರ್ಥಿಗಳು ಔದ್ಯೋಗಿಕ ಕ್ಷಮತೆಯನ್ನು ಗಳಿಸಿಕೊಳ್ಳಲು ಕೌಶಲ್ಯವನ್ನು ಹೊಂದುವುದು ತುಂಬಾ ಅಗತ್ಯವಾಗಿದೆ ಹಾಗಾಗಿ ಇಂತಹ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಶಿವರಾಜ ಘೋರ್ಪಡೆ ಹೇಳಿದರು.
ಅವರು ನಗರದ ಬಿ ಎಸ್ ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ದೇಶಪಾಂಡೆ ಫೌಂಡೇಶನ್ ಹಾಗೂ ಹೆಚ್ ಡಿ ಎಫ್ ಸಿ ಗಜೇಂದ್ರಗಡ ಶಾಖೆಯ ಸಹಯೋಗದಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡುತ್ತ ಈ ಕಾಲೇಜು ದಿನದಿಂದ ದಿನಕ್ಕೆ ಪ್ರತಿ ವರ್ಷ ಪ್ರಗತಿ ಹೊಂದುತ್ತಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಮಹೇಂದ್ರ. ಜಿ. ವಹಿಸಿಕೊಂಡಿದ್ದರು.ಅವರು ಮಾತನಾಡುತ್ತಾ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ದೇಶಪಾಂಡೆ ಪೌಂಡೇಶನ್ ಹಾಗೂ ಹೆಚ್ ಡಿ ಎಫ್ ಸಿ ಶಾಖೆ ಗಜೇಂದ್ರಗಡ ಇವರು ಒದಗಿಸಿರುವ ಲ್ಯಾಬಿನ ಸದುಪಯೋಗವನ್ನು ಪಡೆದುಕೊಳ್ಳುತ್ತೇವೆಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಿಡಿಸಿ ಸದಸ್ಯರಾದ ಎಫ್ ಎಸ್ ಕರಿದುರ್ಗಣ್ಣವರ, ಶಿವಕುಮಾರ ಚೌಹಾನ, ಶ್ರೀಧರ ಬಿದರಳ್ಳಿ, ಶ್ರೀಕಾಂತ ಅವಧೂತ, ಬಿ ಎಂ ಬಡಿಗೇರ,ದೇಶಪಾಂಡೆ ಫೌಂಡೇಶನ್ ವತಿಯಿಂದ ನಾಗರಾಜ, ಸೂರಣ್ಣ ಹಾಗೂ ಹೆಚ್ ಡಿ ಎಫ್ ಸಿ ಗಜೇಂದ್ರಗಡ ಶಾಖೆಯ ಮ್ಯಾನೇಜರ್ ಆದ ಪ್ರಕಾಶ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಸುರೇಶ ಬಂಡಾರಿ.