
ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ ಆರೋಗ್ಯ ಉತ್ತಮವಾಗಿಸಿಕೊಳ್ಳಿ – ಡಾ.ಮಮತಾ.
ಕುಕುನೂರು,: ಸತ್ಯಮಿಥ್ಯ ( ಜುಲೈ -21).
ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಿ ಎಂದು ಡಾಕ್ಟರ್ ಮಮತಾ ಇಲ್ಕಲ್ ಹೇಳಿದರು.
ಅವರು ಇಂದು ಪಟ್ಟಣದಲ್ಲಿ ನಡೆದ ಮಲ್ಲಿಕಾರ್ಜುನ ಚೌದ್ರಿ ಇವರ ತಾಯಿಯವರಾದ ಶ್ರೀಮತಿ ಅನುಸೂಯಮ್ಮ ಹನುಮಂತಪ್ಪ ಚೌದ್ರಿ ಅವರ 11ನೇ ವರ್ಷದ ಸ್ಮರಣಾರ್ಥಕವಾಗಿ ಹಮ್ಮಿಕೊಂಡಂತ ಸೌಹಾರ್ದ ಕ್ರಿಕೆಟ್ ಕ್ರೀಡಾಕೂಟದ ಫೈನಲ್ ಪಂದ್ಯ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನಿಗೂ ಕ್ರೀಡೆ ಅತ್ಯವಶ್ಯಕ, ಕ್ರೀಡೆಯು ಮನುಷ್ಯನನ್ನು ದೈಹಿಕವಾಗಿ ಸದೃಢಗೊಳಿಸುತ್ತದೆ. ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವದು ಮುಖ್ಯವಾಗಿರುತ್ತದೆ. ಪ್ರತಿವರ್ಷ ಶ್ರೀಮತಿ ಅನುಸೂಯಮ್ಮ ಹನುಮಂತಪ್ಪ ಚೌದ್ರಿ ಅವರ ಸ್ಮರಣಾರ್ಥಕವಾಗಿ ಆಯೋಜಿಸುವ ಇಂಥ ಕ್ರೀಡಾಕೂಟವು ಅತ್ಯಂತ ಸೂಕ್ತವಾಗಿದೆ.ಪ್ರಸ್ತುತ ಸಂದರ್ಭದಲ್ಲಿ ಯುವಕರು ಮೊಬೈಲ್ ಮರೆತು ಹೆಚ್ಚು ಯುವಕರು ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಪಾದೀಕ್ಷಿತ್ ಮಾತನಾಡಿ ಕ್ರೀಡೆಗೆ ಸಹಕರಿಸುವುದು ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ ಕ್ರೀಡಾಪಟುವಿಗೆ ಪ್ರೋತ್ಸಾಹಿಸುವ ಮೂಲಕ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎ ಎಸ್ ಐ ನಿರಂಜನ ತಳವಾರ. ಪೌರಕಾರ್ಮಿಕರಾದ ಗಂಗಮ್ಮ ಕಾತರಕಿ,ಪ್ರಗತಿಪರ ರೈತರದ ಬಸವರಾಜ ಬರಮಣ್ಣವರ , ಮುಖಂಡರಾದ ಉಮೇಶಪ್ಪ ನವಲಗುಂದ, ಕಳಕಪ್ಪ ಬೋರೆನವರ, ನಬಿಸಾಬ್ ಬಿನ್ನಾಳ,ಮಂಜುನಾಥ ನಾಡಗೌಡ, ಗಿರಿಧರ ನಿಲೋಗಲ್, ಮಾಂತೇಶ ಹೂಗಾರ,ಬಸವರಾಜ ಬಡಿಗೇರ, ವಕೀಲರಾದ ಅಡಿವೆಪ್ಪ ಬೋರಣ್ಣವರ, ಬಸವರಾಜ್ ಜಂಗ್ಲಿ, ರಮೇಶ ಗಜಕೋಶ, ಜಗದೀಶ ತೊಂಡ್ಯಾಳ ಹಾಗೂ ಇನ್ನಿತರ ಭಾಗವಹಿಸಿದ್ದರು ಅಂತಿಮ ಪಂದ್ಯದಲ್ಲಿ ಭಾಗವಹಿಸಿದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹಾಗೂ ಅನ್ನದಾನೇಶ್ವರ ಕ್ರಿಕೆಟ್ ತಂಡಗಳ ಕ್ರೀಡಾಪಟುಗಳು ಭಾಗವಹಿಸಿದ್ದವು.
ವರದಿ : ಚನ್ನವೀರಯ್ಯ ಹಿರೇಮಠ.