ಇಂದಿನಿಂದ ಬಸವ ಪುರಾಣ ಕಾರ್ಯಕ್ರಮ ಪ್ರಾರಂಭ. ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಲು ಮನವಿ.
ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ. ಬಸವ ಪುರಾಣ ಕಾರ್ಯಕ್ರಮ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ..
ಇಂದಿನಿಂದ ಬಸವ ಪುರಾಣ ಕಾರ್ಯಕ್ರಮ ಪ್ರಾರಂಭ. ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಲು ಮನವಿ.
ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ. ಬಸವ ಪುರಾಣ ಕಾರ್ಯಕ್ರಮ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ..
ಗಜೇಂದ್ರಗಡ: ಸತ್ಯಮಿಥ್ಯ (ನ -25).
ಪಟ್ಟಣದಲ್ಲಿನ ಎ.ಪಿ.ಎಂ.ಸಿ. ಎದುರಿನ ಬಯಲು ಜಾಗೆಯಲ್ಲಿ ದಿನಾಂಕ 25/11/2024 ರಿಂದ 26/12/2024 ರ ವರೆಗೆ ಬಸವ ಪುರಾಣ ಆರಂಭವಾಗಲಿದೆ.
ಇಂದು ಮದ್ಯಾಹ್ನ 2:30 ಗಂಟೆಗೆ ಕುಂಬಾರ ಓಣಿಯಲ್ಲಿರುವ ಅನ್ನದಾನೇಶ್ವರ ಮಠದಿಂದ ಬಸವಜ್ಯೋತಿ ಮೆರವಣಿಗೆ ಹೋರಾಡಲಿದೆ.ಬಸವೇಶ್ವರ ಸರ್ಕಲ್, ದುರ್ಗಾ ಸರ್ಕಲ್, ಜೋಡು ರಸ್ತೆ ಮೂಲಕ ಸಾಯಂಕಾಲ ಪುರಾಣ ಕಾರ್ಯಕ್ರಮದ ವೇದಿಕೆಯನ್ನು ತಲುಪಲಿದೆ.
ಈ ಹಿನ್ನಲೆಯಲ್ಲಿನ ಬಸವ ಪುರಾಣದ ಪ್ರಾರಂಭೋತ್ಸವದಲ್ಲಿ ನಾಡಿನ ಹೆಸರಾಂತ ಶ್ರೀಗಳಾದ ಪರಮ ಪೂಜ್ಯಶ್ರೀ ಮ.ನಿ.ಪ್ರ ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು ಮೈಸೂರು ಸಂಸ್ಥಾನಮಠ-ಗಜೇಂದ್ರಗಡ ಹಾಗೂ ಪೂಜ್ಯಶ್ರೀ ಮ.ನಿ.ಪ್ರ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಭಾವೈಕ್ಯತಾ ಸಂಸ್ಥಾನಮಠ, ಶಿರಹಟ್ಟಿ ಪೂಜ್ಯರ ಲಿಂಗ ಹಸ್ತದಿಂದ ಉದ್ಘಾಟನೆ ಹಾಗೂ ದಿವ್ಯ ಸಾನಿಧ್ಯವಹಿಸಲಿದ್ದು .
ಈ ಭಾಗದ ಹೆಸರಾಂತ ಪೂಜ್ಯಶ್ರೀ ಮ.ನಿ.ಪ್ರ ಚನ್ನಬಸವ ಮಹಾಸ್ವಾಮಿಗಳು ಶಾಖಾ ಶಿವಯೋಗಮಂದಿರ ನಿಡಗುಂದಿಕೊಪ್ಪ ನೇತೃತ್ವದಲ್ಲಿ ಮತ್ತು ಶ್ರೀ ಜಿ. ಎಸ್. ಪಾಟೀಲ, ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗುತ್ತಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಕಳಕಪ್ಪ ಜಿ. ಬಂಡಿ ಮಾಜಿ ಸಚಿವರು, ಗಜೇಂದ್ರಗಡ ಇವರು ವಹಿಸಲಿದ್ದು,
ಈ ನಾಡಿನ ಅನೇಕ ಮಹಾನ ಚೇತನ್ ಶ್ರೀಗಳಾದ ಪೂಜ್ಯಶ್ರೀ ಮ.ನಿ.ಪ್ರ ಕೊಟ್ಟೂರು ಮಹಾಸ್ವಾಮಿಗಳು ಶ್ರೀ ಸಂಗನಬಸವೇಶ್ವರಮಠ, ದರೂರು ಪೂಜ್ಯಶ್ರೀ ಮ.ನಿ.ಪ್ರ. ನಿರಂಜನ ಪ್ರಭು ಮಹಾಸ್ವಾಮಿಗಳು ಶ್ರೀ ಒಪ್ಪತ್ತೇಶ್ವರ ಸಂಸ್ಥಾನಮಠ, ಗರಗನಾಗಲಾಪೂರ ಪೂಜ್ಯಶ್ರೀ ಸಿದ್ದಲಿಂಗ ದೇಶಿಕರು ವಿರಕ್ತಮಠ, ಸೋಮಸಮುದ್ರ ಪೂಜ್ಯಶ್ರೀ ಮರಿಕೊಟ್ಟೂರು ದೇಶಿಕರು, ಶ್ರೀಧರಗಡ್ಡೆ ಪೂಜ್ಯಶ್ರೀ ವಿಶ್ವೇಶ್ವರ ದೇವರು, ಸಂಗನಾಳ ಇವರ ಸಮ್ಮುಖದಲ್ಲಿ ನಾಡಿನ ಖ್ಯಾತ ಪ್ರವಚನಕಾರರು,ಅನುಭಾವಿಗಳಾದ ಶ್ರೀ ಅನ್ನದಾನ ಶಾಸ್ತಿಗಳು ಗುಡೂರ. ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ. ಇವರಿಗೆ ಸಂಗೀತ ಬಳಗ : ಶ್ರೀ ಸಂಗಮೇಶ ನೀಲಾ ಸಾ. ಸ್ವಂತ. ವಾಯಲಿನ : ಶ್ರೀ ಷಣ್ಮುಖಯ್ಯ ಕಂಚಿನೆಗಳೂರ ತಬಲಾ : ಶ್ರೀ ಸಿದ್ದೇಶಕುಮಾರ ಲಿಂಗನಬಂಡಿ ಸಭಾ ನಿರೂಪಕರಾಗಿ ಶ್ರೀ ಎಫ್. ಎನ್. ಹುಡೇದ ಉಪನ್ಯಾಸಕರು ಶ್ರೀ ಎಸ್.ಎ.ಪಿ.ಯು.ಕಾಲೇಜ್ ನರೇಗಲ್ ಇವರು ನೆರವೆರಿಸುವರು.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶೋಭೆ ತರಲು ಬಸವ ಪುರಾಣದ ಸಮಿತಿಯ ಸರ್ವ ಸದಸ್ಯರುಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ವರದಿ : ಚನ್ನು. ಎಸ್.