ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ನಾವೆಲ್ಲರೂ ವಿಜೃಂಭಣೆಯಿಂದ ಆಚರಿಸೋಣ :- ಹೆಚ್. ಪ್ರಾಣೇಶ
ಕೊಪ್ಪಳ:ಸತ್ಯಮಿಥ್ಯ (ಅ -19).
ಜಿಲ್ಲೆ, ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಹಸಿಲ್ದಾರ್ ಹೆಚ್ .ಪ್ರಾಣೇಶ ಜಯಂತಿ ಕಾರ್ಯಕ್ರಮವನ್ನು ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಆಚರಿಸಬೇಕು ಮತ್ತು ಸಮಾಜದ ಮುಖಂಡರು ನಾವೆಲ್ಲರೂ ಅತ್ಯಂತ ಸಡಗರ ಸಂಭ್ರಮದಿಂದ ತಹಸಿಲ್ದಾರ್ ಕಾರ್ಯಾಲಯದಲ್ಲಿ ಮತ್ತು ಚೆನ್ನಮ್ಮ ವೃತ್ತದಲ್ಲಿ ಪೂಜೆಯನ್ನು ಸಮರ್ಪಿಸಿ ಆಚರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ವೀರಣ್ಣ ಅಣ್ಣಿಗೇರಿ ಮಾತನಾಡುತ್ತಾ ಮೊನ್ನೆ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದು. ಆದ್ದರಿಂದ ಇಂದು 19ರಂದು ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಿದ್ದು ಎಲ್ಲ ಅಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಹಾಜರಿದು. ಅಕ್ಟೋಬರ್ 23 ಬುಧವಾರ ರಂದು ಬೆಳಿಗ್ಗೆ ಎಂಟು ಗಂಟೆಗೆ ಸಮಾಜದ ವತಿಯಿಂದ ಚೆನ್ನಮ್ಮ ವೃತ್ತದಲ್ಲಿ ಪೂಜಾ ಮತ್ತು ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಿ ನಂತರ 10.30 ಗಂಟೆಗೆ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಇಲಾಖೆಯ ವತಿಯಿಂದ ಮತ್ತು ಸಮಾಜದವರಿಂದ ಪೂಜೆಯನ್ನು ಸಮರ್ಪಿಸಲಾಗುತ್ತದೆ ನಂತರ ಕುಕುನೂರು ಮತ್ತು ಯಲಬುರ್ಗಾ ತಾಲೂಕುಗಳ ಸಹಯೋಗದಲ್ಲಿ ಯಲಬುರ್ಗಾ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪೂಜೆ ಮತ್ತು ಕಾರ್ಯಕ್ರಮಗಳು ನೆರವೇರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುರಳಿಧರ್ ರಾವ್ ಕುಲಕರ್ಣಿಗ್ರೇಡ್ ಟು ತಹಸೀಲ್ದಾರರು,ಈರಣ್ಣ ಅಣ್ಣಿಗೇರಿ, ಗೆದೆಗಪ್ಪ ಪವಾದಷೆಟ್ಟಿ, ಪ್ರಭು ಹಳ್ಳಿ, ರಾಮನಗೌಡ, ಮಲ್ಲಿಕಾರ್ಜುನ ಕುಡ್ಲೂರ್, ಕಳಕಪ್ಪ ಕ್ಯಾದಗುಂಪಿ, ಶರಣಪ್ಪ ವೀರಾಪುರ, ಅಂದಪ್ಪ ಹುರಳಿ, ಮಹದೇವಪ್ಪ ಕುರಿ, ಚಂದ್ರು ಬಗನಾಳ, ವೀರೇಶ ಸಬರದ, ಲಿಂಗನಗೌಡ. ವೀರಣಗೌಡ ಮಾಲಿಪಾಟೀಲ, ಮಂಜುನಾಥ ಹೀರೆಗೌಡರ, ಬಸಣ್ಣ ಇಬೇರಿ, ಶರಣಪ್ಪ ಚೆಂಡುರು. ಬಸಪ್ಪ ನಾಡಗೌದ್ರ, ಸಿದ್ದಪ್ಪ ಸಬರದ, ಕಲಕೇಶ ಹತ್ತಿಕಟಗಿ, ಕಲ್ಲಪ್ಪ ಕಿವಡಿ. ವಿವಿಧ ಇಲಾಖೆಗಳ ಅಧಿಕಾರಿಗಳು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.