
ರೋಣ ಮಂಡಲ ಬಿಜೆಪಿ ಪ್ರಧಾನಕಾರ್ಯದರ್ಶಿಗಳಾಗಿ ಬಾಲಾಜಿರಾವ್, ರಮೇಶ ಆಯ್ಕೆ.
ಗಜೇಂದ್ರಗಡ : ಸತ್ಯಮಿಥ್ಯ (ಫೆ -15)
ಭಾರತೀಯ ಜನತಾ ಪಾರ್ಟಿ ರೋಣ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ಬಾಲಾಜಿ ರಾವ್ ಬೋಸ್ಲೆ ಮತ್ತು ರಮೇಶ ವಕ್ಕರ್ ರವರನ್ನು ಆಯ್ಕೆ ಮಾಡಲಾಯಿತು.
ಇಂದು ಗಜೇಂದ್ರಗಡ ನಗರದ ಭಾಜಪ ಕಚೇರಿಯಲ್ಲಿ ಜರುಗಿದ ಸಂಘಟನಾ ಪರ್ವ ವಿಶೇಷ ಸಭೆಯಲ್ಲಿ. ಮಾಜಿ ಸಚಿವ ಕಳಕಪ್ಪ ಬಂಡಿ ಸಮ್ಮುಖದಲ್ಲಿ ಬಾಲಾಜಿರಾವ್ ಮತ್ತು ರಮೇಶ ಅಧಿಕಾರ ವಹಿಸಿಕೊಂಡರು.
ಚುನಾವಣೆ ವೀಕ್ಷಕರಾಗಿ ಫಕೀರೇಶ್ ರಟ್ಟೀಹಳ್ಳಿ ಆರ್.ಕೆ. ಚವ್ಹಾಣ ಆಗಮಿಸಿದ್ದರು.
ಈ ಸಂದರ್ಭದಲ್ಲಿ ರೋಣ ಮಂಡಲ ಬಿಜೆಪಿ ಅಧ್ಯಕ್ಷ ಉಮೇಶ ಮಲ್ಲಾಪುರ, ಮುತ್ತಣ್ಣ ಕಡಗದ, ರಾಜೇಂದ್ರ ಘೋರ್ಪಡೆ, ಭಾಸ್ಕರ ರಾಯಬಾಗಿ, ಮುದಿಯಪ್ಪ ಕರಡಿ,ಎಲ್ಲ ಮೋರ್ಚಾಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.