ಗಜೇಂದ್ರಗಡಕ್ಕೆ ಜಿಲ್ಲಾಧಿಕಾರಿ ಭೇಟಿ – ತಹಸೀಲ್ದಾರ್ ಕಚೇರಿಯಲ್ಲಿನ ದಲ್ಲಾಳಿಗಳ ಹಾವಳಿ ಮತ್ತು ಪುರಸಭೆಯಲ್ಲಿ ಕಂಪ್ಲೇಂಟ್ ಬುಕ್ ಸಮಸ್ಯೆ ಕುರಿತು ಮನವಿ.
ಗಜೇಂದ್ರಗಡಕ್ಕೆ ಜಿಲ್ಲಾಧಿಕಾರಿ ಭೇಟಿ – ತಹಸೀಲ್ದಾರ್ ಕಚೇರಿಯಲ್ಲಿನ ದಲ್ಲಾಳಿಗಳ ಹಾವಳಿ ಮತ್ತು ಪುರಸಭೆಯಲ್ಲಿ ಕಂಪ್ಲೇಂಟ್ ಬುಕ್ ಸಮಸ್ಯೆ ಕುರಿತು ಮನವಿ.
ಗಜೇಂದ್ರಗಡ : ಸತ್ಯಮಿಥ್ಯ (ಜುಲೈ -20).
ನೂತನವಾಗಿ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಗೋವಿಂದ ರೆಡ್ಡಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಔಪಚಾರಿಕವಾಗಿ ಗಜೇಂದ್ರಗಡ ನಗರಕ್ಕೆ ಭೇಟಿ ನೀಡಿದರು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು .
ಇಂದು ಮಧ್ಯಾಹ್ನ ನಾಲ್ಕು ಗಂಟೆಗೆ ತಹಸಿಲ್ದಾರ್ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು. ಯಲಬುರ್ಗಾ – ಬಾದಾಮಿ ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ವಿಳಂಬ ಕುರಿತು ಸರ್ವೇ ಕಾರ್ಯ ಶೀಘ್ರದಲ್ಲಿ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಿದರು. ನಂತರ ಸಂಪೂರ್ಣ ತಹಸೀಲ್ದಾರ್ ಕಚೇರಿ ವೀಕ್ಷಿಸಿ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡರು.
ನಂತರ ಪುರಸಭೆ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪ್ರಗತಿ ಪರಿಶೀಲನೆ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾದ ಬೀದಿಬದಿ ವ್ಯಾಪಾರಿಗಳು. ಸಂತೆ ಬಜಾರದಲ್ಲಿ ಸಾರ್ವಜನಿಕ ಶೌಚಾಲಯ,ಕಾಯಪಲ್ಲೇ ಮಾರ್ಕಿಟ್ ನಿರ್ಮಾಣ ಮತ್ತು 18 ನೇ ವಾರ್ಡ್ ನಲ್ಲಿನ ಉದ್ಯಾನವನ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದರು.
ಕನ್ನಡ ಪರ ಸಂಘಟನೆ ಮುಖಂಡರು. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮೀಸಲಾತಿ ಕುರಿತು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಮತ್ತು ಉಪನೋಂದಣಿ ಕಛೇರಿ ದಸ್ತಾಬರಹಗಾರರು ತಮಗೆ ಕಚೇರಿ ಮಾಡಿಕೊಳ್ಳಲು ಪುರಸಭೆ ಮಳಿಗೆಗಳನ್ನು ನೀಡಲು ಕೋರಿಕೊಂಡರು. ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಪುರಸಭೆ ಮುಖ್ಯಧಿಕಾರಿಗೆ ಸೂಚಿಸಿದರು.
ನಂತರ ನಮ್ಮ ವರದಿಗಾರ ತಹಸೀಲ್ದಾರ್ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಒಬ್ಬೊಬ್ಬ ಫಲಾನುಭವಿಗಳಿಂದ 8- 10 ಸಾವಿರ ಲಂಚ ಪಡೆದುಕೊಂಡು 60 ಕ್ಕೂ ಕಡಿಮೆ ವಯಸ್ಸಿನವರಿಗೆ ವೃದ್ದಾಪ್ಯವೇತನ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ. ಅಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾಖಲೆಗಳಿದ್ದರೆ ಕೊಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಪುರಸಭೆಯಲ್ಲಿ ಬೀದಿದೀಪ ಸಮಸ್ಯೆ ಸೇರಿದಂತೆ ಇನ್ನುಳಿದ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಲು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದಿದ್ದಕ್ಕೆ. ಪುರಸಭೆ ಮುಖ್ಯಧಿಕಾರಿಗೆ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಪುರಸಭೆ ಮುಖ್ಯಧಿಕಾರಿ ಬಸವರಾಜ ಬಳಗಾನೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.