ಸ್ಲಮ್ ಬೋರ್ಡ್ ಮನೆಗಳ ನಿರ್ಮಾಣದಲ್ಲಿ ಫಲಾನುಭವಿಗಳಿಗೆ ಮೋಸ – ಸರಿಪಡಿಸಲು ತಹಸೀಲ್ದಾರಗೆ ಮನವಿ.
ಗುತ್ತಿಗೆದಾರ ಮತ್ತು ಸರ್ಕಾರಿ ಅಧಿಕಾರಿಗಳು ಸೇರಿಕೊಂಡು ಮೋಸ.
ಗಜೇಂದ್ರಗಡ : ಸತ್ಯ ಮಿಥ್ಯ ( ಜು -08).
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿವತಿಯಿಂದ ನಿರ್ಮಾಣವಾಗುತ್ತಿರುವ 150 ಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾರ್ಯದಲ್ಲಿ ಫಲಾನುಭವಿಗಳಿಗೆ ಗುತ್ತಿಗೆದಾರ ಮತ್ತು ಸರ್ಕಾರಿ ಅಧಿಕಾರಿಗಳು ಸೇರಿಕೊಂಡು ಮೋಸ ಮಾಡುತ್ತಿದ್ದಾರೆ ಅದನ್ನು ಸರಿಪಡಿಸಿ ಎಂದು ತಹಸೀಲ್ದಾರರವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ವಿವಿಧ ಕೊಳಗೆರೆ ಗಳಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅನೇಕ ಮನೆಗಳು ನಿರ್ಮಾಣವಾಗುತ್ತಿದ್ದೂ. ಕಟ್ಟಡ ನಿರ್ಮಾಣ ಪ್ರಾರಂಭಗೊಂಡು ಎರಡು ವರ್ಷಗಳೇ ಗತಿಸಿದರು ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ ಮತ್ತು ಬಹಳಸ್ಟು ಮನೆಗಳನ್ನು ಫಲಾನುಭವಿಗಳೇ ಸ್ವಂತ ಹಣದಿಂದ ನಿರ್ಮಾಣ ಮಾಡಿಕೊಂಡಿದ್ದಾರೆ ಆದ್ದರಿಂದ ಈ ಪ್ರಕರಣ ಸೂಕ್ತ ತನಿಖೆಗೆ ಒಳಪಡಿಸಿ ಫಲಾನುಭವಿಗಳಿಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಫಲಾನುಭವಿ ಚನ್ನು ಸಮಗಂಡಿ. ಸರ್ಕಾರಿ ಅಧಿಕಾರಿ ಎಇಇ ಪ್ರವೀಣಕುಮಾರ ಮತ್ತು ಗುತ್ತಿಗೆದಾರರು ನಮ್ಮಲ್ಲಿ ಮನೆ ನಿರ್ಮಾಣಕ್ಕೆ ಕಾರ್ಮಿಕರ ಕೊರತೆ ಇರುವಿದರಿಂದ ನೀವೇ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಿ ಅದಕ್ಕೆ ಸಂಬಂಧಿಸಿದಂತೆ ತಗಲುವ ವೆಚ್ಚ ಮತ್ತು ಕಟ್ಟಡಕ್ಕೆ ಬೇಕಾಗುವ ಸಾಮಗ್ರಿಗಳನ್ನು ಕೊಡುತ್ತೇವೆ ಎಂದು ಮೌಕಿಕವಾಗಿ ಹೇಳಿದ್ದರು ಆದ್ದರಿಂದ ಬಾವುತೇಕ ಎಲ್ಲ ಫಲಾನುಭವಿಗಳು ಸಾಲ ಮಾಡಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದೇವೆ ಆದರೆ ಫಲಾನುಭವಿಗಳಿಗೆ ಸೇರಬೇಕಾದ ಹಣ ಮತ್ತು ಗೃಹ ನಿರ್ಮಾಣ ಸಾಮಗ್ರಿಗಳನ್ನು ನೀಡಿಲ್ಲ. ಫಲಾನುಭವಿ ಸ್ವಂತ ಹಣದಿಂದ ಕಟ್ಟಿಕೊಂಡು ಮನೆಗಳನ್ನು ಜಿಪಿಎಸ್ ಮಾಡಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿದೆ. ಅಲ್ಲದೇ ಇವರು ಮನೆ ನಿರ್ಮಾಣಕ್ಕೆಂದು ಕೊಟ್ಟ ಅಲ್ಪಪ್ರಮಾಣದ – ಸಿಮೆಂಟ್, ಜಲ್ಲಿ, ಕಬ್ಬಿಣ,ಮರಳು, ಸಿಮೆಂಟ್ ಇಟ್ಟಂಗಿ ಸಂಪೂರ್ಣ ಕಳಪೆಯದ್ದಾಗಿವೆ ಆದ್ದರಿಂದ ತಹಸೀಲ್ದಾರರರು, ತಾಲೂಕಿನ ಜನಪ್ರತಿನಿದಿನಗಳು ಮತ್ತು ನೂತನ ಸಂಸದರು ಗಮನಹರಿಸಿ ಬಡ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದರು.
