ಎಲ್ಲ ರಂಗಗಳಲ್ಲಿ ನೈತಿಕ ಮೌಲ್ಯಗಳ ಕುಸಿತ.ಪುನರ್ ನಿರ್ಮಾಣವಾಗಬೇಕು – ಡಾ. ಲಿಂಗರಾಜ ಅಂಗಡಿ ಅಭಿಮತ.
ಹುಬ್ಬಳ್ಳಿ: ಸತ್ಯಮಿಥ್ಯ (ಅಗಸ್ಟ್ -27).
ಪ್ರಚಲಿತ ವಿದ್ಯಮಾನಗಳನ್ನು ನೋಡಿದರೆ ಎಲ್ಲ ರಂಗಗಳಲ್ಲೂ ನೈತಿಕ ಮೌಲ್ಯಗಳು ಕುಸಿದಿವೆ.ಈ ನಿಟ್ಟಿನಲ್ಲಿ ನೈತಿಕ ಮೌಲ್ಯಗಳನ್ನು ಪುನರ್ ನಿರ್ಮಿಸಬೇಕಾಗಿದೆ. ಈ ದಿಶೆಯಲ್ಲಿ ಒಳ್ಳೆಯ ವಾತಾವರಣವನ್ನು ನಿರ್ಮಿಸಲು ನಮ್ಮ ಮನೆಯಿಂದಲೇ ಈ ಪ್ರಕ್ರೀಯೆ ಪ್ರಾರಂಭವಾಗಬೇಕು ಎಂದು ಡಾ. ಲಿಂಗರಾಜ ಅಂಗಡಿಯವರು ನುಡಿದರು.
ಅವರು ಪ್ರೋಬಸ್ ಕ್ಲಬ್ ಹುಬ್ಬಳ್ಳಿ ಕೇಂದ್ರ , ವಿನಾಯಕ ಪ್ಲಾಟ್, ಕೇಶ್ವಾಪೂರ ದಲ್ಲಿಹಮ್ಮಿಕೊಳ್ಳಲಾದ ಸಮಾಜದಲ್ಲಿ ನೈತಿಕ ಮೌಲ್ಯಗಳು ಹಾಗೂ ಬದ್ಧತೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ. ಪ್ರತಿಯೊಬ್ಬ ತಂದೆ ತಾಯಿ ತಮ್ಮ ಮಕ್ಕಳಿಗೆ ಅತ್ಯುತ್ತಮ ಸೇವೆ ಮಾಡಿದ ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ಡಾ. ಬಿ ಆರ್ ಅಂಬೇಡ್ಕರ್, ಡಾ. ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ತಿಳಿಸಿಕೊಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಪ್ರೋಭಸ್ ಕ್ಲಬ್ ಅಧ್ಯಕ್ಷ ಶ್ರೀ ಎಮ್.ಬಿ.ಬಾಗಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಮತಿ ಪದ್ಮಾವತಿ ಮುಮ್ಮಿಗಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಡಾ.ರಮೇಶ್ ಅಂಗಡಿ ಅತಿಥಿಗಳ ಪರಿಚಯ ಮಾಡಿದರು. ಜಯಶ್ರೀ ಮಂಗಳೂರು ಪ್ರಾರ್ಥಿಸಿದರು. ಎ ಆರ್ ರೇಶ್ಮೆ ವಂದಿಸಿದರು .ಕೆ ಪಿ ಪಟದಾರಿ ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಈ ತಿಂಗಳ ಜನಿಸಿದ ಕೆಲವು ಹಿರಿಯರನ್ನು ಅವರ ಹುಟ್ಟು ಹಬ್ಬದ ನಿಮಿತ್ತ ಸನ್ಮಾನ ಮಾಡಲಾಯಿತು.ಉಪಾಧ್ಯಕ್ಷ ಪಂಚಾಕ್ಷರಿ ಹಿರೇಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು., ಎಮ್ ಆರ್ ವೆರ್ಣೇಕರ್, ವ್ಹಿ ಡಿ ಪಾಟೀಲ, ಶ್ರೀಮತಿ ಕಿರಣ ನಾಯಕ , ಆರ್ ವಿ ನಾಗಮೂಳೆ, ಈರಣ್ಣ ಬಡಿಗೆರ, ಎಸ್ ಪಿ ಹಿರೇಮಠ, ರೀಟಾ ಹಬೀಬ್, ಲಲಿತಾ ಸಾಲಿಮಠ, ಶಶಿಧರ ಮುಖಂಡಮಠ, ಅಮೃತಪ್ಪ ಶೆಟ್ಟರ್ , ಲಕ್ಷ್ಮೀ ಮಂಗಳವಾಡೆ, ಭವಾನಿ ಭಂಡಾರಿ, ವಿ ಎಮ್ ಅರವಟಗಿ, ವಿ ಆರ್ ಕಾಮಕರ, ಸಿ ಕೆ ಮರಿಗೌಡರ , ಮಂಗಲಾ ಬ್ಯಾಹಟ್ಟಿ ಮುಂತಾದವರು ಸಭಾಂಗಣದಲ್ಲಿ ಉಪಸ್ಥಿತರಿದ್ದರು.
ವರದಿ : ಸುನೀಲ.