ತಾಲೂಕು

ಯಾದಗಿರಿಯಲ್ಲಿ ದೇಶ ಕಾಯುವ ಸೈನಿಕನಿಗಿಲ್ಲಾ ಕಿಮ್ಮತ್ತು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಸುದ್ದಿಗೋಷ್ಠಿ

Share News

ಯಾದಗಿರಿ :ಸತ್ಯಮಿಥ್ಯ (ಜೂಲೈ -06).

ಯಾದಗಿರಿಯ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಲಾಯಿತು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಸೈನಿಕರಿಗೆ ಸಿಗಬೇಕಾದ ಸೌಲಭ್ಯಗಳು ದೊರಕದೇ ಇರುವುದು ಮತ್ತು ದೇಶಕ್ಕಾಗಿ ಒಬ್ಬ ಯೋಧ ಹುತಾತ್ಮನಾದಾಗ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಒಂದು ಸ್ಥಳವೂ ಇಲ್ಲದಿರುವುದು  ವಿಪರ್ಯಾಸ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರು ಲಿಂಗನಗೌಡ ಎಸ್ ಪಾಟೀಲ್ ಆರೋಪಿಸಿದ್ದರು.

ಮಾಜಿ ಸೈನಿಕರ 27 – 28 ವರ್ಷ ದೇಶ ಸೇವೆ ಸಲ್ಲಿಸಿ ಬಂದ ಹಣದಲ್ಲಿ ಒಂದು ಜಮೀನು ಖರೀದಿಸಿದರು ಸರ್ವೇ ನಂಬರ್ 216/ ಪೋವ 1/1ನಲ್ಲಿ 3 ಎಕರೆ N.A. ನಿವೇಶನದ ಮಾಲೀಕರಾದ ವೆಂಕಟೇಶ್ ಸುರೇಂದ್ರ ರಾವ್ ದೇಶಪಾಂಡೆ, ಉಪ್ಪಣ್ಣ ಸುರೇಂದ್ರ ರಾವ್ ದೇಶಪಾಂಡೆ, ಶಾಮ್ ಸುಂದರ್ ಸುರೇಂದ್ರ ರಾವ್ ದೇಶಪಾಂಡೆ ಕುಟುಂಬಸ್ಥರ. ನಿಂಗನಗೌಡ ಎಸ್ ಪಾಟೀಲ್ ಅವರು. ತಮ್ಮ ತಾಯಿ ಹಾಗೂ ಅಕ್ಕನ ಹೆಸರಿನಲ್ಲಿ ಖರೀದಿಸಿದ ಜಾಗವನ್ನು ಮಾಲೀಕರು ತಮಗೆ ನೀಡಿರುವ ಪತ್ರದಲ್ಲಿ ಕೊಟ್ಟಿರುವ ಜಾಗದಲ್ಲಿ ಅಳತೆಯಲ್ಲೂ ಮೋಸ ಮಾಡುತ್ತಿದ್ದಾರೆ.. ಅದನ್ನು ಜಿಲ್ಲಾಧಿಕಾರಿಗಳಿಗೆ, ಹುಣಸಗಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೂ ತಿಳಿಸಿದರು ಅದರ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲಿ ಇರುವುದು ಖಂಡನೆ ಅಪರಾಧ ಎಂದು ತಮ್ಮ ನೋವನ್ನು ತೋರಿಕೊಂಡರು.

ದೇಶದ ಸೇವೆಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಸೇವೆ ಸಲ್ಲಿಸುವ ಸೈನಿಕನಿಗೆ ಜಿಲ್ಲೆಯಲ್ಲಿ ಬೆಲೆ ಇಲ್ಲಾ ಎನ್ನುವ ವಾತಾವರಣವಿದೆ ಎಂದು ಸೈನಿಕರು ತಮ್ಮ ತೊಂದರೆ ಹೇಳಿಕೊಂಡರು.

ಸಹ ನಿರ್ದೇಶನ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಯಾದಗಿರಿಯವರಿಗೂ ಸೈನಿಕರ ಕುಟುಂಬಕ್ಕೆ ಅನ್ಯಾಯವಾಗುತ್ತಿದೆ ಎಂದು ಗಮನ ಹರಿಸದೇ ಇರುವುದು ನೋವಿನ ಸಂಗತಿ ಆಗಿರುವುದು ಕಂಡು ಬರುತ್ತಿದೆ.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರು ಲಿಂಗನಗೌಡ ಎಸ್ ಪಾಟೀಲ್… ಯಾದಗಿರಿ ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ಎಸ್ ಕಟ್ಟಿಮನಿ ಹುಣಸಗಿ ಅಧ್ಯಕ್ಷರು ವೀರೇಶ್ ಪ್ರಭುಗೌಡ ಗೋಳೇಬಾಳ್ ಸುರಪುರ ತಾಲೂಕ ಅಧ್ಯಕ್ಷರು ಭೀಮ ನಾಯಕ್ ಲಕ್ಷ್ಮಿಪುರ ಉಪಸ್ಥಿತರಿದ್ದರು.

ವರದಿ :ಶಿವು ರಾಠೋಡ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!