ದುಶ್ಚಟಗಳನ್ನು ಬಿಟ್ಟು ಆರೋಗ್ಯವಂತರಾಗಿ – ಟಕ್ಕೆದ ಪೀಠಾಧಿಪತಿ.
ಮೃಗಶಿರಾ ಮಳೆ ಪ್ರವೇಶ ಸಂದರ್ಭದಲ್ಲಿ ನಮ್ಮ ದರ್ಗಾದ ವತಿಯಿಂದ ವಿಶೇಷವಾಗಿ ತಯಾರಿಸಿದ ಗುಳಿಗೆಗಳನ್ನು ವಿತರಣೆ
ಗಜೇಂದ್ರಗಡ – ಸತ್ಯ ಮಿಥ್ಯ ( ಜು -08).
ತಂಬಾಕು ಸೇವನೆಯಿಂದ ಅಸ್ತಮಾ, ಕೆಮ್ಮು ಸೇರಿದಂತೆ ಅನೇಕ ರೋಗಗಳು ಮನುಷ್ಯನನ್ನು ಆವರಿಸುತ್ತವೆ. ಆದ್ದರಿಂದ ಪ್ರತಿ ವರ್ಷ ಮೃಗಶಿರಾ ಮಳೆ ಪ್ರವೇಶ ಸಂದರ್ಭದಲ್ಲಿ ನಮ್ಮ ದರ್ಗಾದ ವತಿಯಿಂದ ವಿಶೇಷವಾಗಿ ತಯಾರಿಸಿದ ಗುಳಿಗೆಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಟಕ್ಕೆದ ದರ್ಗಾದ ಶ್ರೀ ಹಜರತ್ ಸಯ್ಯದ್ ನಿಜಾಮುದ್ದಿನ್ ಷಾ ಅಶ್ರಫಿ ಮಕಾನದಾರ ನುಡಿದರು.
ಅವರು ಮೃಗಶಿರಾ ಮಳೆ ಪ್ರವೇಶ ಸಂದರ್ಭದಲ್ಲಿ ಅಸ್ತಮಾ ಸೇರಿದಂತೆ ಶೀತಕ್ಕೆ ಸಂಬಂಧಿಸಿದಂತ ರೋಗಗಳ ನಿವಾರಣೆಗೆ ಪ್ರತಿ ವರ್ಷದಂತೆ ಈ ವರ್ಷವೂ ಗುಳಿಗೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಅಂದಾಜು 50 ವರ್ಷಗಳ ಇತಿಹಾಸವಿರುವ ಈ ದಿವ್ಯಔಷಧಿ ವಿತರಿಸುವ ಪರಂಪರೆಗೆ ಹಿರಿಯ ಶ್ರೀಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪ್ರಸ್ತುತ ಸಂದರ್ಭದಲ್ಲಿ ಭಕ್ತಿ ಪರಂಪರೆಗೆ ಜಾತಿಯ ಜಾಡ್ಯಾ ಅಂಟಿಕೊಂಡಿರುವುದು ಖೇದಕರ. ಆದರೆ ನಮ್ಮ ದರ್ಗಾ ಸರ್ವ ಧರ್ಮ ಸಮನ್ವಯತೆಯೊಂದಿಗೆ ಗುಳಿಗೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಔಷದಿಯಿಂದ ಮನುಷ್ಯನಿಗೆ ಅಂಟಿದ ಅಸ್ತಮಾ ಹೋಗಲಾಡಿಸುವುದರೊಂದಿಗೆ. ಸರ್ವಧರ್ಮದ ಭಕ್ತರೊಂದಿಗೆ ಅವಿನಾಭವ ಹೊಂದಿದೆ. ದುಶ್ಚಟಗಳಿಂದ ದೂರವಾಗಿ ಸಮೃದ್ಧಿ ಬದುಕನ್ನು ಕಟ್ಟಿಕೊಳ್ಳಿ ಮತ್ತು ಪರಿಸರ ಸಂರಕ್ಷಣೆ ಮಾಡಿ ಮನುಕುಲದ ಉದ್ದಾರವಾದಿತು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜು ಸಾಂಗ್ಲಿಕರ. ಟಕ್ಕೆದ ದರ್ಗಾ ಪರಂಪರೆ ಸರ್ವ ಧರ್ಮ ಸಮನ್ವಯತೆಯಿಂದ ಕೂಡಿದ್ದು ದಿವ್ಯ ಔಷದಿ ನೀಡುವ ಕಾರ್ಯಕ್ರಮ ದಶಮಾನದ ಇತಿಹಾಸವಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಶ್ರೀಧರ ಬಿದರಳ್ಳಿ, ರಫೀಕ ತೋರಗಲ್, ಪ್ರಭು ಚವಡಿ ದಾವಲಸಾಬ ತಾಳಿಕೋಟಿ, ಯು.ಆರ್.ಚನ್ನಮ್ಮನವರ ಸೇರಿದಂತೆ ನೂರಾರು ಭಕ್ತರು ಔಷಧ ಸೇವನೆ ಮಾಡಿದರು.
ವರದಿ : ಸುರೇಶ ಭಂಡಾರಿ.