ವಿದ್ಯೆ ಕಲಿಸಿದ ಗುರುಗಳನ್ನು ಎಂದು ಮರೆಯಬಾರದು ಅಮರೇಶ ಮಡ್ಡಿಕೇರಿ
ಕುಕನೂರು: ಸತ್ಯಮಿಥ್ಯ ( ಸ -05)
ಶಿಕ್ಷಕರು ಪ್ರತಿಯೊಬ್ಬರ ಜೀವನದಲ್ಲಿ ಬಂದು ಹೋಗುವ ವ್ಯಕ್ತಿಯಾಗಿದ್ದಾರೆ. ಆದರೆ ನಾನು ಇವತ್ತಿನ ದಿವಸ ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ಗುರು ಎಂದು ವಿದ್ಯಾನಂದ ಗುರುಕುಲ ಡಾ. ಜಿ. ಎಸ್ . ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಅಮರೇಶ ಮಡ್ಡಿಕೇರಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಡಾ. ಜಿ. ಎಸ್. ಮೇಲ್ಕೋಟೆ ಪಾಲಿಟೆಕ್ನಿಕ್ ವಿಭಾಗದ ವಿದ್ಯಾರ್ಥಿಗಳಿಂದ ಶಿಕ್ಷಕ ದಿನಾಚರಣೆ ಅಂಗವಾಗಿ ಸಸಿಗೆ ನೀರು ಹಾಕುವ ಮೂಲಕ ಕೇಕ್ ಕತ್ತರಿಸಿ ಉದ್ಘಾಟನೆ ನೆರವೇರಿಸಿದರು.
ನಾವು ಇಂಜಿನಿಯರ್ ಆಗಬಹುದು ಡಾಕ್ಟರೇ ಆಗಬಹುದು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬಹುದು ಆದರೆ ಇದಕ್ಕೆಲ್ಲ ಕಾರಣ ಶಿಕ್ಷಕರು ಎಂಬುದನ್ನ ಮರೆಯಬಾರದು . ಹರ ಮುನಿದರೆ ಗುರು ಕಾಯುವ, ಗುರು ಮುನಿದರೆ ಯಾವ ಹರ ಕಾಯನು, ಆದ್ದರಿಂದ ನಾವು ನಮ್ಮ ವಿದ್ಯೆ ಕಲಿಸಿದ ಹಳೆ ಶಿಕ್ಷಕರನ್ನು ನೆನಪಿಸಿಕೊಳ್ಳಬೇಕು ಎಂದು ತಮ್ಮ ಇಳಕಲ್ ಪಟ್ಟಣದ ವಿದ್ಯಾರ್ಥಿಯಾಗಿದ್ದಾಗ ಪ್ರಭು ಶೆಟ್ಟಿ ಮತ್ತು ಮಲ್ಲಯ್ಯ ಎಂಬ ಶಿಕ್ಷಕರ ಮಾರ್ಗದರ್ಶನದ ಮೂಲಕ ನಾನು ಇವತ್ತಿನ ದಿವಸ ಈ ಕಾಲೇಜಿನಲ್ಲಿ ಪ್ರಾಚಾರ್ಯರಾಗಲು ಸಾಧ್ಯವಾಗಿದೆ ಎಂದು ಪ್ರಾಚಾರ್ಯ ಅಮರೇಶ ಮಡ್ಡಿಕೇರಿ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿದ ಗುರುಗಳನ್ನು ಎಂದು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ನಂತರದಲ್ಲಿ ಶೇಖಮೆಹಬೂಬ ಉಪ ಪ್ರಾಚಾರ್ಯರು ಮಾತನಾಡುತ್ತ ಇವತ್ತಿನ ಕಾರ್ಯಕ್ರಮವು ಅತ್ಯಂತ ಯಶಸ್ವಿಗೊಳ್ಳಲು ವಿದ್ಯಾರ್ಥಿಗಳೇ ಕಾರಣ, ಏಕೆಂದರೆ ವಿದ್ಯಾರ್ಥಿಗಳು ಇಷ್ಟೆಲ್ಲ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಪ್ರತಿಯೊಬ್ಬ ವಿದ್ಯಾರ್ಥಿ ವೇದಿಕೆ ಮೇಲೆ ದೈರ್ಯದಿಂದ ಮಾತನಾಡುವುದು ಮತ್ತು ನಿರೂಪಣೆ ಕಾರ್ಯಕ್ರಮ ನೆರವೇರಿಸಿಕೊಡುವುದು ನೋಡಿದರೆ ನಮ್ಮ ಶಿಕ್ಷಣದ ಮಹತ್ವ ವಿದ್ಯಾರ್ಥಿಗಳಿಗೆ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ . ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಯಾವುದೇ ಕಾರ್ಯಕ್ರಮಗಳಾಗಲಿ ವಿದ್ಯಾಭ್ಯಾಸದಲ್ಲಾಗಲಿ ಹಿಂಜರಿಯದೆ ಮುನ್ನುಗ್ಗುತ ನಡೆದಾಗ ಮಾತ್ರ ಸಾಧನೀಯನು ಮುಟ್ಟಲು ಸಾಧ್ಯ ಎಂದು ಮಾತನಾಡಿದರು.
