ವರ್ತಕರ ಅಕ್ರಮ ದಂಧೆಗೆ ಕಡಿವಾಣ ಹಾಕಲು ಎಪಿಎಂಸಿ ಪ್ರಾಂಗಣದಲ್ಲಿ ಟೆಂಡರ್ ಮಾಡಬೇಕು:ನಾರಾಯಣ ರೆಡ್ಡಿ.
ವರ್ತಕರ ಅಕ್ರಮ ದಂಧೆಗೆ ಕಡಿವಾಣ ಹಾಕಲು ಎಪಿಎಂಸಿ ಪ್ರಾಂಗಣದಲ್ಲಿ ಟೆಂಡರ್ ಮಾಡಬೇಕು:ನಾರಾಯಣ ರೆಡ್ಡಿ.
ಕೊಪ್ಪಳ:ಸತ್ಯಮಿಥ್ಯ (ಸ -24).
ಜಿಲ್ಲೆ ಕುಕನೂರು ಪಟ್ಟಣದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಬಶಪ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪಟ್ಟಣದ ರಾಘವಾನಂದ ಮಠದಿಂದ ಪ್ರತಿಭಟನೆಯ ಜಾತ ಪ್ರಾರಂಭಗೊಂಡು ಪಟ್ಟಣದ ವೀರಭದ್ರಪ್ಪ ಸರ್ಕಲ್ ಮತ್ತು ಡಾ. ಬಿಆರ್ ಅಂಬೇಡ್ಕರ್ ಸರ್ಕಲ್ ಮುಖಾಂತರ ಮರಳಿ ವೀರಭದ್ರಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವುದರ ಮುಖಾಂತರ ಪ್ರತಿಭಟನೆ ಮಾಡಲಾಯಿತು. ನಂತರ ಎಪಿಎಂಸಿ ಆವರಣದ ಮುಖ್ಯ ದ್ವಾರದ ಮುಂದೆ ಗಾಂಧೀಜಿ ಫೋಟೋವನ್ನು ಪೂಜಿಸುವುದರೊಂದಿಗೆ ಹೋರಾಟ ಪ್ರಾರಂಭಿಸಲಾಯಿತು.
ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷರಾದ ವಿ. ಆರ್. ನಾರಾಯಣ ರೆಡ್ಡಿ ಮಾತನಾಡಿ.ರೈತರಿಗೆ ಆಗುವ ಅನ್ಯಾಯ ಹಾಗೂ ವರ್ತಕರ ಅಕ್ರಮದಂದೆ ವಿರುದ್ಧ ಹೋರಾಟ ನೆರವೇರಿಸುತ್ತಿದ್ದು. ರೈತರ ಪ್ರಮುಖ ಬೇಡಿಕೆಗಳಾದ ಎಪಿಎಂಸಿ ಪ್ರಾಂಗಣದಲ್ಲಿ ಟೆಂಡರ್ ಮಾಡಬೇಕು, ಪ್ಲಾಸ್ಟಿಕ್ ಚೀಲ ಬಿಟ್ಟು ಕಾಟನ್ ಚೀಲದಲ್ಲಿ ತೂಕ ಮಾಡಬೇಕು, ಎಪಿಎಂಸಿ ಕಾನೂನು ಪ್ರಕಾರ ಬಾದನ್ನು ತೆಗೆಯಲುಕೊಳ್ಳಬಾರದು, ಎಪಿಎಂಸಿ ಹೊರಗಡೆ ವ್ಯಾಪಾರ ಬಂದ್ ಮಾಡಬೇಕು, ರೈತರಿಂದ ಹಮಾಲರು ಒತ್ತಡ ಹಾಕಿ ಯಾವುದೇ ಧಾನ್ಯವನ್ನು ತೆಗೆದುಕೊಳ್ಳಬಾರದು, ಎಪಿಎಂಸಿಯಲ್ಲಿ ಒಂದು ರೈತ ಭವನ ನಿರ್ಮಾಣ ಮಾಡಬೇಕು, ದಿನಕ್ಕೆ ಸಾವಿರಾರು ಚೀಲ ಕಾಟ ಮಾಡಿ ಅಲ್ಪ- ಸ್ವಲ್ಪ ಚೀಲ ಟ್ಯಾಕ್ಸ್ ಅನ್ನು ಎಪಿಎಂಸಿಗೆ ಕಟ್ಟುತ್ತಾರೆ. ಇದರಿಂದ ಸರ್ಕಾರಕ್ಕೆ ತುಂಬಾ ನಷ್ಟವಾಗುತ್ತದೆ ಇನ್ನು ಹಲವಾರು ಅಕ್ರಮ ವ್ಯಾಪಾರ ವಹಿವಾಟುಗಳು ನಿಲ್ಲಿಸಬೇಕು. ಜಿಲ್ಲಾ ಅಧಿಕಾರಿಗಳು ಅವರು ಬಂದು ಮನವಿಯನ್ನ ಸ್ವೀಕರಿಸುವವರೆಗೂ ಹೋರಾಟ ಮತ್ತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ ಮತ್ತು ರೈತ ರಾಮಣ್ಣ ಮಂದಲಮನಿ, ದೇವಪ್ಪ ಸೋಬಾನದ ಮಾತನಾಡಿದರು.
ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಮುದ್ದಾಬಳ್ಳಿ, ಬಸಯ್ಯ ಮಂಡಲಗೇರಿ, ಮಹದೇವಪ್ಪ ಕೌದಿ, ವಿರಯ್ಯ ಕಳ್ಳಿಮಠ, ಬೇರೆ ಜಿಲ್ಲಾ ತಾಲೂಕುಗಳಿಂದ ಬಂದಂತಹ ರೈತ ಮುಖಂಡರು ಹಾಗೂ ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.