
ಬಡವರ ಕಷ್ಟಕ್ಕೆ ಬಾರದ ರಾಜ್ಯ ಸರ್ಕಾರ – ಗದಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಧೋಳ್ ಆಕ್ರೋಶ.
ಗದಗ : ಸತ್ಯಮಿಥ್ಯ ( ಜುಲೈ -22).
ರಾಜ್ಯದಲ್ಲಿ ಕಳೆದ ಹತ್ತು ಹನ್ನೆರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ರಾಜ್ಯದ ಅನೇಕ ಕಡೆ ಪ್ರವಾಹದ ಭೀತಿ ಎದುರಾಗಿದೆ ಇಂತಹ ಪ್ರವಾಹದಿಂದ ಬಡವರ ಜೀವನ ಅದೊಗತಿಗೆ ತಲುಪಿದೆ ಮತ್ತು ಗುಡ್ಡ ಕುಸಿತದಿಂದ ಅಂಕೋಲಾದ ಶಿರೂರಿನಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ.ಇಂತಹ ಸಮಯದಲ್ಲಿ ರಾಜ್ಯ ಸರಕಾರ ವಿಧಾನಸಭೆ ಕಾಲಾಪದಲ್ಲಿ ಕಾಲ ಹರಣ ಮಾಡುತ್ತಿದೆ.
ಈ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲವಾಗಿದೆ.ಬಡವರ ಕಷ್ಟಕ್ಕೆ ಭಾರದೆ ಹೆಣದ ಮೇಲೆ ರಾಜಕೀಯ ಮಾಡುತ್ತಿದೆ.
ಮಾಜಿ ಮುಖ್ಯಮಂತ್ರಿಗಳಾದ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದಂತಹ ಎಚ್. ಡಿ. ಕುಮಾರಸ್ವಾಮಿ ಅವರು ಬಡವರ ಬಗ್ಗೆ ಹಾಗೂ ಬಡವರ ಜೀವದ ಬಗ್ಗೆ ಕಾಳಜಿ ಹೊಂದಿದಂತಹ ಏಕೈಕ ವ್ಯಕ್ತಿ
ಮಾತ್ರ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾ ಹಾನಿಗೊಳಗಾದ ಪ್ರದೇಶಗಳಿಗೆ ಮತ್ತು ಗುಡ್ಡ ಖುಷಿತವಾದ ಪ್ರದೇಶಕ್ಕೆ ಭೇಟಿ ನೀಡಿ ಘಟನೆಯಲ್ಲಿ ಜೀವ ಕಳೆದುಕೊಂಡ ಕುಟುಂಬದ ಸದಸ್ಯರೊಂದಿಗೆ ಚರ್ಚೆ ಮಾಡಿ ಅವರಿಗೆ ಧೈರ್ಯ ತುಂಬಿ ಕೇಂದ್ರ ಸರ್ಕಾರದ ಯಾವುದಾದರೂ ಒಂದು ಇಲಾಖೆಯಲ್ಲಿ ನೌಕರಿಯ ಭರವಸೆಯನ್ನು ನೀಡಿರುವುದು ಮಾನವಿಯ ಮೌಲ್ಯಗಳಿಗೆ ಹಾಗೂ ಸಾರ್ವಜನಿಕರ ಬಗ್ಗೆ ಕಾಳಜಿ ಹೊಂದಿರುವ ಬಗ್ಗೆ ತಿಳಿಯುತ್ತದೆ ಎಂದರು.
ಕೇಂದ್ರ ಮಂತ್ರಿ ಕುಮಾರಸ್ವಾಮಿ ಅವರ ಭೇಟಿಯಾದ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ,ನೆಪಮಾತ್ರಕ್ಕೆ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಚಿವರೊಂದಿಗೆ ಭೇಟಿ ನೀಡಿರುವುದು ಹಾಸ್ಯಾಸ್ಪದದ ಸಂಗತಿ ಇಂತಹ ಬೇಜಾಬ್ದಾರಿತನ ಪ್ರದರ್ಶಿಸುತ್ತಿರುವ ರಾಜ್ಯ ಸರ್ಕಾರ ಈ ಕೂಡಲೇ ಸಾಮೂಹಿಕ ರಾಜೀನಾಮೆ ಕೊಟ್ಟು ತೊಲಗಬೇಕು. ಸಾರ್ವಜನಿಕರ ಕಷ್ಟಕ್ಕೆ ಬಾರದ ಸರ್ಕಾರಕ್ಕೆ ಗದಗ ಜಿಲ್ಲಾ ಜೆಡಿಎಸ್ ನಿಂದ ಧಿಕ್ಕಾರ ಎಂದು ಗದಗ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಂ ವೈ ಮುಧೋಳ ಇವರು ಪತ್ರಿಕಾ ಪ್ರಕಟಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
ವರದಿ : ಸಂ.