ಸ್ಥಳೀಯ ಸುದ್ದಿಗಳು

ಕುಂದು-ಕೊರತೆ ಸಭೆಯನ್ನು ಏರ್ಪಡಿಸುವುದು ನಾಮಕಾವಷ್ಟೇ. ಇದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತದೆ : ಮಹಾಂತೇಶ ಹೂಗಾರ.

Share News

ಕುಂದು-ಕೊರತೆ ಸಭೆಯನ್ನು ಏರ್ಪಡಿಸುವುದು ನಾಮಕಾವಷ್ಟೇ. ಇದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತದೆ : ಮಹಾಂತೇಶ ಹೂಗಾರ.

ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ, ಯಾವುದೇ ಗ್ರಾಹಕನಿಗೂ ಸಭೆಗೆ ಸರಿಯಾದ ಮಾಹಿತಿ ನೀಡದೆ ಬೇಜವಾಬ್ದಾರಿತನ ತೋರಿದ ಉಪ -ವಿಭಾಗ ಕಚೇರಿಯ ಅಧಿಕಾರಿ ವರ್ಗದವರು

ಕೊಪ್ಪಳ:ಸತ್ಯಮಿಥ್ಯ (ಅ -19).

ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಕಾರ್ಯ ಪಾಲನಾ ಉಪ- ವಿಭಾಗ ಕಚೇರಿ ಗುತ್ತಿಗೆ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಕುಕುನೂರು ವ್ಯಾಪ್ತಿಗೆ ಒಳಪಡುವ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿತ್ತು.

ವಿದ್ಯುತ್ ಗ್ರಾಹಕರ ಕುಂದು ಕೊರತೆಯ ಸಭೆಯಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸೇರಿದ್ದನ್ನು ನೋಡಿದರೆ ವಿಪರ್ಯಾಸ ಎಂದು ಎನಿಸುವದು ಸಹಜ.

ಸಹಾಯಕ ಕಾರ್ಯ ಅಭಿಯಂತರರು ಜೆಸ್ಕಾಂ ಉಪ- ವಿಭಾಗ ಕಾರ್ಯ ಅಧಿಕಾರಿ ಎಂ. ನಾಗರಾಜ ರವರನ್ನು ಮಾಧ್ಯಮದ ಪ್ರತಿನಿಧಿ ವಿಚಾರಿಸಿದಾಗ….

ವಿದ್ಯುತ್ ಗ್ರಾಹಕರ ಕುಂದು ಕೊರತೆಯ ಸಭೆಯಲ್ಲಿ ಸಮಸ್ಯೆಗಳೇ ಇಲ್ಲವೇ ಎಂದು ಕೇಳಿದಾಗ.

ಅಧಿಕಾರಿಗಳು ಸಭೆಯಲ್ಲಿ ಸಾರ್ವಜನಿಕರು ಹಾಜರಾಗಿರುವುದು ಕಂಡರೆ ಸಮಸ್ಯೆಗಳು ಇಲ್ಲ ಎಂದು ಕಾಣುತ್ತದೆ ಎಂದು ಹೇಳಿದರು.

ಇಂದಿನ ದಿನ ಗ್ರಾಹಕರ ಸಭೆ ಇದೆ ಎಂದು ಮಾಹಿತಿ ಸಾರ್ವಜನಿಕರಿಗೆ ಮುಟ್ಟುವಲ್ಲಿ ವಿಫಲವಾಗಿದ್ದೀರೋ ಎಂದು ಕೇಳಿದ್ದಕ್ಕೆ….

ಸಹಾಯಕ ಕಾರ್ಯ ಅಭಿಯಂತರರು ಜಸ್ಕಾಂ ಇಲಾಖೆಯ ಎಮ್. ನಾಗರಾಜ ಮಾತನಾಡಿ ನಾವು ಮೊಬೈಲ್ ಮುಖಾಂತರ ಮಾಹಿತಿಯನ್ನು ರವಾನಿಸಿದ್ದೇವೆ ಮತ್ತು ಪತ್ರಿಕ ಪ್ರಕಟಣೆಯಲ್ಲಿ ನೀಡಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಪ್ರಕಟಣೆ ಮಾಡಲು ಪತ್ರಿಕಾ ಪ್ರಕಟಣೆಯಲ್ಲಿ ಎಷ್ಟು ಜನರಿಗೆ ನೀಡಿದ್ದಾರೋ ಏನೋ ತಿಳಿದಿಲ್ಲ ಹಾರಕ್ಕೆ ಉತ್ತರ ಎನ್ನುವಂತೆ ನಮ್ಮ ಮೊಬೈಲ್ ಮುಖಾಂತರ ಸಾರ್ವಜನಿಕರೆಲ್ಲರೂ ವಾಟ್ಸಾಪ್ ಮುಖಾಂತರ ಎಲ್ಲರಿಗೂ ಕಳಿಸಿದ್ದೇವೆ ಎಂದು ಉತ್ತರ ಹೇಳುತ್ತಿದ್ದಾರೆ.

