ಗದಗ – ಪೊಲೀಸರ ಮೇಲೆ ಹಲ್ಲೆ,ಇರಾಣಿ ಗ್ಯಾಂಗ್ ಆಕ್ಟಿವ್?
ರಾಜ್ಯದಲ್ಲಿ ಹೆಚ್ಚುತ್ತಿರುವ ಪೊಲೀಸ್ ಮೇಲೆ ಹಲ್ಲೆ ಪ್ರಕರಣಗಳು.ಎಚ್ಛೆತ್ತುಕೊಳ್ಳುವರೇ ಐ.ಜಿ.
ಸರಣಿಗಳ್ಳತನ ಪ್ರಕರಣದ ಆರೋಪಿಗಳನ್ನು ಕರೆದೊಯ್ಯುವ ವೇಳೆ ಪೊಲೀಸರ ಮೇಲೆ ಹಲ್ಲೆ ಆರೋಪಿ ಪರಾರಿ.
ಗದಗ: ಸತ್ಯಮಿಥ್ಯ ( ಜೂ -29).
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣದಲ್ಲಿಗಂಗಾವತಿ ಪೊಲೀಸ್ ಠಾಣೆಯ ಪೊಲೀಸರು ಗದಗ ನಗರದ ಎಸ್ ಎಂ ಕೃಷ್ಣ ನಗರದ ಅಮ್ಜದ್ ಅಲಿ ಇರಾಣಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಸೀನಿಮಿಯ ರೀತಿಯಲ್ಲಿ ಬಂದ ಆಗಂತಕರು ಪೊಲೀಸ್ ಮೇಲೆ ಹಲ್ಲೆ ಮಾಡಿ ಆರೋಪಿಯನ್ನು ಕರೆದುಕೊಂಡು ಹೋದ ಘಟನೆ ನಡೆದಿದೆ ಇದರಿಂದ ಗದಗ ನಗರದಲ್ಲಿ ಇರಾನಿ ಗ್ಯಾಂಗ್ ಆಕ್ಟಿವ್ ಆಗಿದೆಯಾ ಎಂಬ ಭಯ ಸಾರ್ವಜನಿಕರಲ್ಲಿ ಮೂಡುತ್ತಿದೆ.
ನಗರದ ಬೆಟಗೇರಿ ರೈಲ್ವೆ ಅಂಡರ್ ಬ್ರಿಜ್ಜ್ ಬಳಿ ದುಷ್ಕರ್ಮಿಗಳು ಪೊಲೀಸರ ವಾಹನ ಅಡ್ಡಗಟ್ಟಿ ಹಲ್ಲೆ ನಡೆಸಿ ಆರೋಪಿಯ ಜೊತೆ ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿವೆ. ಗಾಯಾಳು ಪೊಲೀಸರನ್ನು ಬೆಟಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಾಬರಿ ಆರೋಪಿಯನ್ನು ಕರೆದೊಯ್ಯಲು ಗಂಗಾವತಿ ಪೊಲೀಸರು ಖಾಸಗಿ ವಾಹನದಲ್ಲಿ ಬಂದಿದ್ದರು. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಇನೋವಾ ಕಾರ್ ನಂಬರ್ KA 22 Z 1636ನಲ್ಲಿ ಗಂಗಾವತಿ ಪೊಲೀಸರು ಬಂದಿದ್ದರು. ಗದಗ ಎಸ್.ಎಂ. ಕೃಷ್ಣ ನಗರದಿಂದ ಆರೋಪಿ ಅಮ್ಜದ್ ಅಲಿ ಇರಾಣಿ ಎಂಬುವವನನ್ನು ವಶಕ್ಕೆ ಪಡೆದು ತೆರಳುತ್ತಿದ್ದಾಗ ಹಲ್ಲೆ ನಡೆದಿದೆ.
ಕಾರ್ ಅಡ್ಡಗಟ್ಟಿ ನಾಲ್ವರು ಅನಾಮಿಕರು ಗಂಗಾವತಿ ಟೌನ್ ಪೊಲೀಸ್ ಸ್ಟೇಷನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಹೆಡ್ ಕಾನ್ಸ್ಟೇಬಲ್ ಮರಿಶಾಂತ ಗೌಡ ಎಂಬುವವರ ಮುಖ, ಕಿವಿಗೆ ಗಾಯಗಳಾಗಿವೆ. ಪಿಸಿ ಚಿರಂಜೀವಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಎಸ್ಐ ಶಿವಶರಣ, ಪಿಸಿ ವಿಶ್ವನಾಥ್, ಪಿಸಿ ಮೈಲಾರಪ್ಪ ಸೇರಿದಂತೆ ಐವರ ಪೊಲೀಸ್ ಸಿಬ್ಬಂದಿ ಟೀಂ ಮೇಲೆ ಹಲ್ಲೆ ನಡೆದಿದೆ. ಗಂಗಾವತಿಯ ಜಯನಗರ ಮನೆಯೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಶಕ್ಕೆ ಪಡೆಯಲಾಗಿತ್ತು.
ಗದಗನಲ್ಲಿ ಅನೇಕ ವರ್ಷಗಳ ಹಿಂದೆ ಇರಾನಿ ಗ್ಯಾಂಗ್ ಅನೇಕ ಅಪರಾಧಿ ಕೃತ್ಯದಲ್ಲಿ ಭಾಗಿಯಾದ ಉದಾಹರಣೆಗಳಿವೆ. ಈ ಪ್ರಕರಣದಿಂದ ಮತ್ತೆ ಇರಾನಿ ಗ್ಯಾಂಗ್ ಆಕ್ಟಿವ್ ಆಗಿದೆಯೇ ಎಂಬ ಸಂಶಯ ಜನ ವ್ಯಕ್ತಪಡಿಸುತ್ತಿದ್ದಾರೆ.
ಎಸ್. ಪಿ. ನೇಮಗೌಡ ಭೇಟಿ.
ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸಿದ ಗದಗ ಎಸ್ಪಿ ಇನ್ನು ಗದಗ-ಬೆಟಗೇರಿಯ ಸಿಎಸ್ಐ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಗದಗ ಎಸ್ಪಿ ನೇಮಗೌಡ ಆರೋಗ್ಯ ವಿಚಾರಿಸಿದರು. ಸಿಬ್ಬಂದಿ ಭೇಟಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್ಪಿ, ಆರೋಪಿಯನ್ನ ವಶಕ್ಕೆ ಪಡೆಯಲು ಬಂದಾಗ ಹಲ್ಲೆ ನಡೆದಿದೆ. ಕಾರಿನ ಗ್ಲಾಸ್ ಒಡೆದು ಆರೋಪಿ ಎಸ್ಕೇಪ್ ಆಗಲು ಸಹಾಯ ಮಾಡಿದ್ದಾರೆ. ಪೊಲೀಸರಿಗೆ ಸಣ್ಣಪುಟ್ಟ ಗಾಯವಾಗಿದೆ. ದೂರಿನನ್ವಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಈಗಾಗಲೇ ಎರಡು ತಂಡಗಳಾಗಿ ಹಲ್ಲೆಕೋರರ ಶೋಧನೆ ಕಾರ್ಯ ಪ್ರಾರಂಭವಾಗಿದೆ ಶೀಘ್ರದಲ್ಲಿ ಆರೋಪಿಗಳನ್ನು ಬಂದಿಸಲಾಗುವದು ಎಂದರು.
ವರದಿ : ಮುತ್ತು.