ಬಳಗೇರಿ ಗ್ರಾಮ ಪಂಚಾಯತಿಯಲ್ಲಿ ವಿಶೇಷ ಗ್ರಾಮ ಸಭೆ ಆಯೋಜನೆ.
ಕುಕನೂರು:ಸತ್ಯಮಿಥ್ಯ (ಅ -02).
ತಾಲೂಕು ಬಳಗೇರಿ ಗ್ರಾಮ ಪಂಚಾಯತಿ ಆವರಣದಲ್ಲಿ ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಮಗ್ರ ಕ್ರಿಯಾಯೋಜನೆ ತಯಾರಿಗಾಗಿ ಗೌರಮ್ಮ ವಿರುಪಾಕ್ಷಯ್ಯ ಕುರ್ತುಕೋಟಿ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆ ಜರುಗಿತು.
ಮಹಾತ್ಮಗಾಂಧಿ ನರೇಗಾ ಯೋಜನೆಯ 2025-26 ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆಗಾಗಿ ವಿಶೇಷ ಐ.ಇ.ಸಿ ಕಾರ್ಯಕ್ರಮ ಆಯೋಜನೆ ಮನೆ ಮನೆ ಭೇಟಿ ನೀಡಿ ಉದ್ಯೋಗ ಖಾತ್ರಿ ಕಾಮಗಾರಿ ಬೇಡಿ ಸಂಗ್ರಹ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ ಆಯೋಜನೆ.
ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಯವರ ಜಯಂತಿ ಅಂಗವಾಗಿ ಕುಕನೂರ ತಾಲೂಕಿನ ಬಳಗೇರಿ ಗ್ರಾಮದಲ್ಲಿ ವಿಶೇಷ ಗ್ರಾಮ ಸಭೆ ಆಯೋಜನೆ ಮಾಡಲಾಗಿತ್ತು ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಫಕೀರ ರೆಡ್ಡಿ ಮಾತನಾಡಿ ಗ್ರಾಮ ಪಂಚಾಯತಿಯಿಂದ ಅನುಷ್ಠಾನಗೊಳ್ಳುವ ಯೋಜನೆಗಳ ಕ್ರಿಯಾ ಯೋಜನೆಯನ್ನು ಅಕ್ಟೋಬರ್-2 ರಂದು ಮಹಾತ್ಮಗಾಂಧಿ ಜಯಂತಿಯಂದು ತಯಾರಿಸುವ ಆದೇಶದ ಪ್ರಯುಕ್ತ ವಿಶೇಷವಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಕೆಗಾಗಿ ಕಾಮಗಾರಿ ಬೇಡಿಕೆಯನ್ನು ಪಡೆಯಲು ಮನೆ ಮನೆ ಭೇಟಿ ಮಾಡಿ ಮಾಹಿತಿ ನೀಡಲಾಯಿತು, ಮತ್ತು ಕಾಮಗಾರಿ ಬೇಡಿಕೆ ಸಂಗ್ರಹಿಸಲಾಯಿತು. ನಂತರ ಗ್ರಾಮ ಪಂಚಾಯತಿ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಗ್ರಾಮ ಸಭೆ ಜರುಗಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ರುದ್ರಪ್ಪ ಅಂದಪ್ಪ ಸರ್ವಿ, ಗುದ್ನೆಯ್ಯ ಕೆಂಭಾವಿ ಮಠ, ನಿಂಗಪ್ಪ ಮಾಳೆಕೊಪ್ಪ, ಸುಸಿಲಾ ವಿರುಪಾಕ್ಷಯ್ಯ ವಿರಕ್ತಿಮಠ, ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ನಿಂಗಪ್ಪ ಬೂದಗುಂಪಿ, ಐ.ಇ.ಸಿ ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ, ಕಂಪ್ಯೂಟರ್ ಅಪರೇಟರ್ ಗವಿಸಿದ್ದಪ್ಪ ಪಟ್ಟಣಶೇಟ್ಟಿ, ಗ್ರಾಮ ಕಾಯಕ ಮಿತ್ರರಾದ ಉಮಾದೇವಿ ತುಮ್ಮರಗುದ್ದಿ, ಲೈಬ್ರರಿಯನ್ ಗೌವಿಸಿದ್ದಮ್ಮ ಗುಳಗುಳಿ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಕಾಯಕ ಬಂಧುಗಳು ಸಾರ್ವಜನಿಕರು ಹಾಜರಿದ್ದರು.
ವರದಿ : ಚೆನ್ನಯ್ಯ ಹಿರೇಮಠ.