
ಸ್ವಾತಂತ್ರ್ಯ ಹೋರಾಟಗಾರ ಮಂಟೇ ಬಸಪ್ಪನವರನ್ನು ಭೇಟಿಯಾದ ಜಿಲ್ಲಾಧಿಕಾರಿ ಸುಶೀಲಾ.ಬಿ.
ಕೊಡೇಕಲ್ : ಸತ್ಯಮಿಥ್ಯ (ಆಗಸ್ಟ್ -09).
ದೇಶಕ್ಕೆ ಸ್ವಾತಂತ್ರ ಸಿಕ್ಕು 75 ವರ್ಷಗಳು ದಾಟಿವೇ.ಭಾರತ ಮಾತೆಯನ್ನು ಬ್ರಿಟಿಷರ ಸಂಕೋಲೆಯಿಂದ ಬಿಡುಗಡೆಗೊಳಿಸಲು ಹೋರಾಡಿದ ಈ ಮಣ್ಣಿನ ವೀರ ಮಕ್ಕಳು ಇಂದು ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಸರ್ಕಾರ ಪ್ರತಿ ವರ್ಷದ ಆಗಸ್ಟ್ ತಿಂಗಳಲ್ಲಿ ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿ ಧ್ವಜಾರೋಹಣಕ್ಕೆ ಆಹ್ವಾನಿಸುವ ಮೂಲಕ ಗೌರವಾರ್ಪಣೆ ಸಲ್ಲಿಸುವ ಸಂಪ್ರದಾಯವಿದೆ.
ಆದ್ದರಿಂದ ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ. ಬಿ. ಯವರು ಕೊಡೆಕಲ್ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರಾದ ಸಂಗಪ್ಪ ಬಸಪ್ಪ ಮಂಟೆ ಕೊಡೇಕಲ್ ರವರ ನಿವಾಸಕ್ಕೆ ತೆರಳಿ ಸರಕಾರದ ಪರವಾಗಿ ಸನ್ಮಾನಿಸಿ ಮತ್ತು ಸದರಿಯವರ ಆರೋಗ್ಯ ವಿಚಾರಿಸಿದರು ಈ ಸಂದರ್ಭದಲ್ಲಿ ತಹಸೀಲ್ದಾರ ಹುಣಸಗಿಯವರು ಕೂಡ ಭಾಗವಹಿಸಿದರು.
ವರದಿ : ಶಿವು ರಾಠೋಡ್.