ಸೌಹಾರ್ದತೆಯ ಬಸವ ಪುರಾಣಕ್ಕೆ ಮುಸ್ಲಿಂ ಭಾಂದವರಿಗೆ ಆಹ್ವಾನ.
ಸರ್ವ ಧರ್ಮಗಳನ್ನು ಸೌಹಾರ್ದ ಮತ್ತು ಸಮಾನತೆ ಮೂಲಕ ಬೆಸೆಯುವ ಕೊಂಡಿ ಬಸವ ಪುರಾಣ : ಮುಪ್ಪಿನ ಬಸವಲಿಂಗ ಶ್ರೀ.
ಸೌಹಾರ್ದತೆಯ ಬಸವ ಪುರಾಣಕ್ಕೆ ಮುಸ್ಲಿಂ ಭಾಂದವರಿಗೆ ಆಹ್ವಾನ.
ಜಾಮೀಯ ಮಸೀದಿಗೆ ಆಗಮಿಸಿದ ಹಾಲಕೇರಿಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು.
ಗಜೇಂದ್ರಗಡ: ಸತ್ಯಮಿಥ್ಯ (ನ -೨೨).
ಅನ್ನದಾನೇಶ್ವರ ಮಠವು ಸರ್ವ ಜನಾಂಗದ ಏಳಿಗೆಗೆ ಶ್ರಮಿಸಿದ ಧರ್ಮ ಕ್ಷೇತ್ರವಾಗಿದೆ.ಇದೇ ನವೆಂಬರ್ 25 ರಿಂದ ಡಿಸೆಂಬರ್ 26 ರವರೆಗೆ ಪಟ್ಟಣದಲ್ಲಿ ನಡೆಯುವ ಬಸವ ಪುರಾಣವು ನಡೆಯಲಿದೆ. ಈ ಕಾರ್ಯಕ್ರಮ ಸರ್ವ ಧರ್ಮಗಳಲ್ಲಿ ಸೌಹಾರ್ದತೆಯನ್ನು ಬೆಸೆಯುವ ಮೂಲಕ ಸಮಾನತೆ ಸಂದೇಶ ಸಾರಲಿದೆ ಎಂದು ಹಾಲಕೇರಿಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದರು.
ನಗರದ ಜಾಮೀಯ ಮಸೀದಿಗೆ ಆಗಮಿಸಿ ಬಸವ ಪುರಾಣಕ್ಕೆ ಮುಸ್ಲಿಂ ಭಾಂದವರಿಗೆ ಆಹ್ವಾನ ನೀಡಿ ಅವರು ಮಾತನಾಡಿದರು.
ಈ ಪುರಾಣದ ಮುಖ್ಯ ಉದ್ದೇಶವೇ ಸಮಾಜದಲ್ಲಿ ಸಮಾನತೆ ಸಹಿಷ್ಣುತೆ ಹಾಗೂ ಸೌಹಾರ್ದತೆಯ ಕೊಂಡಿಯನ್ನು ಬಲಪಡಿಸುವುದಾಗಿ ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ ಸಿದ್ದಣ್ಣ ಬಂಡಿ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮಲ್ಲಿನ ಸೌಹಾರ್ದತೆಯ ಬೆಸುಗೆಯನ್ನು ಮುಂದಿನ ಯುವ ಪೀಳಿಗೆಗೆ ಹಾಗೂ ಸಮಾಜಕ್ಕೆ ಒಂದು ಮಾದರಿಯಾಗುವಂತೆ ಈ ಪುರಾಣವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪುರಸಭೆ ಸದಸ್ಯ ರಾಜು ಸಾಂಗ್ಲೀಕಾರ, ಟೆಕ್ಕದ ದರ್ಗಾದ ಹಜರತ್ ನಿಜಾಮುದ್ದಿನ ಮಕಾನದಾರ ಮಾತನಾಡಿದರು.
ಈ ವೇಳೆ ಅಂಜುಮನ್ ಇಸ್ಲಾಂ ಕಮೀಟಿಯ ವತಿಯಿಂದ ಹಾಲಕೇರಿಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳಿಗೆ ಸನ್ಮಾನಿಸಲಾಯಿತು.
ಜಾಹಿರಾತು:16 ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಭಕೋರಿದ ಶ್ರೀ ಈರಣ್ಣ ಕಡಾಡಿ ಸಂಸದರು ರಾಜ್ಯಸಭಾ
ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಚೇರಮನ್ನ ಹಸನಸಾಬ ತಟಗಾರ, ಮೌಲಾನ ಶಾಹೀದ ರಜಾ, ಸುಭಾನಸಾಬ ಆರಗಿದ್ದಿ, ದಾದು ಹಣಗಿ, ಮಾಸುಮಲಿ ಮದಗಾರ, ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್, ಶರಣಪ್ಪ ರೇವಡಿ, ನಾಸೀರ ಸುರಪುರ, ಅಶ್ರಫ ಅಲಿ ಗೋಡೇಕಾರ, ಕಸಾಪ ಅಧ್ಯಕ್ಷ ಎ ಪಿ ಗಾಣಗೇರ, ಸೇರಿದಂತೆ ಸಮಾಜ ಭಾಂದವರು ಉಪಸ್ಥಿತರಿದ್ದರು. ಅಂಜುಮನ್ ಇಸ್ಲಾಂ ಕಮೀಟಿ ನಿರ್ದೇಶಕ ದಾವಲಸಾಬ ತಾಳಿಕೋಟಿ ನಿರೂಪಿಸಿದರು.
ವರದಿ : ಚನ್ನು. ಎಸ್.