ಭಾಷೆಸಾಬ್ ಕರ್ನಾಚಿ ಮಾತನಾಡಿ. ಮುಗ್ದ ಫಲಾನುಭವಿಗಳಿಗೆ ಗುತ್ತಿಗೆದಾರರು ಬಹಳಷ್ಟು ಮೋಸ ಮಾಡಿದ್ದಾರೆ. ಇವರನ್ನು ನಂಬಿ ಬ್ಯಾಂಕಗಳಲ್ಲಿ ಸಾಲ ಮಾಡಿ ಮನೆ ಕಟ್ಟಿಸಿಕೊಳ್ಳುತ್ತಿದ್ದೇವೆ. ದುಡ್ಡು ಕೊಡುತ್ತೇವೆ ಎಂದ ಗುತ್ತಿಗೆದಾರ ಇಂದು ನಾಳೆ ಎನ್ನುತ್ತಾ ವರ್ಷಗಳೇ ಗತಿಸಿದ್ದಾನೆ ನ್ಯಾಯ ಒದಗಿಸಬೇಕಾದ ಅಧಿಕಾರಿ ಪ್ರವೀಣ ಕೂಡಾ ಅವರ ಜೊತೆ ಶ್ಯಾಮಿಲಾಗಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ. 6.5 ಲಕ್ಷ ಸ್ಕೀಮ್ ನಲ್ಲಿ ಫಲಾನುಭವಿಗೆ ಕೇವಲ ಎರಡೇ ಲಕ್ಷದ ಕಟ್ಟಡಕ್ಕೆ ಬೇಕಾಗುವ ವಸ್ತುಗಳನ್ನು ನೀಡಿ ಕೈ ತೊಳೆದುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಫಲಾನುಭವಿ ಮೊದಲೇ ಡಿ ಡಿ ರೂಪದಲ್ಲಿ 1 ಲಕ್ಷ ಹಣ ನೀಡಿರುವುದರಿಂದ ಅವರ ಹಣ ಅವರಿಗೆ ನೀಡಿ ಗುತ್ತಿಗೆದಾರ ಮತ್ತು ಸರ್ಕಾರಿ ಅಧಿಕಾರಿಗಳು ಹಣ ಲಾಪಠಾಯಿಸುವ ಪ್ರಯತ್ನದಲ್ಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿರೂಪಾಕ್ಷ ಅಳವಂಡಿ, ಶಿವು ಸೈದಂ, ಯಲ್ಲಪ್ಪ ಪಪ್ತಿ, ಸುರೇಶ ಭಂಡಾರಿ, ಕೇಶವ ಅರವಾ, ಕಳಕಪ್ಪ ಕೆಂಚಿ, ರಾಚಪ್ಪ ನಾಲತ್ವಡ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ವರದಿ : ಸುರೇಶ .