ಸ್ಥಳೀಯ ಸುದ್ದಿಗಳು

ವ್ಯಾಸನಂದಿಹಾಳ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಸಂಭ್ರಮ.

Share News

ವ್ಯಾಸನಂದಿಹಾಳ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಸಂಭ್ರಮ.

ವ್ಯಾಸನಂದಿಹಾಳ:ಸತ್ಯಮಿಥ್ಯ (ಡಿ -08)

ಭಾರತೀಯ ಸಾಂಪ್ರದಾಯಕ ಹಬ್ಬಗಳಲ್ಲಿ ವಿಶಿಷ್ಟತೆಗಳನ್ನು ಒಳಗೊಂಡಂತೆ ಕಾರ್ತಿಕ ಮಾಸದಲ್ಲಿ ಮನದ ಕತ್ತಲನ್ನು ಕಳೆದು ದೀಪ ಬೆಳಗುವಂತೆ ತಮ್ಮ ಇಷ್ಟಾರ್ಥ ದೇವರಿಗೆ ದೀಪಗಳನ್ನು ಹಚ್ಚಿ ಬದುಕಿನಲ್ಲಿ ಕತ್ತಲೆಯನ್ನು ಕಳೆದು ಬೆಳಕು ಮೂಡುವಂತೆ ಕಾರ್ತಿಕ ಮಾಸವನ್ನು ಆಚರಣೆ ಮಾಡಲಾಗುವುದು.

ಅದರಂತೆಯೊ ನಿನ್ನೆ ವ್ಯಾಸನಂದಿಹಾಳ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೇವರಾಗಿರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕೋತ್ಸವವನ್ನು ಗ್ರಾಮದ ಎಲ್ಲ ಜನರು ದೇವಸ್ಥಾನದಲ್ಲಿ ದೀಪಗಳನ್ನು ತೆಗೆದುಕೊಂಡು ಹೋಗಿ ಶ್ರದ್ಧಾಭಕ್ತಿಯಿಂದ ದೇವಸ್ಥಾನದ ಎಲ್ಲಾ ಕಡೆಗೂ ದೀಪಗಳನ್ನು ಹಚ್ಚಿ ಕತ್ತಲೆ ಕಳೆದು ಬೆಳಕು ಮೂಡುವಂತೆ ಹಬ್ಬದ ಆಚರಣೆಯು ಸಡಗರ ಸಂಭ್ರಮದಿಂದ ಜರುಗಿತು.

ಕಾರ್ತಿಕೋತ್ಸವದ ಪ್ರಯುಕ್ತ ಶ್ರೀ ಆಂಜನೇಯ ದೇವಾಲಯವನ್ನು ತಳಿರು ತೋರಣ ಹಾಗೂ ವಿವಿಧ ಬಗೆಯ ಹೂಗಳಿಂದ ಶ್ರೀ ಆಂಜನೇಯ ದೇವರ ಮೂರ್ತಿಯನ್ನು ಕಂಗೊಳಿಸುವಂತೆ ಮಾಡಿ ಗ್ರಾಮದ ಎಲ್ಲ ಜನರು ಗ್ರಾಮದಲ್ಲಿ ಹಬ್ಬದ ವಾತಾವರಣದಲ್ಲಿ ಕಾರ್ತಿಕೋತ್ಸವವನ್ನು ಆಚರಣೆ ಮಾಡಿದರು.

ಕಾರ್ತಿಕೋತ್ಸವದ ವಿಶೇಷತೆಯನ್ನುವಂತೆ ಹಬ್ಬದ ಲ್ಲಿ ಮಕ್ಕಳು ದೀಪವನ್ನು ಬೆಳಗುವುದರ ಮೂಲಕ ಕಾರ್ತಿಕೋತ್ಸವದ ಆಚರಣೆಗೆ ಅರ್ಥಪೂರ್ಣವಾಗಿ ಜರುಗುವಂತೆ ಗ್ರಾಮದಲ್ಲಿ ಹಿರಿಯರ ಮಾರ್ಗದರ್ಶನದಂತೆ ಮಕ್ಕಳು ಕಾರ್ತಿಕದಲ್ಲಿ ದೀಪವನ್ನು ಹಚ್ಚಿರುವುದು ಹಬ್ಬದ ಸಂಸ್ಕೃತಿಯನ್ನು ತಿಳಿಸುವಂತೆ ಗ್ರಾಮದಲ್ಲಿ ಮಹಿಳೆಯರು ಹಾಗೂ ಹಿರಿಯರು ಮಾಡಿದರು.

ಗ್ರಾಮದಲ್ಲಿ ಕಾರ್ತಿಕೋತ್ಸವದ ಪ್ರಯುಕ್ತ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಒಳಗೊಂಡಂತೆ ಅರ್ಥಪೂರ್ಣವಾದ ಕಾರ್ತಿಕ ಉತ್ಸವವನ್ನು ಆಚರಣೆಯನ್ನು ಮಾಡಿದರು.ಕಾರ್ತಿಕೋತ್ಸವದ ಪ್ರಯುಕ್ತ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.

ಗ್ರಾಮದಲ್ಲಿ ಶ್ರೀ ಆಂಜನೇಯ ದೇವಾಲಯದಲ್ಲಿ ಇಂದು ಕಾರ್ತಿಕೋತ್ಸವದ ಪ್ರಯುಕ್ತ ಮನೆಯಿಂದ ಶ್ರೇಷ್ಠ ಮಣ್ಣಿನ  ಪಣತಿಗಳನ್ನು ತೆಗೆದುಕೊಂಡು ಹೋಗಿ ಆರಾಧ್ಯ ದೇವರಾಗಿರುವ ಶ್ರೀ ಆಂಜನೇಯನಿಗೆ ವಿಶೇಷ ಪೂಜೆಯನ್ನು ಸಲ್ಲಿಸುವುದರೊಂದಿಗೆ ಬದುಕಿನಲ್ಲಿ ಕತ್ತಲೆಯ ಅಂಧಕಾರವನ್ನು ಕಳೆದು ದೀಪವನ್ನು ಬೆಳಗುವಂತೆ ನಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ದೇವಾಲಯದ ಸುತ್ತಲೂ ಶ್ರೇಷ್ಠ ಮಣ್ಣಿನ ಪಣತಿಗಳನ್ನು ಹಚ್ಚುವುದರ ಮೂಲಕ ಹಾಗೂ ಗ್ರಾಮದ ಚಿನ್ನಣರೊಂದಿಗೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದೆವು.

ಗ್ರಾಮದ ಮಹಿಳೆ: ಅನ್ನಪೂರ್ಣ ಕಟಗೇರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!