ಕಠಿಣಶ್ರಮ ಹಾಗೂ ಧನಾತ್ಮಕ ದೃಷ್ಟಿಯಿಂದ ಯಶಸ್ಸು ಸಾಧ್ಯ-ತ್ರೀನಾಥ ರೆಡ್ಡಿ.
ಕೊಪ್ಪಳ : ಸತ್ಯಮಿಥ್ಯ ( ಆಗಸ್ಟ್ -05)
ಜೀವನದಲ್ಲಿ ಏನೇ ಗುರಿ ಹೊಂದಿದ್ದರು ಸಹ ಕಠಿಣ ಪರಿಶ್ರಮ, ಉತ್ತಮ ಸಮರ್ಪಣೆ ಹಾಗೂ ಧನಾತ್ಮಕ ದೃಷ್ಟಿಕೋನವನ್ನು ಹೊಂದಿದಾಗ ಮಾತ್ರ ಯಶಸ್ಸು ನಮ್ಮದಾಗಲು ಸಾಧ್ಯ ಎಂದು ಕರ್ನಾಟಕ ಕುಕ್ಕಟೋದ್ಯಮ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಧನಲಕ್ಷ್ಮಿ ಪೌಲ್ಟ್ರಿ ಫಾರಂ ನ ಮಾಲೀಕ ಎಸ್ ತ್ರೀನಾಥ್ ರೆಡ್ಡಿ ಹೇಳಿದರು.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದುರೆಮೋತಿ ಗ್ರಾಮದಲ್ಲಿರುವ ಧನಲಕ್ಷ್ಮಿ ಪೌಲ್ಟ್ರಿ ಫಾರಂನಲ್ಲಿ ಗದಗ ನಗರದ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಭೇಟಿ ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತ್ರೀನಾಥ್ ರೆಡ್ಡಿ ಮಾತನಾಡುತ್ತಾ ಪೌಲ್ಟ್ರಿ ಪರಮನ ಅಧ್ಯಯನಕ್ಕೆ ವಿದ್ಯಾರ್ಥಿಗಳು ನಮ್ಮ ಫಾರಂ ಅನ್ನು ಆಯ್ಕೆ ಮಾಡಿದ್ದು ಹೆಮ್ಮೆಯ ವಿಷಯವಾಗಿದ್ದು ಈ ಫಾರಂನ ಅಧ್ಯಯನಕ್ಕೆ ಕೇವಲ ಒಂದು ದಿನ ಸಾಕಾಗುವುದಿಲ್ಲ ಮೂರರಿಂದ ನಾಲ್ಕು ದಿನಗಳ ಸಮಯ ಅವಶ್ಯಕವಾಗಿದ್ದು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಅಧ್ಯಯನದ ಭೇಟಿಗೆ ಮುಂದದಲ್ಲಿ ಅವರಿಗೆ ಬೇಕಾಗುವ ಎಲ್ಲಾ ಸೌಕರ್ಯವನ್ನು ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.
ನಾವು ಕಲಿತಿದ್ದನ್ನು ಹಾಗೂ ಸಾಧಿಸಿದ್ದನ್ನು ಇನ್ನೊಬ್ಬರಿಗೆ ತಿಳಿಸಿ ಹೇಳುವುದೇ ಉತ್ತಮವಾದ ಧರ್ಮವಾಗಿದೆ. ಕುಕ್ಕುಟೋದ್ಯಮಕ್ಕೆ ಸರ್ಕಾರ ಸಾಕಷ್ಟು ಸೌಲಭ್ಯವನ್ನು ಕಲ್ಪಿಸಿದ್ದು ಈ ಸೌಲಭ್ಯಗಳು ಅರ್ಹ ವ್ಯಕ್ತಿಗಳಿಗೆ ಸೌಲಭ್ಯ ಕಲ್ಪಿಸುವ ಕಾರ್ಯವಾಗಬೇಕಾಗಿದೆ. ದೇಶದಲ್ಲಿ ಪ್ರತಿದಿನ ಸರಾಸರಿ 33 ಕೋಟಿ ಮೊಟ್ಟೆಗಳ ಉತ್ಪಾದನೆಯಾಗುತ್ತಿದ್ದು, ಪಕ್ಕದ ತಮಿಳುನಾಡು ಪ್ರತಿದಿನ 07 ಕೋಟಿ ಮೊಟ್ಟೆ ಉತ್ಪಾದನೆ ಮಾಡುವುದರೊಂದಿಗೆ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು ಗದಗ ನಗರದ ಪಶು ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಸಿದ್ದಲಿಂಗ ಸ್ವಾಮಿ ಮಾತನಾಡುತ್ತಾ ಈ ಭೇಟಿಯು ನಮ್ಮ ವಿದ್ಯಾರ್ಥಿಗಳಿಗೆ ವಿಶೇಷವಾಗಿದ್ದು ಈ ಫಾರಂ ಪುಸ್ತಕದಲ್ಲಿ ಅನುಕರಣೆ ಮಾಡಿದಂತೆ ನಿರ್ಮಿಸಿ, ನಿರ್ವಹಣೆ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ, ಮಾಲೀಕರಾದರು ಸಹ ಸರಳತೆಯಿಂದ ನೌಕರರಂತೆ ಕಾರ್ಯನಿರ್ವಹಿಸುತ್ತಿರುವ ತ್ರೀನಾಥ್ ರೆಡ್ಡಿಯವರು ಎಲ್ಲರಿಗೂ ಮಾದರಿಯಾಗಿದ್ದಾರೆ. ನಮ್ಮೊಂದಿಗೆ ಇಡೀ ಫಾರಂ ಸುತ್ತಾಡಿ ವಿದ್ಯಾರ್ಥಿಗಳಿಗೆ ಅವಶ್ಯವಿದೆ ಎಲ್ಲಾ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಹೊಸ ಆಶಾಭಾವನೆಯನ್ನು ಮೂಡಿಸಿದ್ದಾರೆ. ಜೊತೆಗೆ ಕೋಳಿ ಫಾರಂ ನಿಂದ ನೊಣದ ಹಾವಳಿ ಹೆಚ್ಚಾಗುತ್ತದೆ ಎಂಬ ಋಣಾತ್ಮಕ ಮಾತುಗಳನ್ನು ಎಲ್ಲೆಡೆ ಕೇಳಿ ಬರುತ್ತಿವೆ. ಆದರೆ ಈ ಫಾರಂನಲ್ಲಿ ಯಾವುದೇ ರಾಸಾಯನಿಕ ಬಳಕೆ ಮಾಡದೆ ನೊಣಗಳ ಹಾವಳಿ ತಪ್ಪಿಸಲು ತೆಗೆದುಕೊಂಡ ಕ್ರಮ ಶ್ಲಾಗನಾರ್ಹವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಕುಕಟೋದ್ಯಮ ಕುರಿತಂತೆ ಸ್ನಾತಕೋತರ ಪದವಿಯಲ್ಲಿ ಉತ್ತಮ ಶ್ರೇಣಿ ಹೊಂದುವ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪದಕ ಹಾಗೂ ವಿದ್ಯಾಲಯ ಮಟ್ಟದಲ್ಲಿ ಔಷದ ಶಾಸ್ತ್ರದಲ್ಲಿ ಉನ್ನತ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪದಕ ತಮ್ಮ ಧನಲಕ್ಷ್ಮಿ ಪೌಲ್ಟ್ರಿ ಫಾರಂ ನಿಂದ ನೀಡಲಾಗುವುದು ಎಂದು ತ್ರೀನಾಥ ರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ .ಅರುಣ, ಡಾ.ಸುನಿಲ್ ಕುಮಾರ್, ಕೋಳಿ ಫಾರಂ ನ ವ್ಯವಸ್ಥಾಪಕ ಮನೋಹರ, ಮೇಲ್ವಿಚಾರಕರಾದ ಮದನ ಕುಮಾರ , ಪಶು ವೈದ್ಯಕೀಯ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪಾಲ್ಗೊಂಡಿದ್ದರು.
ವರದಿ :ಚೆನ್ನಯ್ಯ ಹಿರೇಮಠ್.