ಗದಗ : ಕಾಮಗಾರಿ ವಿಳಂಬ, ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ – ಕಣ್ಮುಚ್ಚಿ ಕುಳಿತ ಅಧಿಕಾರಿಗಳು.

ಗದಗ : ಕಾಮಗಾರಿ ವಿಳಂಬ, ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ – ಕಣ್ಮುಚ್ಚಿ ಕುಳಿತ ಅಧಿಕಾರಿಗಳು.
ಮಂದಗತಿಯಲ್ಲಿ ಸಾಗಿದೆ ಚರಂಡಿ ಕಾಮಗಾರಿ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ?
ಗದಗ : ಸತ್ಯಮಿಥ್ಯ(ಜೂ-17).
ನಗರದ ಬೆಟಗೇರಿಯ ಪಾಲಾ ಬಾದಾಮಿ ರಸ್ತೆ ಮಾರ್ಕಂಡೇಶ್ವರ ದೇವಸ್ಥಾನದ ಹತ್ತಿರ ಕಳೆದ ಒಂದು ತಿಂಗಳಕ್ಕಿಂತ ಅಧಿಕವಾಗಿ ಚರಂಡಿ ಕಾಮಗಾರಿ ನಡೆಯುತ್ತಿದ್ದು ಆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವರಿಂದಾಗಿ ಅಲ್ಲಿ ಸಂಚರಿಸುವ ಸಾರ್ವಜನಿಕರಿಗೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯ ಕಡೆಗೆ ಗಮನಹರಿಸದೇ ಇರುವುದರಿಂದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಯಾಗಿರುವ ಈ ರಸ್ತೆಯಲ್ಲಿ ದಿನನಿತ್ಯ ರೋಣ ಗಜೇಂದ್ರಗಡ ಸಿಂಧನೂರು ಬಾದಾಮಿ ಬಾಗಲಕೋಟೆ ಸೇರಿದಂತೆ ಸಂಚರಿಸಲು ಈ ರಸ್ತೆಯಿಂದಲೇ ಸಂಚರಿಸಬೇಕಾಗಿರುವುದರಿಂದ ಹಾಗೂ ಸ್ಥಳೀಯರು ನರಸಾಪುರ ನಾಗಸಮುದ್ರ ಸೇರಿದಂತೆ ಹಲವು ಗ್ರಾಮದ ಜನರು ಈ ರಸ್ತೆಯಿಂದಲೇ ಸಂಚರಿಸುವುದರಿಂದಾಗಿ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗಿ ಸಂಚರಿಸಲು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.
ವಿದ್ಯಾರ್ಥಿಗಳು ಶಾಲೆ ಕಾಲೇಜುಗಳು ತೆರಳುವಾಗ ಟ್ರಾಫಿಕ್ ಜಾಮ್ ನಿಂದಾಗಿ ಶಾಲೆ ಕಾಲೇಜುಗಳಿಗೆ ಸರಿಯಾದ ಬೇಳೆಗೆ ಹೋಗದಂತಹ ಪರಿಸ್ಥಿತಿ ಸಹ ನಿರ್ಮಾಣವಾಗುತ್ತಿದೆ.
ಕಾಮಗಾರಿ ನಡೆಯುತ್ತಿರುವ ರಸ್ತೆಗೆ ನಾಲ್ಕು ರಸ್ತೆಗಳು ಕೂಡುವುದರಿಂದ ಅಪಘಾತಗಳಾಗುವ ಸಂಭವ ಇರುವುದರಿಂದಾಗಿ ಅಲ್ಲದೆ ರಾತ್ರಿ ಸಮಯದಲ್ಲಿ ವಾಹನ ಸಂಚಾರಕ್ಕೆ ತೊಂದರೆಯೂ ಸಹ ಉಂಟಾಗುತ್ತಿದೆ
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಗರ ಸಭೆಯ ಚುನಾಯಿತ ಸದಸ್ಯರು ಈ ರಸ್ತೆಯ ಕಡೆಗೆ ಗಮನಹರಿಸಿ ಮಂದಗತಿಯಿಂದ ಸಾಗುತ್ತಿರುವ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಂಚರಿಸಲು ಅನುಕೂಲ ಮಾಡಿಕೊಡಲೆಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ವರದಿ:ಮುತ್ತು ಗೋಸಲ