
ವಾಹನ ಚಲಿಸುತ್ತಿರುವಾಗಲೇ ಕಳಚಿದ ಚಕ್ರ ಅದೃಷ್ಟವಶಾತ್ ಪ್ರಯಾಣಿಕರು ಪಾರು.
ಗದಗ :ಸತ್ಯ ಮಿಥ್ಯ (ಜೂ-28).
ಜಿಲ್ಲೆಯ ಶಿರಹಟ್ಟಿಯ ಬಳಿ ಬೆಳ್ಳಟ್ಟಿಯಿಂದ ಶಿರಹಟ್ಟಿಗೆ ತೆರಳುತ್ತಿದ್ದ ಬಸ್‌ನ ಮುಂಭಾಗದ ಚಕ್ರ ಚಲಿಸುದ್ದ ವೇಳೆಯೇ ಕಳಚಿಕೊಂಡಿರುವಂತಹ ಘಟನೆ ನಡೆದಿದೆ. ಅದೃಷ್ಟವಶಾತ್, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡಕೋಟಾ ಬಸ್‌ಗಳ ಬಳಕೆಯ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹೊಸ ಬಸ್‌ಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.
ವರದಿ : ಮುತ್ತು ಗೋಸಲ.