ಸ್ಥಳೀಯ ಸುದ್ದಿಗಳು

ಪ್ರವಚನ ಆಲಿಸುವುದರಿಂದ ಮನಸೊಲ್ಲಾಸ – ವಿಜಯಮಹಾಂತ ಶ್ರೀ.

Share News

ಪ್ರವಚನ ಆಲಿಸುವುದರಿಂದ ಮನಸೊಲ್ಲಾಸ – ವಿಜಯಮಹಾಂತ ಶ್ರೀ.

ಗಜೇಂದ್ರಗಡ : ಸತ್ಯಮಿಥ್ಯ (ಜು-26).

ಆದುನಿಕ ಭರಾಟೆಯಲ್ಲಿ ಆದ್ಯಾತ್ಮಿಕ ವಿಚಾರಗಳು ನೇಪತ್ಯಕ್ಕೆ ಸರಿಯುತ್ತಿವೆ. ಆದ್ದರಿಂದ ಪ್ರವಚನ  ಗಳನ್ನು ಆಲಿಸಬೇಕು ಇದರಿಂದ ಸರಳ ಜೀವನನಡೆಸಲು ಸಾಧ್ಯವಾಗುತ್ತದೆ. ಪ್ರವಚನ ಕೇಳುವುದರಿಂದ ಮನಸ್ಸು ಉಲ್ಲಾಸದಲ್ಲಿರುತ್ತದೆ ಎಂದು ಮೈಸೂರು ಮಠದ ವಿಜಯಮಹಾಂತ ಮಹಾಸ್ವಾಮಿಜಿಗಳು ನುಡಿದರು.

ಪಟ್ಟಣದ ಮೈಸೂರುಮಠದಲ್ಲಿ ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ-ಉಣಚಗೇರಿ ವತಿಯಿಂದ ಶುಕ್ರವಾರ ಶ್ರಾವಣ ಮಾಸದ ಅಂಗವಾಗಿ ಶ್ರೀ ಹಾನಗಲ್ ಗುರುಕುಮಾರೇಶ್ವರ ಪುರಾಣದ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರಾವಣದಲ್ಲಿ ಆಧ್ಯಾತ್ಮದ ಜ್ಞಾನ ಯಜ್ಞದಲ್ಲಿ ತೇಲಿ. ನವವಿಧ ಶ್ರವಣ ಭಕ್ತಿಯಲ್ಲಿ ಸಾಗಿ ಪುರಾಣ, ಪುಣ್ಯ ಕಥೆ, ಶಾಸ್ತ್ರ. ಉತ್ತಮ ಪಾರಾಯಣ ಕೇಳಿ ಆನಂದಿಸಿ. ಶ್ರಾವಣ ಮಾಸ ಪವಿತ್ರ ಮಾಸ. ಶ್ರವಣವೆಂದರೆ ಒಳ್ಳೆಯದು ಕೇಳುವುದು. ಕೇಳಿದನ್ನು ಬದುಕಿನ ಭಾಗದಲ್ಲಿ ಭದ್ರವಾಗಿ ಇರಿಸಿಕೊಳ್ಳುವುದು. ಒಳ್ಳೆಯದನ್ನು ಕೇಳಿ ಕೆಟ್ಟದನ್ನು ತೊರೆಯಿರಿ.

ಎಲ್ಲರ ಒಳಿತು ಬಯಸುವುದೇ ಮಾನವ ಧರ್ಮ.ಸತ್ಕಾರ್ಯಗಳು ದೇವರಿಗೆ ಪ್ರೀತಿ. ಪುರಾಣಗಳು ಈ ನೆಲದ ಸತ್ವ.ಅವುಗಳ ಒಳ ನೋಟ ಪ್ರವಚನಕಾರರ ಧ್ವನಿಯಿಂದ ಹೀರಿಕೊಳ್ಳಿ. ಸ್ಮರಣ ಕಾವ್ಯಗಳ ಕಥಾ ಹಂದರದಲ್ಲಿ ಮಿನುಗಿ ಇಂದಿನ ಸಾಮಾಜಿಕ ತಲ್ಲಣಗಳ ಜಗದಲ್ಲಿ ಆಧ್ಯಾತ್ಮಿಕ ಸಿಂಚನ ಮನು ಕುಲಕ್ಕೆ ಅಗತ್ಯ. ಧರ್ಮ, ಸಂಪ್ರದಾಯವನ್ನು ಹತ್ತಿಕ್ಕಿ ನೆಮ್ಮದಿಯಿಂದ ಜೀವಿಸಲು ಸಾಧ್ಯವಿಲ್ಲ. ಧಾರ್ಮೀಕ ಮನಶಾಂತಿಯ ನೆಲೆಗಟ್ಟಿಗೆ ಭಕ್ತಿ ಪ್ರಸಾದ ಬೇಕು ಎಂದರು.

ವೀರಶೈವ-ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಮಾತನಾಡಿ, ಹಾನಗಲ್ ಕುಮಾರ ಶಿವಯೋಗಿಗಳು ಸಮಾಜಕ್ಕೆ ಮಠಾಧೀಶರನ್ನು ಕೊಟ್ಟರು.ಸುಂದರ ಸಮಾಜ ಕಟ್ಟುವುದೇ ಅವರ ಧ್ಯೇಯವಾಗಿತ್ತು. ಅದಕ್ಕಾಗಿ ಶಿವಯೋಗ ಮಂದಿರ ಸ್ಥಾಪಿಸಿ, ಅಲ್ಲಿ ಮಠಾಧೀಶರಾಗ ಬಯಸುವವರಿಗೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ತರಬೇತಿ ನೀಡಿದ್ದರು. ಈಗ ಪ್ರತಿ ಊರಲ್ಲೂ ಮಠಾಧೀಶರನ್ನು ಕಾಣುತ್ತಿರುವುದರ ಶ್ರೇಯ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.

ಪುರಾಣಿಕರಾದ ಮೈಸೂರಿನ ನಿರಂಜನ ದೇವರು, ಸಂಗೀತಗಾರರು ಸಂತೋಷ ಪಾಟೀಲ, ಸಿದ್ದಲಿಂಗೇಶ ಯತ್ನಳ್ಳಿ ಪುರಾಣ ನೆರವೇರಿಸಿದರು.

ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಪುರಾಣ ಸಮಿತಿಯ ಅಧ್ಯಕ್ಷ ದೇವಪ್ಪ ಮಡಿವಾಳರ, ಪ್ರಭು ಚವಡಿ, ಅಮರೇಶ ಗಾಣಿಗೇರ, ಎಸ್.ಎಸ್.ವಾಲಿ, ಕಲ್ಲಪ್ಪ ಸಜ್ಜನರ, ಉಮೇಶ ಮೆಣಸಗಿ, ಶಿವಕುಮಾರ ಕೊರಧಾನ್ಯಮಠ, ಶರಣಪ್ಪ ರೇವಡಿ, ನಾಗಯ್ಯ ಗೋಂಗಡಶೆಟ್ಟಿಮಠ, ವಿಜಯ ಬೂದಿಹಾಳ, ಬಸವರಾಜ ಚನ್ನಿ, ಬಸವರಾಜ ಶೀಲವಂತರ, ಕಳಕಯ್ಯ ಸಾಲಿಮಠ, ಶಿವಕುಮಾರ ಶಶಿಮಠ ಸೇರಿದಂತೆ ಇತರರು ಇದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!