ಗಜೇಂದ್ರಗಡ : 23 ನೇ ವಾರ್ಡ ಮೂಲಭೂತ ಸೌಕರ್ಯ ಒದಗಿಸಲು DYFI ಮನವಿ.
ಗಜೇಂದ್ರಗಡದ 23ನೆ ವಾರ್ಡಿನಲ್ಲಿ ಬರುವ ಉಣಚಗೇರಿ ವಾರ್ಡಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯಿಸಿ DFYI ಮನವಿ

ಗಜೇಂದ್ರಗಡದ 23ನೆ ವಾರ್ಡಿನಲ್ಲಿ ಬರುವ ಉಣಚಗೇರಿ ವಾರ್ಡಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯಿಸಿ DYFI ಮನವಿ
ಗಜೇಂದ್ರಗಡ:ಸತ್ಯಮಿಥ್ಯ (ಜೂ-13)
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ DYFI ಗಜೇಂದ್ರಗಡ ಸಂಘಟನೆ ವತಿಯಿಂದ ನಿನ್ನೆ ಗಜೇಂದ್ರಗಡ ನಗರದ 23 ನೇ ವಾರ್ಡ ಉಣಚಗೇರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಒತ್ತಾಯಿಸಿ ಪುರಸಭೆ ಸಿಬ್ಬಂದಿ ಜಿ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರಾದ ಗಣೇಶ ರಾಠೋಡ ಮಾತನಾಡಿ ವಾರ್ಡಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು , ನಗರ ಪ್ರದೇಶಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಜಾರಿಗೊಳಿಸಬೇಕು ವಾರ್ಡಿನಲ್ಲಿ ಎಲ್ಲಾ ಸಮಸ್ಯೆಗಳು ಸರಿಪಡಿಸಲು ಮಾನ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು.
ನಾಗಯ್ಯ ಹೀರೆಮಠ್ ಮಾತನಾಡಿ.ಸುಮಾರು ದಿನಗಳಿಂದ ಉಣಚಗೇರಿ ವಾರ್ಡಿನಲ್ಲಿ ಸಮಸ್ಯೆಗಳಿಂದ ಬಳಲುತ್ತಿದೆ ಆದರೂ ಈವರೆಗೂ ಯಾವುದೇ ಅಧಿಕಾರಿಗಳು ಅಥವಾ ವಾರ್ಡಿನ ಸದಸ್ಯರು ಅದನ್ನು ಬಗೆಹರಿಸಲು ಮುಂದಾಗಿಲ್ಲ ಮುಂದಿನ ದಿನಗಳಲ್ಲಿ ಅವರನ್ನು ಮನೆಗೆ ಕಳುಹಿಸುತ್ತೆವೆಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ ಹೋರಾಟವನ್ನು ನಿರೂಪಿಸಿದರು ವಾರ್ಡಿನ ಯುವಕರಾದ ನಾಗಯ್ಯ ಹೀರೆಮಠ್, ಮಹೇಶ್ ಬೆನ್ನೂರ, ಲೋಹಿತ ಪಾಟೀಲ್, ಮುತ್ತು ಪಾಟೀಲ್, ರವಿ ತಳವಾರ, ರಾಜು ಪಾಟೀಲ್ , ಧರಮಣ್ಣ ಗದ್ಧಿ,ವಿಜಯ ಕಲಾಲಬಂಡಿ, ಪ್ರಶಾಂತ್ ಪಾಟೀಲ್, ಆಸೀಫ್ ನದಾಫ, ಯಮನೂರಪ್ಪ ನಧಾಪ, ಕನಕರಾಯ, ಅಭಿಲಾಷ್ ರಾಠೋಡ, ಅನಿಲ್ ರಾಠೋಡ, ಇದ್ದರು.
ಪ್ರಮುಖ ಬೇಡಿಕೆಗಳು:-
1) ವಾರ್ಡಿನ ಎಲ್ಲಾ ಪ್ರಮುಖ ಓಣಿಗಳಲ್ಲಿ ವಿದ್ಯುತ್ ದಿಪ ಅಳವಡಿಸಬೇಕು .
2) ನಗರದ ಚೆನ್ನಮ್ಮ ವೃತ್ತದಲ್ಲಿ ಬರುವ ಸ್ಥಳದಲ್ಲಿ ಕಸ ರಸ್ತೆಬದಿ ಬಂದಿದ್ದೆ ಅದನ್ನು ವೀಲೆವಾರಿ ಮಾಡಬೇಕು.
3) ವಾರ್ಡಿನಲ್ಲಿ ಸಿ ಸಿ ರಸ್ತೆ ನಿರ್ಮಾಣ ಮಾಡಬೇಕು.
4) ಮಹಿಳೆಯರ ಶೌಚಾಲಯ ನಿರ್ಮಿಸಬೇಕು
5) ಒಳಚರಂಡಿಗಳನ್ನು ಸ್ವಚ್ಛಗೊಳಿಸಬೇಕು, ಬ್ಲಾಕ್ ಆಗಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು .
6) ನಗರ ಪ್ರದೇಶಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿಡಬೇಕು.
7) ಉಣಚಗೇರಿ ವಾರ್ಡಿನಲ್ಲಿ ಬಸ್ ನಿಲ್ದಾಣವಾಗಬೇಕು.
ವರದಿ : ಸುರೇಶ ಬಂಡಾರಿ.