ತಾಲೂಕು

ಈಗ ಕೋಟೆನಾಡಿಗೆ ಕ್ಯಾಮರಾ ಕಂಣ್ಗಾವಲು.ಒಂದು ವ್ಯವಸ್ಥೆಯನ್ನು ಮೇಲ್ದರ್ಜೆಗೆರಿಸಲು ಹಲವು ಬದಲಾವಣೆ ಅನಿವಾರ್ಯ -ಶಾಸಕ ಜಿ. ಎಸ್. ಪಾಟೀಲ್.

Share News

ಈಗ ಕೋಟೆನಾಡಿಗೆ ಕ್ಯಾಮರಾ ಕಂಣ್ಗಾವಲು.ಒಂದು ವ್ಯವಸ್ಥೆಯನ್ನು ಮೇಲ್ದರ್ಜೆಗೆರಿಸಲು ಹಲವು ಬದಲಾವಣೆ ಅನಿವಾರ್ಯ -ಶಾಸಕ ಜಿ. ಎಸ್. ಪಾಟೀಲ್.

ಗಜೇಂದ್ರಗಡ : ಸತ್ಯಮಿಥ್ಯ (ಅಗಸ್ಟ್ -31)

ಗದಗ ಜಿಲ್ಲೆಯಲ್ಲಿಯೇ ಗಜೇಂದ್ರಗಡ ನಗರ ವಾಣಿಜ್ಯ ಕೇಂದ್ರವಾಗಿ ಅತ್ಯಂತ ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ. ಕಾಲಕಾಲೇಶ್ವರ ವೃತ್ತದಲ್ಲಿ ಟ್ರಾಫಿಕ್  ಸಿಗ್ನಲ್ ಸೇರಿದಂತೆ ಒಟ್ಟು 19 ಸಿ.ಸಿ ಕ್ಯಾಮೆರಾಗಳ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳು ಕಡಿಮೆಯಾಗಿ, ಸಾರ್ವಜನಿಕರ ಸುಲಭ ಸಂಚಾರಕ್ಕೆ ಅನುಕೂಲವಾಗುವುದಲ್ಲದೆ ನಗರದ ಸೌಂದರ್ಯ ಹೆಚ್ಚಾಗಲಿದೆ ಎಂದು ಸ್ಥಳೀಯ ಶಾಸಕ ಜಿ.ಎಸ್.ಪಾಟೀಲ್ ನೋಡಿದರು.

ಅವರು ನೂತನ ಪೊಲೀಸ್ ಚೌಕಿ, ಟ್ರಾಫಿಕ್ ಸಿಗ್ನಲ್ ಮತ್ತು ಸಿ ಸಿ ಕ್ಯಾಮೆರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ. ಒಂದು ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲು ಹಲವು ಬದಲಾವಣೆಗಳು ಅನಿವಾರ್ಯ. ಅದೇ ರೀತಿ ಕಾಯಿಪಲ್ಲೆ ಮಾರ್ಕೆಟ್ ಸೇರಿದಂತೆ ಅನೇಕ ವ್ಯಾಪಾರಸ್ಥರನ್ನು ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಕೋನದಿಂದ ಸ್ಥಳಾಂತರ ಗೊಳಿಸಲಾಗಿದೆ. ನಗರದ ಬೆಳವಣಿಗೆಗೆ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಿದಾಗ ಸಾರ್ಥಕವಾಗುತ್ತದೆ. ಕೆಲವು ದಿನಗಳು ವ್ಯಾಪಾರಸ್ಥರಿಗೆ ತೊಂದರೆಯಾಗಬಹುದು ಆದರೆ ಗಜೇಂದ್ರಗಡ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಎಲ್ಲ ತೊಂದರೆಗಳು ಶೀಘ್ರದಲ್ಲಿ ಸರಿಹೋಗಲಿವೆ ಎಂದರು. 1985 ರಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣದ ಕುರಿತು ನೆನಪುಗಳನ್ನು ಹಂಚಿಕೊಂಡರು. ವ್ಯವಸ್ಥೆಯ ಬದಲಾವಣೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿ ಬಿ.ಎಸ್. ನೇಮಗೌಡರ ಕಾರ್ಯ ಶ್ಲಾಘನೀಯ ಅವರಿಗೆ ಸಹಕರಿಸಿದ ತಹಸಿಲ್ದಾರ್, ಪುರಸಭೆ ಸಿಬ್ಬಂದಿ ವರ್ಗ, ಸ್ಥಳೀಯ ಪೊಲೀಸ್ ಇಲಾಖೆಯವರಿಗೆ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್.ನೇಮಗೌಡ್ ಮಾತನಾಡಿ. ಗದಗ್ ಜಿಲ್ಲೆಯಲ್ಲಿ ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರ ನಗರಗಳು ಪ್ರಮುಖವಾಗಿದ್ದು. ಮೊದಲಿಗೆ ಗಜೇಂದ್ರಗಡ ನಗರದಲ್ಲಿ ಸಿಸಿ ಕ್ಯಾಮೆರಾ ಮತ್ತು ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸುವ ಮೂಲಕ ನಗರಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ. ಸಾರ್ವಜನಿಕರು ಕಟ್ಟುನಿಟ್ಟಿನ ಕಾನೂನು ನಿಯಮ ಪಾಲಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ. ಇದರಿಂದ ಅಪರಾಧ ಕೃತ್ಯಗಳು ಕಡಿಮೆಯಾಗಲಿವೆ ಎಂದರು.

 

 ಬೀದಿಬದಿ ವ್ಯಾಪಾರಿಗಳ ಮನವಿ: ಬೀದಿಬದಿಯಲ್ಲಿ ಎಳನೀರು, ಹಣ್ಣು, ಹೂವಿನ ಅಂಗಡಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿ ಎಂದು ವ್ಯಾಪಾರಸ್ಥರು ಮನವಿ ಮಾಡಿಕೊಂಡ ಘಟನೆ ಜರುಗಿತು. ಇದಕ್ಕೆ ಸ್ಥಳವನ್ನು ಹುಡುಕುತ್ತಿದ್ದೇವೆ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳು ಚಿಂತನೆ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂಬ ಮಾತನ್ನು ಜಿ. ಎಸ್. ಪಾಟೀಲರು ಹೇಳಿದರು ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ  ಸಿಪಿಐ ಎಸ್. ಎಸ್. ಬೀಳಗಿ, ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಸ್ಥಳೀಯ ಪಿಎಸ್ಐ ಸೋಮನಗೌಡ ಗೌಡ್ರ,ಕಾಂಗ್ರೆಸ್ ಮುಖಂಡರಾದ ಸಿದ್ದಪ್ಪ ಬಂಡಿ, ಶಿವರಾಜ್ ಘೋರ್ಪಡೆ, ಶ್ರೀಧರ ಬಿದರಳ್ಳಿ, ಚಂಬಣ್ಣ ಚವಡಿ,ಮುರ್ತುಜ ಡಾಲಯತ,ಎ.ಡಿ. ಕೋಲಕಾರ, ರಾಜು ಸಾಂಗ್ಲಿಕರ್, ವೆಂಕಟೇಶ್ ಮುದಗಲ್, ಶರಣು ಪೂಜಾರ,ಮಂಜುಳಾ ರೇವಡಿ, ಶ್ರೀಧರ ಗಂಜೀಗೌಡ್ರ, ಅಂದಪ್ಪ ರಾಠೋಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!