ದ್ಯಾಂಪೂರ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಅಭಿವೃದ್ಧಿಗಾಗಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ:-ರಾಮರಾವ್ ಜಗತಾಪ್,
ದ್ಯಾಂಪೂರ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಅಭಿವೃದ್ಧಿಗಾಗಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ:-ರಾಮರಾವ್ ಜಗತಾಪ್.
ಕೊಪ್ಪಳ: ಸತ್ಯಮಿಥ್ಯ ( ಸ -03).
ಜಿಲ್ಲೆಯ ಕುಕನೂರು ಪಟ್ಟಣದ ದ್ಯಾಂಪೂರದ ಶ್ರೀ ಮಂಜುನಾಥ ಸ್ವಾಮಿಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಪೂಜಾ ಕಾರ್ಯಕ್ರಮಗಳು ಅತ್ಯಂತ ವಿಧಿ ವಿಧಾನಗಳಿಂದ ನೆರವೇರಿದವು.
ಮಂಗಳವಾರ ದಿವಸ ಶ್ರೀ ಮಂಜುನಾಥ ಸ್ವಾಮಿಗೆ ಪ್ರಾತಃಕಾಲದಲ್ಲಿ ವಿಶೇಷ ಅಭಿಷೇಕ ಪೂಜಾ ವಿಧಾನಗಳನ್ನು ಗ್ರಾಮದ ಕಲ್ಲಯ್ಯ ಹಿರೇಮಠ ನೆರವೇರಿಸಿದರು. ನಂತರ ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆರವೇರಿಸಲಾಯಿತು ನಂತರ ದೇವಸ್ಥಾನದಲ್ಲಿ ಮಹಾ ಮಂಗಳಾರತಿ ಪೂಜೆಯೊಂದಿಗೆ ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರಾದ ರಾಮರಾವ್ ಜಗತಾಪ ಮಾತನಾಡಿ ನಮ್ಮ ದೇವಸ್ಥಾನವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸ್ಥಾಪನೆಗೊಳ್ಳಲು ಗ್ರಾಮದ ಸಕಲ ಸದ್ಭಕ್ತರ ಸಹಾಯ ಮತ್ತು ಹೊಂದಾಣಿಕೆ ಮನೋಭಾವನೆಯಿಂದ ದೇವಸ್ಥಾನವು ಪ್ರಗತಿಯತ್ತ ಸಾಗಿದೆ ಕುಕುನೂರಿನ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಅಭಿವೃದ್ಧಿಗಾಗಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದು ಮಾತನಾಡಿದರು.
ಪುರೋಹಿತ ಕಾರ್ಯಕ್ರಮ ನೆರವೇರಿಸಿ ನಂತರ ಮಾತನಾಡಿದ ಕಲ್ಲಯ್ಯ ಹಿರೇಮಠ. 25 ವರ್ಷಗಳಿಂದ ದಾಂಪೂರ ಗ್ರಾಮದ ಈ ಸ್ಥಳದಲ್ಲಿ ದೇವಸ್ಥಾನ ಸ್ಥಾಪಿಸಬೇಕೆಂದು 5 ಕಲ್ಲುಗಳನ್ನು ಮಾತ್ರ ಇಟ್ಟು ಪೂಜೆ ಸಲ್ಲಿಸುತ್ತಾ ಬಂದಿದ್ದು ಇದೇ ಸ್ಥಳದಲ್ಲಿ ದೊಡ್ಡ ಮಟ್ಟದಲ್ಲಿ ದೇವಸ್ಥಾನವನ್ನು ಸ್ಥಾಪಿಸಿದ್ದು ಗ್ರಾಮದ ಗುರು ಹಿರಿಯರ ಹಾಗೂ ಯುವಕರ ಸಹಕಾರ ಮತ್ತು ಕೊಡುಗೈ ದಾನಿಗಳಿಂದ ದೇವಸ್ಥಾನವು ಅಭಿವೃದ್ಧಿಗೆ ಸಾಧ್ಯವಾಗಿದೆ ಎಂದು ಮಾತನಾಡಿದರು.
ನಂತರ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೂ ಪ್ರಸಾದ ಸೇವೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿಬಸವರಾಜು ಬೇಡನಾಳ, ನಾಗಯ್ಯ ಸಾರಂಗಮಠ, ಮುದಿಯಪ್ಪ, ಚಂದಾಲಿಂಗಪ್ಪ ಬಿ.ಮಾಲಗಿತ್ತಿ ಕರ್ನಾಟಕ ರಾಜ್ಯ ಧಾರ್ಮಿಕ ಪದ್ಧತಿ ಆಚರಣೆಗಾರರ ಅಭಿವೃದ್ಧಿ ರಾಜ್ಯಾಧ್ಯಕ್ಷರು, ಶೇಖರಯ್ಯ ಸಸಿಮಠ್, ಗವಿಸಿದ್ದಯ್ಯ ಚಂಡೂರು, ಗುಂಡಯ್ಯ ಶಿರೋರಮಠ, ಬಾಬು ಗೌಡ, ರಾಜಶೇಖರ, ಬಾಳಪ್ಪ ಮರಡಿ, ಮಂಜುನಾಥ ಯಡಿಯಾಪುರ, , ಶ್ರೀ ಮಂಜುನಾಥ ಸೇವಾ ಸಮಿತಿಯ ಸೇವಾ ಕಾರ್ಯಕರ್ತರು ಮಹಿಳೆಯರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.