
ಗದಗ : ಅನರ್ಹ/ನಕಲಿ ಬಿಪಿಎಲ್ ಕಾರ್ಡ್ ದಾರರಿಗೆ ಕುತ್ತು.
ಗದಗ : ಸತ್ಯಮಿಥ್ಯ (ಅಗಸ್ಟ 21).
ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿಗಳನುಸಾರ ಅನರ್ಹ/ ನಕಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುರಿತಂತೆ ಪತ್ತೆ ಹಚ್ಚುವ ಹಾಗೂ ಪರಿಶೀಲನೆ ಮಾಡುವ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಈ ಕೆಳಕಾಣಿಸಿದಂತೆ ಬಿಪಿಎಲ್ ಪಡಿತರ ಕಾರ್ಡ್ ಹೊಂದಲು ಅರ್ಹತೆ ಹೊಂದಿರುವುದಿಲ್ಲ.
ಆದಾಯ ತೆರಿಗೆ ಪಾವತಿ ಕುಟುಂಬಗಳು, ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ ಹೊಂದಿರುವ ಕುಟುಂಬಗಳು, ಕುಟುಂಬ ಆದಾಯ ರೂ.1.20 ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ಇರುವ ಕುಟುಂಬಗಳು – ಸರ್ಕಾರಿ ನೌಕರರು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತ ಪಕ್ಕಾ ಮನೆಯನ್ನು ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕೆ ಸ್ವತ: ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ, ಟ್ರಾö್ಯಕ್ಟರ್ , ಮ್ಯಾಕ್ಸಿಕ್ಯಾಬ್ , ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲ ಕುಟುಂಬಗಳು.
ಈ ಮೇಲಿನ ಅಂಶಗಳನ್ವಯ ಬಿಪಿಎಲ್ ಪಡಿತರ ಕಾರ್ಡ್ ಹೊಂದಲು ಅನರ್ಹರಾಗಿದ್ದು, ಬಿಪಿಎಲ್ ಕಾರ್ಡ ಹೊಂದಿದ್ದಲ್ಲಿ ಅಗಸ್ಟ 31 ರೊಳಗಾಗಿ ಸ್ವಯಂ ಪ್ರೇರಣೆಯಿಂದ ಆಯಾಯ ತಹಶೀಲ್ದಾರ ಕಚೇರಿಗೆ ತೆರಳಿ ನಿಮ್ಮ ಪಡಿತರ ಕಾರ್ಡನ್ನು ಆದ್ಯರ್ಪಣೆ ( ಹಿಂತಿರುಗಿಸುವುದ) ಮಾಡುವುದು, ಒಂದು ವೇಳೆ ಈ ಅವಧಿಯ ನಂತರವೂ ಸಹ ಬಿಪಿಎಲ್ ಕಾರ್ಡ ಹೊಂದಿರುವುದು ಪರಿಶೀಲನೆ ಸಮಯದಲ್ಲಿ ಕಂಡು ಬಂದಲ್ಲಿ ಪಡಿತರ ಕಾರ್ಡ ರದ್ದುಪಡಿಸಿ ಪಡಿತರ ಚೀಟಿಯ ಸದಸ್ಯರಿಗನುಗುಣವಾಗಿ ಎಷ್ಟು ಅಕ್ಕಿ ಪಡೆದಿದ್ದಾರೆ ಎಂದು ಲೆಕ್ಕ ಹಾಕಿ ಮುಕ್ತ ಮಾರುಕಟ್ಟೆ ದರದಂತೆ ನಿಯಮಾನುಸಾರ ದಂಡ ವಿಧಿಸಲಾಗುವುದೆಂದು ಹಾಗೂ ಕರ್ನಾಟಕ ಪ್ರಿವೆನ್ಷನ್ ಆಫ್ ಅನ್ ಆಥರೈಸಡ್ ಪೊಸಿಷನ್ ಆಫ್ ರೇಶನ್ ಕಾರ್ಡ್ ಆರ್ಡರ್ -1977 ಪ್ರಕಾರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ನಿನ್ನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಸಂ.