ಬಿಜೆಪಿ ಭದ್ರಕೋಟೆಗೆ ಬಂಡಾಯದ ಬಿಸಿ. ಗೆಲುವಿನ ನಗೆ ಬೀರಿದ ಕೈ ಪಡೆ.
ಗಜೇಂದ್ರಗಡ : ಸತ್ಯಮಿಥ್ಯ (ಸ -03).
ಗಜೇಂದ್ರಗಡ ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಬಿಜೆಪಿಯಿಂದ ಬಂಡಾಯ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಸುಭಾಸ್ ಮ್ಯಾಗೇರಿ ಮತ್ತು ಉಪಾಧ್ಯಕ್ಷರಾಗಿ ಸವಿತಾ ಬಿದರಳ್ಳಿ ಆಯ್ಕೆಯಾಗಿದ್ದಾರೆ.
ಬೆಳಿಗ್ಗೆಯಿಂದಲೇ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ಮುಖಂಡರು ಚುನಾವಣೆ ರಣತಂತ್ರ ಹೆಣೆಯುವಲ್ಲಿ ತಲ್ಲಿನರಾಗಿದ್ದರು. ಈ ನಡುವೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಸುಭಾಸ್ ಮ್ಯಾಗೇರಿ,ಮುದಿಯಪ್ಪ ಮುಧೋಳ್, ಲಕ್ಮಿ ಮುಧೋಳ್,ಕೌಸರಬಾನು ಹುನಗುಂದ, ದ್ರಾಕ್ಷಿಯಣಿ ಚೋಳಿನ,ಶರಣಪ್ಪ ಉಪ್ಪಿನಬೆಟಗೇರಿ,ವಿಜಯಾ ಮಾಳಗಿ ಬಂಡಾಯವೇದ್ದು ಕಾಂಗ್ರೇಸ್ ಜೊತೆ ಸೇರಿದ್ದರು.
ಬೆಳಿಗ್ಗೆ ಚುಣಾವಣಾ ಪ್ರಕ್ರಿಯೆ ಪ್ರಾರಂಭ ವಾಗುತ್ತಿದ್ದಂತೆ ಮೊದಲು ಸಿದ್ದಪ್ಪ ಬಂಡಿ ನೇತೃತ್ವದಲ್ಲಿ ಪುರಸಭೆ ಆಗಮಿಸಿದ ಕಾಂಗ್ರೇಸ್ ಪರ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ 19 ನೇ ವಾರ್ಡಿನ ಸುಭಾಸ್ ಮ್ಯಾಗೇರಿ ( ಅನುಮೋದಕರ ಕೈಯಿಂದ ) ಉಪಾಧ್ಯಕ್ಷ ಸ್ಥಾನಕ್ಕೆ 15 ನೇ ವಾರ್ಡಿನ ಸವಿತಾ ಬಿದರಳ್ಳಿ ನಾಮಪತ್ರ ಸಲ್ಲಿಸಿದರು.
ಇತ್ತ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯಮನೂರಪ್ಪ ತಿರಕೋಜಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 4 ನೇ ವಾರ್ಡಿನ ಸುಜಾತಾಬಾಯಿ ಸಿಂಗ್ರಿ ನಾಮ ಪತ್ರ ಸಲ್ಲಿಸಿದರು.
ಒಟ್ಟು 23 ಸದಸ್ಯ ಬಲದ ಗಜೇಂದ್ರಗಡ ಪುರಸಭೆಗೆ ಮದ್ಯಾಹ್ನ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸುಭಾಸ್ ಮ್ಯಾಗೇರಿ ಮತ್ತು ಉಪಾಧ್ಯಕ್ಷೆ ಸವಿತಾ ಬಿದರಳ್ಳಿ ಪರ ಕಾಂಗ್ರೆಸ್ಸಿನ 5 ಸದಸ್ಯರು ಮತ್ತು ಬಿಜೆಪಿಯ 7 ಬಂಡಾಯ ಸದಸ್ಯರು ಮತ್ತು ಶಾಸಕ ಜಿ. ಎಸ್. ಪಾಟೀಲ್ ಮತ ನೀಡಿದ್ದರಿಂದ 13 ಸದಸ್ಯರ ಬೆಂಬಲದಿಂದ ಆಯ್ಕೆಯಾದರು.
ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಇಬ್ಬರು ಅಭ್ಯರ್ಥಿಗಳು 11 ಮತಗಳನ್ನು ಪಡೆಯಲು ಮಾತ್ರ ಶಕ್ತರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ. ಎಸ್. ಪಾಟೀಲ್. ಪಕ್ಷದಲ್ಲಿನ ಸಮನ್ವಯ ಕೊರತೆ,ತಾರತಮ್ಯ ನೀತಿ, ಕೆಲವೇ ಸದಸ್ಯರ ಕೇಂದ್ರೀಕೃತ ಆಡಳಿತ ಮತ್ತು ಅನುದಾನ ಹಂಚಿಕೆಯಲ್ಲಿ ತಾರತಮ್ಯವನ್ನು ವಿರೋಧಿಸಿ ನಮ್ಮ ಬೆಂಬಲ ಕೇಳಿದರು ಆದ್ದರಿಂದ ಕಡಿಮೆ ಅವಧಿಯಲ್ಲಿ ಗಜೇಂದ್ರಗಡ ಅಭಿವೃದ್ಧಿಯ ದೃಷ್ಟಿಕೋನದಿಂದ ನಾವೂ ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ಬೆಂಬಲಿಸಿದ್ದೇವೆ ಎಂದರು.
ನೂತನ ಅಧ್ಯಕ್ಷ ಸುಭಾಸ್ ಮ್ಯಾಗೇರಿ ಮಾತನಾಡಿ ಗಜೇಂದ್ರಗಡ ಅಭಿವೃದ್ಧಿ ಒಂದೇ ದೃಷ್ಟಿಕೋನದಿಂದ ನಾವೂ ಬಂಡಾಯವೇದ್ದು ಈ ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಈ ಸಂದರ್ಭ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಬಂಡಿ, ಮಿಥುನ್ ಪಾಟೀಲ,ಶಿವರಾಜ ಘೋರ್ಪಡೆ, ಮುರ್ತುಜ ಡಾಲಯತ, ವೆಂಕಟೇಶ ಮುದಗಲ, ರಾಜು ಸಾಂಗ್ಲಿಕರ, ಶ್ರೀಧರ್ ಬಿದರಳ್ಳಿ, ಬಸವರಾಜ ಶೀಲವಂತರ, ಮಂಜುಳಾ ರೇವಡಿ, ಅಜಿತ್ ಬಾಗಮರ, ವಿ. ಬಿ. ಸೋಮನಕಟ್ಟಿಮಠ, ಸಿದ್ದು ಗೊಂಗಡಶೆಟ್ಟಿ, ಅರ್ಜುನ ರಾಠೋಡ, ಚಂಬಣ್ಣ ಚವಡಿ, ಪ್ರಬಣ್ಣ ಚವಡಿ, ಹನಮಂತ ಗೌಡ್ರ, ಅಂದಪ್ಪ ರಾಠೋಡ, ಅರಿಹಂತ ಬಾಗಮಾರ, ಬಸವರಾಜ ಚೆನ್ನಿ, ಶ್ರೀಧರ ಗಂಜೀಗೌಡ್ರ, ಶಶಿ ಒಕ್ಕಲರ ಸೇರಿದಂತೆ ಅನೇಕರು ಇದ್ದರು.
ವರದಿ : ಚನ್ನು. ಎಸ್.