ಸ್ಥಳೀಯ ಸುದ್ದಿಗಳು

ಮೂಡಲಗಿಯಲ್ಲಿ ವೈಭವದ ನವರಾತ್ರಿ ಉತ್ಸವಕ್ಕೆ ಚಾಲನೆ.

Share News

ಮೂಡಲಗಿಯಲ್ಲಿ ವೈಭವದ ನವರಾತ್ರಿ ಉತ್ಸವಕ್ಕೆ ಚಾಲನೆ.

ಮೂಡಲಗಿ:ಸತ್ಯಮಿಥ್ಯ (ಅ -02).

ಹಲವು ವರ್ಷದಿಂದ ನವರಾತ್ರಿಯ ಅಂಗವಾಗಿ ಬಸವ ರಂಗ ಮಂಟಪ್ಪದಲ್ಲಿ ದುರ್ಗಾಮಾತಾ ಮೂರ್ತಿ ಸ್ಥಾಪನೆ ಅಂಗವಾಗಿ ವಿವಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿರುವ ಈ ಸಮಿತಿಗೆ 16 ನೆಯ ಸಂಭ್ರಮ. ಈ “ನವರಾತ್ರಿ ಉತ್ಸವ” ಸಮಿತಿಯಿಂದ ಇಂದು ದುರ್ಗಾ ಮಾತೆಯ ಮೂರ್ತಿಯನ್ನು ವಾಹನದ ಮೇಲೆ ಸ್ಥಾಪಿಸಿ ಪೂಜಿಸಿ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಗಾಂಧಿ ಚೌಕ್ ನಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ವೃತ್ತಗಳಾದ ಬಸವೇಶ್ವರ ವೃತ್ತ, ಸಂಗಪ್ಪಣ್ಣ ವೃತ್ತ, ಅಮನ ನಗರ, ಅಂಬೇಡ್ಕರ್ ವೃತ್ತ, ಕಲ್ಮೇಶ್ವರ ವೃತ್ತ, ಕಾಲೇಜು ರಸ್ತೆ ಮಾರ್ಗವಾಗಿ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದ ವರೆಗೆ ಸಾಗಿ ಮರಳಿ ಅದೇ ಮಾರ್ಗವಾಗಿ ಎಸ್ ಎಸ್ ಆರ್ ಕಾಲೇಜಿನ ವರೆಗೆ ಬಂದು ಬಿಇಓ ಆಫೀಸ್ ಹತ್ತಿರ ಸಾಗುತ್ತ ಲಕ್ಷೀ ನಗರ ಮಾರ್ಗವಾಗಿ ಬಸ್ ನಿಲ್ದಾಣ ಹತ್ತಿರ ಬಂದು, ಚನ್ನಮ್ಮ ವೃತ್ತ, ಕರೆಮ್ಮ ವೃತ್ತಗಳನ್ನು ಸಂಚರಿಸಿ ಕೊನೆಗೆ ಬಸವೇಶ್ವರ ವೃತ್ತದ ಬಳಿ ಇರುವ ಬಸವ ಮಂಟಪದ ಮೂಲಕ ವೇದಿಕೆಗೆ ದುರ್ಗಾ ಮಾತೆಯ ಭವ್ಯ ಮೆರವಣಿಗೆ ಆಗಮಿಸಿತು.

ಶ್ವಾನ ಪ್ರದರ್ಶನ.ಹೋರಿ ಪ್ರದರ್ಶನಂತಹ ಹಲವು ವಿವಿಧ ಪ್ರದರ್ಶನಗಳು ಈ ಉತ್ಸವದಲ್ಲಿ ಜರುಗಲಿವೇ.

ಈ ಮೆರವಣಿಗೆಯಲ್ಲಿ ನವರಾತ್ರಿ ಉತ್ಸವ ಸಮಿತಿಯ ಕೃಷ್ಣಾ ನಾಶಿ.ಕುಮಾರ ಗಿರಡ್ಡಿ ಹಣಮಂತ ಸತರಡ್ಡಿ, ಚನ್ನವೀರಪ್ಪ ಅಂಗಡಿ,ಜಗದೀಶ ತೇಲಿ. ಅಜ್ಜಪ್ಪ ಬಳಿಗಾರ, ಈರಪ್ಪ ಡವಳೇಶ್ವರ. ಯಲ್ಲಪ್ಪ ಪೂಜೇರಿ, ಸದಾಶಿವ ನಿಡಗುಂದಿ, ಸಂಜು ಕಮತೆ, ಪ್ರಭು ತೇರದಾಳ, ಮಹೇಶ ಒಡೆಯರ್, ಅಜ್ಜಪ್ಪ ಜರಾಳೆ, ಬಸು ಅಂಗಡಿ, ಚೇತನ ನಿಶಾನಿಮಠ, ಪ್ರದೀಪ ದರೂರ, ಕಾಡಪ್ಪ ಮೆಳ್ಳಿಗೇರಿ, ಶ್ರೀರಂಗ ಜೋಶಿ ಸೇರಿದಂತೆ ಇನ್ನು ಅನೇಕ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವರದಿ : ಶಿವಾನಂದ ಮುಧೋಳ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!