ಸದೃಢ ದೇಹದಲ್ಲಿ ಉತ್ತಮ ಆರೋಗ್ಯ ಇರಬೇಕು ಎಂದರೆ ಕ್ರೀಡೆ ಅತ್ಯಾವಶ್ಯಕ -ಟಿ. ಜೆ. ದಾನಿ .
ಕುಕನೂರು : ಸತ್ಯಮಿಥ್ಯ (ಸ -03)
ಪ್ರತಿಯೊಬ್ಬ ವಿದ್ಯಾರ್ಥಿಯ ಸದೃಢ ದೇಹದಲ್ಲಿ ಉತ್ತಮ ಆರೋಗ್ಯ ಇರಬೇಕು ಅದಕ್ಕೆ ಕ್ರೀಡೆ ಅತ್ಯಾವಶ್ಯಕ ಅಕ್ಷರ ದಾಸೋಹ ಅಧಿಕಾರಿ ಟಿ.ಜೆ. ದಾನಿ ಹೇಳಿದರು.
ಕೊಪ್ಪಳ ಜಿಲ್ಲೆ ಕುಕನೂರ ಪಟ್ಟಣದ ವಿದ್ಯಾನಂದ ಗುರುಕುಲ ಶಾಲೆಯಲ್ಲಿ ನಡೆದ ಕುಕನೂರು ಮತ್ತು ಯಡೆಪುರ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ ವನ್ನು ಉದ್ದೇಶಸಿ ಮಾತನಾಡಿದ ಅವರು ಇಂದಿನ ದಿನಮಾನಗಳಲ್ಲಿ ಕ್ರೀಡಾ ಆಸಕ್ತಿ ಎಂಬುದು ಕ್ಷಿಣಿಸುತ್ತಾ ಹೋಗುತ್ತಿದೆ ಅವುಗಳ ಅಭಿವೃದ್ಧಿಗೆ ಕ್ರೀಡಾ ಆಸಕ್ತಿ ಮುಖ್ಯವಾಗಿದೆ ಸದೃಢ ದೇಹದಲ್ಲಿ ಸದೃಢ ಅರೋಗ್ಯ ಇರಬೇಕು ಎಂದರೆ ಈ ಕ್ರೀಡೆ ಅತ್ಯಾವಶಕವಾಗಿ ಬೆಳೆಯಬೇಕಿದೆ ಎಂದು ಹೇಳಿದರು.
ಹಿರಿಯ ದೈಹಿಕ ಶಿಕ್ಷಕರ ಶರಣಪ್ಪ ವೀರಾಪೂರ ಪ್ರಾಸ್ತಾವಿಕ ನುಡಿಗಳನ್ನು ನಾಡಿದರು. ಹಿರಿಯ ಶಿಕ್ಷಕರಾದ ಮಹೇಶ ಸಬರದ ವಿದ್ಯಾರ್ಥಿಗಳನ್ನು ಮತ್ತು ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಲಲಿತಮ್ಮ ಯಡೆಯಾಪುರ ಅವರು ಕ್ರೀಡಾ ಜ್ಯೋತಿಯನ್ನು ಉದ್ಘಾಟಿಸಿದರು.ಕ್ರೀಡೆಗೆ ಚಾಲನೆಯನ್ನು ವಿದ್ಯಾನಂದ ಗುರುಕುಲ ಸಂಸ್ಥೆಯ ಕಾರ್ಯದರ್ಶಿಗಳಾದ ಜೆ .ವಿ .ಜಾಗೀರ್ದಾರ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.
ನಿರೂಪಣೆಯನ್ನು ರಾಜು ಪೂಜಾರ್ ಶಿಕ್ಷಕರು ನೆರವೇರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಲಲಿತಮ್ಮ ಎಡಿಯಾಪುರ, ವಿದ್ಯಾನನಂದ ಗುರುಕುಲ ವಿಶ್ವಸ್ತ ಮಂಡಳಿಯ ಕಾರ್ಯದಸ್ರಿ ಜಿವಿ ಜಾಗೀರ್ದಾರ,, ಉಮೇಶ ಕಂಬಳಿ, ಮಹೇಶ್ ಸಬರದ,ಪಿರಸಾಬ ದಪೆದಾರ,ಮುಖ್ಯ ಶಿಕ್ಷಕ ಸೋಮಶೇಖರ್ ನಿಲೋಗಲ, ಮಾರುತಿ ತಳವಾರ್,ಗಿರೀಶ್ ನಿಲೋಗಲ್, ಎನ್.ಕೆ. ದೀಕ್ಷಿತ,,ಶಿವುಕುಮಾರ್, ಶರಣಪ್ಪ ರಾವಣಕಿ, ಅಶೋಕ್ ಮಾದನೂರು, ಬಸವರಾಜ್ ಮೇಟಿ, ಶಾಂತ ಹಿರೇಮಠ, ಮಂಜುನಾಥ್ ತೆಗ್ಗಿನಮನಿ, ರವಿ ಮಾಳಗಿ, ಚಂದ್ರು ದೊಡ್ಡಮನಿ, ಹಾಗೂ ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.