ಅಬ್ಬಿಗೇರಿ : ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ – ಪೆಂಡಾಲ್ ವೀಕ್ಷಿಸಿದ ಶ್ರೀಗಳು ಮತ್ತು ಶಾಸಕರು.
ಅಬ್ಬಿಗೇರಿ : ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ – ಪೆಂಡಾಲ್ ವೀಕ್ಷಿಸಿದ ಶ್ರೀಗಳು ಮತ್ತು ಶಾಸಕರು.
ನರೇಗಲ್ಲ: ಸತ್ಯಮಿಥ್ಯ(ಅ -01).
ಅಕ್ಟೋಬರ್ ೩ರಿಂದ ಅಬ್ಬಿಗೇರಿಯಲ್ಲಿ ಪ್ರಾರಂಭವಾಗಲಿರುವ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಮಹೋತ್ಸವದ ಪೆಂಡಾಲ್‌ನ್ನು ಶನಿವಾರ ಸಂಜೆ ಅನೇಕ ಶ್ರೀಗಳು ಮತ್ತು ರೋಣ ಶಾಸಕ ಜಿ. ಎಸ್. ಪಾಟೀಲ ವೀಕ್ಷಿಸಿ ಮೆಚ್ಚುಗೆ ಸೂಚಿಸುವದರೊಂದಿಗೆ, ಕೆಲವಷ್ಟು ಸಲಹೆಗಳನ್ನು ಪೆಂಡಾಲ್ ಮಾಲೀಕ ಅಮರೇಶ ಹಿರೇಮಠರಿಗೆ ನೀಡಿದರು.
ಈ ಸಂದರ್ಭದಲ್ಲಿ ಪೆಂಡಾಲ್ ಮಾಲೀಕ ಅಮರೇಶ ಹಿರೇಮಠ ಶ್ರೀಗಳವರಿಗೆ ಮತ್ತು ಶಾಸಕರಿಗೆ ಹಾಗೂ ಧುರೀಣರಿಗೆ ಪೆಂಡಾಲ್‌ನ ವಿವರಗಳನ್ನು ನೀಡಿದರು.
ಮುಖ್ಯ ಪೆಂಡಾಲ್‌ನ ಅಳತೆ ೨೪೦ ಅಡಿ ಉದ್ದ ಮತ್ತ ೧೨೦ ಅಡಿ ಅಗಲದ ಜರ್ಮನ್ ಸ್ಟ್ರೆ ಚರ್‌ನ ಪೆಂಡಾಲ್‌ನ್ನು ಹಾಕಲಾಗಿದ್ದು, ಇದು ಎಂತಹುದೇ ಮಳೆ ಬಂದರೂ ಯಾವುದೇ ತೊಂದರೆಯಿಲ್ಲದೆ ಸಮಾರಂಭವು ಸುಗಮವಾಗಿ ನಡೆಯಲು ಅನುಕೂಲವಾಗುತ್ತದೆ ಎಂದರು.
ಮುಖ್ಯ ವೇದಿಕೆಯ ಅಳತೆಯು ೬೬ ಅಡಿ ಉದ್ದ ಮತ್ತು ೩೨ ಅಡಿ ಅಗಲವನ್ನು ಹೊಂದಿದ್ದು, ಸಾಕಷ್ಟು ಜನ ಅತಿಥಿಗಳು ವೇಇದಕೆಯ ಮೇಲೆ ಆರಾಮವಾಗಿ ಕೂಡ್ರಬಹುದಾಗಿದೆ. ಅಡುಗೆ ಮನೆ ಮತ್ತು ಊಟಕ್ಕಾಗಿ ೨೦೦ ಅಡಿ ಉದ್ದ ಮತ್ತು ೧೧೦ ಅಡಿ ಅಗಲದ ಪೆಂಡಾಲ್‌ನ್ನು ಹಾಕಲಾಗಿದ್ದು, ಒಮ್ಮೆಗೆ ಸಹಸ್ರಾರು ಜನರು ಊಟ ಮಾಡಲು ಅನುಕೂಲವಾಗಿದೆ. ಮುಖ್ಯ ವೇದಿಕೆಗೆ ಆಗಮಿಸಲು ಕೋಟೆ ಆಕಾರದ ಒಂದು ಬೃಹತ್ ಮಹಾದ್ವಾರವನ್ನು ನಿರ್ಮಿಸಲಾಗಿದ್ದು, ಅದು ೯೦ ಅಡಿ ಎತ್ತರ ಮತ್ತು ೨೫ ಅಡಿ ಅಗಲವನ್ನು ಹೊಂದಿರುವುದರಿಂದ ಎಂತಹ ವಾಹನಗಳಾದರೂ ಸುಲಭವಾಗಿ ಒಳಕ್ಕೆ ಪ್ರವೇಶ ಮಾಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಶರನ್ನವರಾತ್ರಿ ಉತ್ಸವದ ನೇತೃತ್ವ ವಹಿಸಿರುವ ಶ್ರೀ ವೀರಭದ್ರ ಶಿವಾಚಾರ್ಯರು, ನರೇಗಲ್ಲದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಇನ್ನೂ ಅನೇಕ ಹರ-ಗುರು-ಚರ ಮೂರ್ತಿಗಳು, ಶಾಸಕ ಜಿ. ಎಸ್. ಪಾಟೀಲರು ಅನೇಕ ಸಲಹೆ ಸೂಚನೆಗಳನ್ನು ನೀಡಿ ಅಕ್ಟೋಬರ್ ೨ನೇ ದಿನಾಂಕದ ಸಂಜೆಯೊಳಗೆ ಈ ಪೆಂಡಾಲ್‌ನ ಕೆಲಸಗಳೆಲ್ಲ ಮುಗಿಯಬೇಕೆಂದು ಹಿರೇಮಠರಿಗೆ ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮರೇಶ ಮೊದಲು ನಾನು ಬಲಿಸ್ ಶಾಮಿಯಾನ ಹಾಕುವ ಮೂಲಕ ಈ ಉದ್ಯೋಗಕ್ಕೆ ಕಾಲಿಟ್ಟೆ. ೨೦ ವರ್ಷಗಳಿಂದ ಈ ಕಾರ್ಯ ಮಾಡುತ್ತಿರುವ ನಾನು ಕ್ರಮೇಣವಾಗಿ ಬೆಳೆದು ಈಗ ನೂತನ ತಂತ್ರಜ್ಞಾನದ ಜರ್ಮನ್ ಸ್ಟ್ರೆಚರನವರೆಗೂ ಶಾಮಾಯಾನ ಹಾಕುವ ಮಟ್ಟಕ್ಕೆ ಬಂದಿದ್ದೇನೆ. ಹೀಗಾಗಿ ನನಗೆ ಎಲ್ಲ ರೀತಿಯ ಕೆಲಸಗಳೂ ಸಿಗುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ, ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನೇಕ ಕಾರ್ಯಕ್ರಮಗಳಿಗೆ ಪೆಂಡಾಲ್ ಹಾಕಿ ಸೈ ಎನ್ನಿಸಿಕೊಂಡಿರುವ ಅನುಭವವಿದ್ದು, ಈಗ ಶ್ರೀಮದ್ ಜಗದ್ಗುರು ರಂಭಾಪುರಿ ಶ್ರೀಗಳವರ ದಸರಾ ದರ್ಬಾರಕ್ಕೆ ಪೆಂಡಾಲ್ ಹಾಕುವ ಸೌಭಾಗ್ಯ ದೊರಕಿರುವುದು ನನ್ನ ಪುಣ್ಯ ಎಂದರು.
ವರದಿ : ಸಂಗಮೇಶ ಮೆಣಸಗಿ