ಗಜೇಂದ್ರಗಡ ಪುರಸಭೆ ಸ್ಥಾಯಿ ಕಮೀಟಿ ಚೇರಮನ್ನರಾಗಿ ಮುದಿಯಪ್ಪ ಮುಧೋಳ್ ಆಯ್ಕೆ.
ಗಜೇಂದ್ರಗಡ:ಸತ್ಯಮಿಥ್ಯ (ಅ -09).
ಗಜೇಂದ್ರಗಡ ಪುರಸಭೆ ಸ್ಥಾಯಿ ಕಮೀಟಿ ಚೇರಮನ್ನರಾಗಿ ಮುದಿಯಪ್ಪ ಮುಧೋಳ್ ಆಯ್ಕೆಯಾಗಿದ್ದಾರೆ.ಅಧಿಕೃತವಾಗಿ ಇಂದು ಪುರಸಭೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ವಹಿಸಿಕೊಂಡರು.
ಸೆಪ್ಟೆಂಬರ್ 3 ರಂದು ನಡೆದಿದ್ದ ಗಜೇಂದ್ರಗಡ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯಲ್ಲಿ ಮುದಿಯಪ್ಪ ಮುಧೋಳ್ ಪ್ರಮುಖ ಪಾತ್ರವಹಿಸಿದ್ದರು.
18 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಮುಧೋಳ್ ಕಳೆದ ತಿಂಗಳು ನಡೆದ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೇಯಲ್ಲಿ ಬಿಜೆಪಿ ಬಂಡಾಯ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು.
ಈ ಕುರಿತು ನಮ್ಮ ವರದಿಗಾರರೊಂದಿಗೆ ಮಾತನಾಡಿದ ಗಜೇಂದ್ರಗಡ ಪುರಸಭೆ ಸ್ಥಾಯಿ ಕಮೀಟಿ ನೂತನ ಅಧ್ಯಕ್ಷ ಮುದಿಯಪ್ಪ ಮುಧೋಳ್. ಪಕ್ಷ ಭೇದ ಮರೆತು ಗಜೇಂದ್ರಗಡ ಜನತೆಯ ಸೇವೆ ಮಾಡುತ್ತೇನೆ. ನನ್ನ ವ್ಯಾಪ್ತಿಗೆ ಬರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗಜೇಂದ್ರಗಡ ಅಭಿವೃದ್ಧಿಗೊಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಸುಭಾಸ್ ಮ್ಯಾಗೇರಿ, ಉಪಾಧ್ಯಕ್ಷರಾದ ಸವಿತಾ ಬೀದರಳ್ಳಿ,ಸಿದ್ದಣ್ಣ ಬಂಡಿ, ಶಿವರಾಜ ಘೋರ್ಪಡೆ, ಶ್ರೀಧರ ಬೀದರಳ್ಳಿ, ಬಸವರಾಜ ಹೂಗಾರ,ಎಚ್. ಎಸ್. ಸೋಂಪುರ,ಅರ್ಜುನ ರಾಠೋಡ್, ಹನಮಂತಪ್ಪ ಮುಧೋಳ್, ಸಿದ್ದಣ್ಣ ಚೋಳಿನ, ಮುತ್ತಣ್ಣ ಮ್ಯಾಗೇರಿ, ಯಲ್ಲಪ್ಪ ಬಂಕದ, ಶರಣಪ್ಪ ಉಪ್ಪಿನಬೆಟಗೇರಿ, ಶ್ರೀಮತಿ ವಿಜಯಾ ಮಳಗಿ,ಕೌಸರ್ ಬಾನು ಹುನಗುಂದ,ದ್ರಾಕ್ಷಾಯಣಿ ಚೋಳಿನ,ಲಕ್ಷ್ಮಿ ಮುಧೋಳ್, ಮುರ್ತುಜ ಡಾಲಯತ,ರಾಜು ಸಾಂಗ್ಲಿಕರ, ವೆಂಕಟೇಶ ಮುದಗಲ್, ಉಮೇಶ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.