ಯುವಕರಿಗೆ ಕೇಂದ್ರ ಸರ್ಕಾರದಿಂದ 5 ಸಾವಿರ ರೂಪಾಯಿ ಜೊತೆಗೆ ಇಂಟರ್ನ್ ಶಿಪ್ ಯೋಜನೆ ಅಡಿಯಲ್ಲಿ ಉದ್ಯೋಗ ತರಬೇತಿ.

ಯುವಕರಿಗೆ ಕೇಂದ್ರ ಸರ್ಕಾರದಿಂದ 5 ಸಾವಿರ ರೂಪಾಯಿ ಜೊತೆಗೆ ಇಂಟರ್ನ್ ಶಿಪ್ ಯೋಜನೆ ಅಡಿಯಲ್ಲಿ ಉದ್ಯೋಗ ತರಬೇತಿ.
ದೆಹಲಿ : ಸತ್ಯಮಿಥ್ಯ ( ಜುಲೈ -25)
ಒಂದು ಕೋಟಿ ಯುವಕ ಯುವತಿಯರಿಗೆ ಉದ್ಯೋಗಾವಕಾಶಗಳನ್ನು ನೀಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಕೆಲವು ದಿನಗಳ ಹಿಂದೆ ಮಂಡನೆಯಾದ ಬಜೆಟ್ ನಲ್ಲಿ ಇಂಟರ್ನಶಿಫ್ ಯೋಜನೆಯನ್ನು ಪ್ರಕಟಗೊಳಿಸಿದೆ.
ಇಂಟರ್ನ್ ಶಿಪ್ ಕೋರ್ಸ್ ಒಂದು ವರ್ಷದ್ದಾಗಿದ್ದು. ತರಬೇತಿಯಲ್ಲಿ ಪಾಲ್ಗೊಳ್ಳುವ ಪ್ರತಿ ಅಭ್ಯರ್ಥಿಗೆ ತಿಂಗಳಿಗೆ 5,000 ಭತ್ಯೆ ಒದಗಿಸಲಾಗುತ್ತದೆ.
ಸರ್ಕಾರ ಮಾಸಿಕ ಭತ್ಯೆಯಾಗಿ 54 ಸಾವಿರ ರೂಪಾಯಿಗಳನ್ನು ಮತ್ತು ಅನಿರೀಕ್ಷಿತ ವೆಚ್ಚಗಳಿಂದ 6 ಸಾವಿರ ರೂಪಾಯಿಗಳನ್ನು ಅಲ್ಲದೆ ಹೆಚ್ಚುವರಿಯಾಗಿ 6 ಸಾವಿರ ರೂಪಾಯಿಗಳನ್ನು ಕೊಡುವ ಮೂಲಕ ಒಟ್ಟು ವರ್ಷಕ್ಕೆ ತರಬೇತಿಯೊಂದಿಗೆ 66 ಸಾವಿರ ರೂಪಾಯಿಗಳನ್ನು ನೀಡುವ ಯೋಜನೆಯಾಗಿದೆ.
ಇಂಟರ್ನಶಿಫ್ ಯೋಜನೆಗೆ ಯಾರು ಅರ್ಹರು: ಸರ್ಕಾರ 500 ಕಂಪನಿಗಳನ್ನು ಈ ಇಂಟರ್ನ್ಶಿಪ್ ಯೋಜನೆಗೆ ಬಳಸಿಕೊಳ್ಳಲಿದೆ. ಓದು ಮುಗಿಸಿರುವ ಮತ್ತು ಇನ್ನೂ ಎಲ್ಲಿಯೂ ಕೆಲಸಕ್ಕೆ ಸೇರದ 21 ವರ್ಷದಿಂದ 24 ವರ್ಷ ವಯೋಮಾನದ ಯುವಕ ಮತ್ತು ಯುವತಿಯರು ಅರ್ಹರಿರುತ್ತಾರೆ. ಈ ಅಭ್ಯರ್ಥಿಗಳ ಕುಟುಂಬದ ಇತರ ಯಾವುದೇ ಸದಸ್ಯರು ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ಉದ್ಯೋಗಿಯಾಗಿರುವಂತಿಲ್ಲ. ಅಭ್ಯರ್ಥಿಗಳು ಐಐಟಿ ಅಥವಾ ಐಐಎಂ ಅಥವಾ ಸಿಎ, ಸಿಎಂಎ, ಐಐಸ್ಇಆರ್ ಇತ್ಯಾದಿ ಸಂಸ್ಥೆಗಳಲ್ಲಿ ವೃತ್ತಿಪರ ಶಿಕ್ಷಣ ಪಡೆದಿರುವಂತಿಲ್ಲ.
ಒಟ್ಟಾರೆ, ಬಡವರು ಮತ್ತು ಉದ್ಯೋಗ ಗಿಟ್ಟಿಸುವ ಸಾಧ್ಯತೆ ಕಡಿಮೆ ಇರುವಂತಹ ಅಭ್ಯರ್ಥಿಗಳನ್ನು ಆಯ್ದುಕೊಂಡು ಅವರಿಗೆ ಕೌಶಲ್ಯ ವೃದ್ಧಿಸುವುದು ಸರ್ಕಾರದ ಗುರಿ ಇದ್ದಂತಿದೆ.
1961 ರ ಅಪ್ರೆಂಟಿಸ್ ಕಾಯ್ದೆಯನ್ನು ಬಿಗಿಗೊಳಿಸುವ ಮೂಲಕ. ಒಟ್ಟಾರೆ ಉದ್ಯೋಗಿಗಳಲ್ಲಿ ಶೇಕಡಾ 2.5 ರಷ್ಟು ಇಂಟರ್ನ್ ಶಿಪ್ ಕೋರ್ಸ್ ಮುಗಿಸಿದವರಿಗೆ ನೀಡಬೇಕು ಎಂಬ ಕಾಯ್ದೆಗೆ ಪುಷ್ಟೀಕರಣ ನೀಡಲಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆನ್ಲೈನ್ ಪೋರ್ಟಲ್ ಒಂದನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲಿದೆ. ಈ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು.
ವರದಿ : ಸಂ.