ಎಲ್ಲಾ ರೈತ ಬಾಂಧವರು ಸಾರ್ವಜನಿಕ ಗ್ರಾಹಕರು ಆಂಡ್ರಾಯ್ಡ್ ಮೊಬೈಲ್ ಇರುವುದಿಲ್ಲ ಸರ್? ಮಾಹಿತಿ ಕೊರತೆಯಿಂದ ಜನರು ಸೇರಲು ಸಾಧ್ಯವಿಲ್ಲ ಎಂದು ಪತ್ರಕರ್ತರು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡರು ಹಾಗೂ ರೈತ ಮಹಾಂತೇಶ ಹೂಗಾರ ಮಾತನಾಡಿ ಕಾರ್ಯ ಮತ್ತು ಪಾಲನ ಉಪ ವಿಭಾಗ ಕಚೇರಿಯಲ್ಲಿ ವಿದ್ಯುತ್ ಗ್ರಾಹಕರ ಕುಂದು ಕೊರತೆಯ ಸಭೆ ಏರ್ಪಡಿಸಿರುವುದು ನಮಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ.

ನಮ್ಮ ಕುಕುನೂರು ತಾಲೂಕಿನಲ್ಲಿ ಹತ್ತಲವಾರು ಸಮಸ್ಯೆಗಳಿದ್ದು ಅಧಿಕಾರಿಗಳು ಕುಂದು ಕೊರತೆ ಸಭೆಯನ್ನು ಏರ್ಪಡಿಸುವುದು ನಾಮಕಾವಷ್ಟೇ ಬೇಜವಾಬ್ದಾರಿ ಎದ್ದು ತೋರುತ್ತದೆ. ಇಲಾಖೆಯು ಇಂತಹ ಕುಂದು ಕೊರತ ಸಭೆಯನ್ನ ಮೊದಲು ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ಸರಿಯಾಗಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ರೈತ ಮುಖಂಡರಾದ ಕಲ್ಲೇಶ ಬಿ. ಕ್ಯಾದಗುಂಪಿ ಮಾತನಾಡಿ ಇಂದು ಸಾರ್ವಜನಿಕ ಗ್ರಾಹಕರ ಕುಂದು ಕೊರತೆ ಸಭೆಯನ್ನು ಆಯೋಜಿಸಿದ್ದು ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾದ ಅಧಿಕಾರಿಗಳು ವಿವಿಧ ಗ್ರಾಮಗಳಲ್ಲಿ ನಾನಾ ರೀತಿಯ ವಿದ್ಯುತ್ ಸಮಸ್ಯೆಗಳ ಸರಮಾಲೆ ಇದ್ದು ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಿಂದ ಸಾರ್ವಜನಿಕ ಗ್ರಾಹಕರಿಗೆ ಸಭೆ ಏರ್ಪಡಿಸುವ ಬಗ್ಗೆ ಮಾಹಿತಿ ನೀಡಬೇಕಾಗಿದೆ.

ನೆಪ ಮಾತ್ರಕ್ಕೆ ಮೊಬೈಲ್ ನಲ್ಲಿ ಕುಂದು ಕೊರತೆ ಸಭೆ ಇದೆ ಎಂದು ಮೆಸೇಜ್ ಹಾಕಿ ಸಾರ್ವಜನಿಕರಿಗೆ ಮಾಹಿತಿನೇ ಇಲ್ಲದಂತಾಗಿ ಗ್ರಾಮದಲ್ಲಿ ಅನೇಕ ಸಮಸ್ಯೆಗಳಿದ್ದರೂ ಸಹಿತ ಗ್ರಾಹಕರಿಗೆ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ತೋರುತ್ತಿದೆ ಎಂದು ಹೇಳಿದರು.

ಇನ್ನು ಮುಂದಾದರೂ ಅಧಿಕಾರಿಗಳು ಇಂತಹ ಕುಂದು ಕೊರತೆಗಳ ಬಗ್ಗೆ ಸಭೆಯನ್ನು ಕರೆದಾಗ ಗ್ರಾಹಕರಿಗೆ ಮುಟ್ಟುವ ಹಾಗೆ ಪತ್ರಿಕಾ ಪ್ರಕಟಣೆ ಅಥವಾ ವಾಹನಗಳಲ್ಲಿ ಪ್ರಚಾರ ಮಾಡಬೇಕಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯ ಅಭಿಯಂತರರು ಜೆಸ್ಕಾಂ ಉಪವಿಭಾಗ ಅಧಿಕಾರಿ ಎಂ ನಾಗರಾಜ, ಚಂದ್ರಶೇಖರ್ ಪಣಿ , ರಮೇಶ ಗಜಕೋಶ, ಕಲ್ಲೇಶ ಬಿ. ಕ್ಯಾದಗುಂಪಿ, ಇಲಾಖೆಯ ಅಧಿಕಾರಿ ವರ್ಗದವರು ಇತರರು ಇದ್ದರು.

ಚನ್ನಯ್ಯ ಹಿರೇಮಠ ಕುಕನೂರು ತಾಲೂಕ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!