ಶಿಕ್ಷಕರ ಸುಧಾಕರ ದೇಸಾಯಿ ಮಾತನಾಡಿ ಶಿಕ್ಷಕರ ದಿನಾಚರಣೆಯ ದಿನದಂದು ಶಿಕ್ಷಕರಿಗೆ ಗೌರವ ನಮನಗಳು ಕೇಕ್ ಕತ್ತರಿಸಿ ಸಿಹಿಯನ್ನು ಹಂಚಿದರೆ ಸಾಲದು. ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮವಾದ ವಿದ್ಯಾಭ್ಯಾಸ ಅಂಕಗಳನ್ನು ಪಡೆಯುವುದರೊಂದಿಗೆ ಸಿಹಿಯನ್ನು ಹಂಚಿದಾಗ ಶಿಕ್ಷಕರಿಗೆ ಗೌರವ ನಮನ ಸಲ್ಲಿಸಿದಂತೆ ಯಾಗುತ್ತದೆ ಎಂದು ಮಾತನಾಡಿದರು.
ದತ್ತುರಾವ್ ಜಗತಾಪ್ ಮಾತನಾಡುತ್ತಾ ಪ್ರತಿಯೊಬ್ಬ ಮನುಷ್ಯನು ಸಂಘಜೀವಿ, ಸಮಾಜವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಯಾವುದನ್ನು ಬಿಟ್ಟು ಇರಲು ಸಾಧ್ಯವಿಲ್ಲ, ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೆ ರೀತಿ, ನೀತಿ, ಸಂಸ್ಕಾರಗಳು, ಆಚಾರ ,ವಿಚಾರ, ಎಲ್ಲವನ್ನು ಕಲಿಸುವವನು ಗುರು ಆದ್ದರಿಂದ ಮೊದಲು ಗುರುವಿಗೆ ಗುಲಾಮನಾಗಬೇಕು ನಂತರ ವಿದ್ಯೆ ತಾನಾಗೆ ಒಲಿದು ಬರುವುದು. ಜೀವನದ ಉದ್ದಕ್ಕೂ ಪ್ರತಿಯೊಬ್ಬರು ಒಂದೊಂದು ವಿದ್ಯೆಗಳನ್ನು ಕಲಿಸಿಕೊಡುತ್ತಾರೆ ಅಂತ ಗುರುವನ್ನು ಎಂದು ಮರೆಯಬಾರದು ಎಂದು ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಮತ್ತು ವಂದನಾರ್ಪಣೆಯನ್ನು ಕಾಲೇಜಿನ ವಿದ್ಯಾರ್ಥಿಗಳಾದ ವಿಶಾಲ ಮತ್ತು ನಸರೇನ್ ನೆರವೇರಿಸಿದರು.
ಈ ಸಂದರ್ಭದಲ್ಲಿಅಮರೇಶ ಮಡ್ಡಿಕೇರಿ ಪ್ರಾಚಾರ್ಯರು, ಶೇಖ ಮಹಿಬೂಬ ಉಪ ಪ್ರಾಚಾರ್ಯರು,ಎನ್. ಆರ್. ಕುಕನೂರ ನಿವೃತ್ತ ಪ್ರಾಚಾರ್ಯರು, ಜಿ.ವಿ. ಜಾಗಿರದಾರ ಕಾರ್ಯದರ್ಶಿಗಳು, ಶ್ರೀನಿವಾಸ್ ರಾವ್ ದೇಸಾಯಿ,ಮನೋಹರ್ ಸುಲಾಖೆ, ಧನ್ವಂತತ್ರಿ ಎಂ , ಸುಧಾಕರ ದೇಸಾಯಿ, ಮಂಜುನಾಥ ಹಮ್ಮಿಗಿ, ದತ್ತುರಾವ್ ಜಗತಾಪ, ಮತ್ತು ವಿದ್ಯಾನಂದ ಗುರುಕುಲ ಸಂಸ್ಥೆಯ ಶಿಕ್ಷಕ ಶಿಕ್ಷಕಿಯರು ಹಾಗೂ ಪಾಲಿಟೆಕ್ನಿಕ್ ಸಿಬ್ಬಂದಿ ವರ್ಗದವರು ಕಾಲೇಜಿನ ವಿದ್ಯಾರ್ಥಿಗಳು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ್