ಎಸ್ಐಟಿಯ ಎಡಿಜಿಪಿ ಚಂದ್ರಶೇಖರ ವಜಾಕ್ಕೆ ಎಮ್ ವೈ ಮುಧೋಳ್ ಆಗ್ರಹ.
ಗದಗ: ಸತ್ಯಮಿಥ್ಯ (ಅ -02)
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಐಜಿಪಿ ಎಂ ಚಂದ್ರಶೇಖರ್ ನಡುವಿನ ಸಂಘರ್ಷ ತಾರಕಕ್ಕೆ ಏರುತ್ತಿದೆ. ಈ ನಡುವೆ ಐಪಿಎಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗದಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತುಮಸಾಬ್ ಮುಧೋಳ್ ಗಜೇಂದ್ರಗಡ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಜೆಡಿಎಸ್ ನಾಯಕ ಮತ್ತು ಕೇಂದ್ರ ಸಚಿವರಾದ ಎಚ್. ಡಿ.ಕುಮಾರಸ್ವಾಮಿಯವರ ಬಗ್ಗೆ ಎಸ್. ಐ. ಟಿ ಯ ಎಡಿಜಿಪಿ ಎಂ. ಚಂದ್ರಶೇಖರ ಅಸಹ್ಯಕರ ಪದ ಬಳಕೆ ಮಾಡಿರುವುದು ಅಕ್ಷಮ್ಯ ಅಪರಾಧ. ಜನಪ್ರಿಯ ಮುಖ್ಯಮಂತ್ರಿಗಳಾಗಿ ಬಡ ಜನರ ಕಲ್ಯಾಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಕುಮಾರಸ್ವಾಮಿಯವರ ಬಗ್ಗೆ ಈ ರೀತಿಯ ಕೀಳು ಅಭಿರುಚಿ ಪದ ಬಳಕೆ ಮಾಡಿರುವುದನ್ನು ನಾವೂ ಬಲವಾಗಿ ಖಂಡಿಸುತ್ತೇವೆ. ಈ ಕೂಡಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಎಡಿಜಿಪಿ ಯವರನ್ನು ಕೆಲಸದಿಂದ ಅಮಾನತ್ತು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗಜೇಂದ್ರಗಡ ತಾಲ್ಲೂಕ ಅಧ್ಯಕ್ಷರಾದ ಶ್ರೀ ಸಂಗಪ್ಪ ಯಲಬುಣಚಿ ಅವರ ನೇತೃತ್ವದಲ್ಲಿ ಮಾನ್ಯ ತಹಶೀಲ್ದಾರ್ ಸಾಹೇಬರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಗಜೇಂದ್ರಗಡ ತಾಲ್ಲೂಕ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಬಾದಶಾ ಎಮ್ ಬಾಗವಾನ ಹಾಗೂ ಮುಖಂಡರಾದ ಕನಕಪ್ಪ ಛಲವಾದಿ, ರಾಜು ಪವಾರ್, ಪಾಂಡು ಬೋಸ್ಲೆ, ಕಳಕಪ್ಪ ಹೊಸಂಗಡಿ, ಸಂಗಪ್ಪ ಪತಂಗರಾಯ, ಹುಸೇನಸಾಬ್ ಮ ಸಾಂಗ್ಲೀಕಾರ್, ಪ್ರಭು ಹಿರೇಮಠ ಹಾಗೂ ಶಂಶುದ್ದೀನ್ ಕಟಂಬ್ಲಿ ಅವರು ಉಪಸ್ಥಿತರಿದ್ದರು.
ವರದಿ: ಚನ್ನು. ಎಸ್.