
ಮಕ್ಕಳಲ್ಲಿನ ಪರೀಕ್ಷೆ ಭಯ ಹೋಗಲಾಡಿಸಲು ‘ಓಣಿಗೊಂದು ಪಾಲಕರ ಸಭೆ’
ಗಜೇಂದ್ರಗಡ : ಸತ್ಯಮಿಥ್ಯ (ಫೆ -13)
ಈಗಾಗಲೇ ವಿದ್ಯಾರ್ಥಿಗಳ ಪರೀಕ್ಷಾ ಸಮಯ ಹತ್ತಿರವಾಗುತ್ತಿದೆ ಆದ್ದರಿಂದ ಪೋಷಕರು ಹೆಚ್ಚು ಅಂಕಗಳಿಸಿ ಎಂದು ಮಕ್ಕಳ ಮೇಲೆ ಒತ್ತಡ ಹೇರುವುದು ತಪ್ಪು. ಹೆಚ್ಚಿನ ಅಂಕಗಳಿಕೆ ಮಕ್ಕಳ ಮೇಲೆ ಒತ್ತಡ ಹಾಕದೆ. ಮನೆಯಲ್ಲಿ ಒತ್ತಡ ರಹಿತ ವಾತಾವರಣ ರೂಪಿಸಲು ಪಾಲಕರು ಮುಂದಾಗಬೇಕು ಎಂಬ ಸದುದ್ದೇಶದಿಂದ ಶಿಕ್ಷಕರ ತಂಡ “ಓಣಿಗೊಂದು ಪಾಲಕರ ಸಭೆ ” ಕಾರ್ಯಕ್ರಮ ರೂಪಿಸಿದೆ.
ಕಳೆದ ಎರಡು ದಿನಗಳ ಹಿಂದೆ ಓಣಿಗೊಂದು ಪಾಲಕರ ಸಭೆ ಕಾರ್ಯಕ್ರಮವನ್ನು ಲಂಬಾಣಿ ತಾಂಡಾದ ಮೌನೇಶ್ವರ ದೇವಸ್ಥಾನದಲ್ಲಿ ನಡೆಸಲಾಯಿತು.ಇದರಲ್ಲಿ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ 8.9.10 ನೇ ತರಗತಿಯ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಅವರ ಪಾಲಕ ಪೋಷಕರುಉತ್ಸಾಹದಿಂದ ಪಾಲ್ಗೊಂಡಿದ್ದರು.
ಪಾಲಕರೊಂದಿಗೆ ಮಕ್ಕಳ ಕಲಿಕೆಯ ಬಗ್ಗೆ ಸಂವಾದ ನಡೆಸಲಾಯಿತು.
ವಿಶೇಷವೆಂದರೆ ಇತ್ತೀಚಿಗೆ ಪಿಎಸ್ ಐ ಹುದ್ದೆಗೆ ಆಯ್ಕೆಯಾದ ನಗರದ ಕಿರಣ ದ್ಯಾವಲೆಪ್ಪ ರಾಠೋಡರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿರಣ ರಾಠೋಡವರು ವಿದ್ಯಾರ್ಥಿಗಳು ತಂದೆತಾಯಿಯ ಮತ್ತು ಗುರುಗಳ ಕೀರ್ತಿಯನ್ನು ಬೆಳಗುವಂತವರಾಗಬೇಕೆಂದು ಹೇಳಿದರು.
ವಿದ್ಯಾರ್ಥಿ ಮುಖಂಡ ಪೀರು ರಾಠೋಡ,ಮುಖ್ಯೋಪಾಧ್ಯಾಯರಾದ ಬಿ.ಬಿ.ಕಡಬಿನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಕುರಿ.ಎ.ಜಿ ಬೂದಿಹಾಳ, ಸುರೇಶ ಮಹೇಂದ್ರಕರ,ಸೋಮಶೇಖರ.ಸಿ,ಡಿ.ಆರ್.ಮ್ಯಾಗೇರಿ,ಎ.ಎನ್.ರೋಣದ,ಹೆಚ್. ಆರ್.ಭಜಂತ್ರಿ ಹಾಗೂ ತಾಂಡಾದ ಶಿಕ್ಷಣ ಪ್ರೇಮಿಗಳಾದ ವೀರೇಶ ರಾಠೋಡ,ರೂಪೇಶ ರಾಠೋಡ ಮುಂತಾದವರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.