ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಸಂವಿಧಾನ ದಿನ ಆಚರಣೆ.
ಗಜೇಂದ್ರಗಡ:ಸತ್ಯಮಿಥ್ಯ (ನ -26)
ನಗರದ ಸೈನಿಕ ನಗರದ ಹಿಂಬಾಗದಲ್ಲಿನ ಬ್ರೈಟ್ ಬಿಗಿನಿಂಗ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನವನ್ನು ಪೀಠಿಕೆಯನ್ನು ಓದುವ ಮೂಲಕ ಆಚರಣೆ ಮಾಡಲಾಯಿತು.
ಬಳಿಕ ಬ್ರೈಟ್ ಬಿಗಿನಿಂಗ್ ಪೂರ್ವ ಪ್ರಾಥಮಿಕ ಶಾಲೆಯ ಕಾರ್ಯದರ್ಶಿ ನಾಜೀಯಾ ಮುದಗಲ್ ಮಾತನಾಡಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಭವ್ಯ ಭಾರತದ ಭಾವಿ ಪ್ರಜೆಗಳು ಆಗಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಹೀನಾಕೌಸರ ಅರಳಿಕಟ್ಟಿ, ಅನುಷಾ ತಳವಾರ, ಅಮೃತಾ ಬದಿ, ಶಬೀನಾ ಬೆಳ್ಳಟ್ಟಿ, ಸಾವಿತ್ರಿ ಹಾವೇರಿ, ಪುಷ್ಪಾ ಬೋನೇರಿ, ರವಿ ನಿಡಗುಂದಿ, ಕಿರಣ ನಿಡಗುಂದಿ ಸೇರಿದಂತೆ ಅನೇಕರು ಇದ್ದರು.
ವರದಿ : ಚನ್ನು. ಎಸ್.