ದಲಿತ ಸಂಘಟನೆಯಿಂದ ಪುರಸಭೆ ಸ್ಥಾಯಿ ಸಮಿತಿ ಚೇರಮನ್ನರಿಗೆ ಸನ್ಮಾನ.
ಜನತೆಯ ಸೇವೆಯನ್ನು ಪ್ರಮಾಣಿಕವಾಗಿ ಮಾಡುತ್ತೇನೆ : ಮುದಿಯಪ್ಪ ಮುಧೋಳ
ಗಜೇಂದ್ರಗಡ:ಸತ್ಯಮಿಥ್ಯ (ಅ -14).
ಗಜೇಂದ್ರಗಡ ಪುರಸಭೆ ಸ್ಥಾಯಿ ಸಮಿತಿಗೆ ನೂತನರಾಗಿ ಆಯ್ಕೆಯಾಗಿರುವ ಮುದಿಯಪ್ಪ ಮುಧೋಳ ಅವರಿಗೆ ಸೂರ್ಯ ಜೈಭೀಮ್ ಸೇನೆ ಗಜೇಂದ್ರ ತಾಲೂಕು ಹಾಗೂ ನಗರ ಘಟಕದ ಪದಾಧಿಕಾರಿಗಳನ್ನು ಸೋಮವಾರ ಸನ್ಮಾನಿಸಿದರು.
ಈ ವೇಳೆ ಕ್ರಾಂತಿಸೂರ್ಯ ಜೈಭೀಮ್ ಸೇನೆ ರಾಜ್ಯ ಸಂಚಾಲಕ ಪ್ರಕಾಶ ರಾಠೋಡ ಮಾತನಾಡಿ, ನಮ್ಮ ಸಂವಿಧಾನವು ನಮಗೆ ಅತ್ಯಂತ ಪವಿತ್ರವಾದ ಗ್ರಂಥವಾಗಿದೆ, ಇದು ನಮ್ಮ ಜೀವನ, ನಮ್ಮ ಸಮಾಜ, ನಮ್ಮ ಸಂಪ್ರದಾಯಗಳು, ನಮ್ಮ ಮೌಲ್ಯಗಳು ಮತ್ತು ನಮ್ಮ ಎಲ್ಲಾ ಸವಾಲುಗಳಿಗೆ ಪರಿಹಾರವಾಗಿದೆ. ಈ ಸಂವಿಧಾನದ ಸದ್ಗುಣಗಳು ಮೈಗೂಡಿಸಿಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಮ್ಮ ಸೇವೆ ಗಜೇಂದ್ರ ಪಟ್ಟಣಕ್ಕೆ ದೊರೆಯಲಿ ಎಂದು ಶುಭ ಹಾರೈಸಿದರು.
ಸ್ಥಾಯಿ ಸಮಿತಿಯ ಚೇರಮನ್ನರಾದ ಮುದಿಯಪ್ಪ ಮುಧೋಳ ಮಾತನಾಡಿ, ನಗರಸಭೆಯ ಯೋಜಿತ ಅಭಿವೃದ್ಧಿ ಕಾರ್ಯಗಳ ಮೇಲೆ ಏಕಕಾಲದಲ್ಲಿ ಒತ್ತು ನೀಡುವುದರೊಂದಿಗೆ ನಗರದ ಎಲ್ಲ ಶಾಲೆಗಳ ಸಮಸ್ಯೆಗಳಿಗೆ ಒತ್ತು ನೀಡುವುದರೊಂದಿಗೆ ಗಜೇಂದ್ರಗಡವನ್ನು ಪದವಿ, ಸುಂದರ, ಸ್ವಾಸ್ಥ್ಯ ನಗರವನ್ನಾಗಿ ಮಾಡಲು ಹೆಚ್ಚಿನ ಒತ್ತು ನೀಡಲಾಯಿತು. ಸಂಘಟಕರ, ಪ್ರಗತಿಪರ ಚಿಂತಕರ, ಸಾರ್ವಜನಿಕರ ಸಲಹೆ ಸಹಕಾರ ಪಡೆದು ಗಜೇಂದ್ರಗಡ ಪುರಸಭೆ ಹೆಚ್ಚಿನ ಜನಸ್ನೇಹಿ ಮಾಡುತ್ತೇನೆ.
ಇದೇ ಸಂದರ್ಭದಲ್ಲಿ ಜೈಭೀಮ್ ಸೇನೆಯ ತಾಲೂಕು ಅಧ್ಯಕ್ಷ ಕನಕಪ್ಪ ಕಲ್ಲೊಡ್ಡರ, ಫಕೀರಪ್ಪ ನಿಡಗುಂದಿ, ರವಿ ಗುಗ್ಗಲೋತ್ತರ, ಪ್ರಭು ನಿಡಗುಂದಿ, ಮುತ್ತು ರಾಠೋಡ, ಅಶೋಕ ಭಜೇಂತ್ರಿ, ಲಕ್ಷ್ಮಣ ಭಜೇಂತ್ರಿ, ಲಕ್ಷ್ಮಣ ಬಂಕದ, ರಮೇಶ ತಳವಾರ, ಗೋವಿಂದ ಮನ್ನೇರಾಳ, ಅಮಿತ್ ರವಿ ಪೂಜಾರ, ದುರಗಪ್ಪ ಮಾಳಗುಂದಿ, ಲೋಕಪ್ಪ ಮಾಳಗುಂದಿ, ಲೋಕಪ್ಪ ಮಾಳಗುಂದಿ ಶಿವು ಬನ್ನಿಗೋಳ, ರಾಘು ಬಳೋಟಗಿ, ಸಂದೀಪ ಕಲ್ಲೊಡ್ಡರ, ವಿಠಲ ಗೌಡರ, ಸಂತು ಚಳಗೇರಿ, ಮಂಜು ಪೂಜಾರ ಸೇರಿದಂತೆ ಹಲವರು ಇದ್ದರು.
ವರದಿ : ಚನ್ನು. ಎಸ್.