ತಾಲೂಕು

ಕಾರ್ಗಿಲ್ ವಿಜಯ ದಿವಸ್ ಬಗ್ಗೆ ಶಾಲಾ ಪಠ್ಯ ರಚಿಸಿ : ದೇಶ ರಕ್ಷಣೆ ಮಾಡುವ ಸೈನ್ಯದ ಬಗ್ಗೆ ಮಕ್ಕಳಲ್ಲಿ ಹೆಮ್ಮೆ ಮೂಡಿಸಿ – ಮಾಜಿ ಸೈನಿಕರ ಅಭಿಮತ.

Share News

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆಗೆ ಸರ್ಕಾರ ಮುಂದಾಗಲಿ : ಮಾಜಿ ಸೈನಿಕರ ಒತ್ತಾಯ.

  ಗಜೇಂದ್ರಗಡ: ಸತ್ಯಮಿಥ್ಯ ( ಜುಲೈ- 26)

ಸಮೀಪದ ಪುರ್ತಗೇರಿಯ ಸೈನಿಕ ನಗರದಲ್ಲಿನ ಅಮರ ಜವಾನ ಸ್ಮಾರಕ ಉದ್ಯಾನವದಲ್ಲಿ ಮಾಜಿ ಸೈನಿಕರಿಂದ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.

ಇಡೀ ದೇಶವೇ ಗರ್ವದಿಂದ ಹೆಮ್ಮೆ ಪಡುವ ನಿಟ್ಟಿನಲ್ಲಿ 25 ವರ್ಷಗಳ ಹಿಂದೆ ತಮ್ಮ ಜೀವದ ಹಂಗನ್ನು ತೊರೆದು ಯುದ್ದ ಮಾಡಿ ವೈರಿ ರಾಷ್ಟ ಪಾಕಿಸ್ತಾನದ ಹುಟ್ಟಡಗಿಸಿದ್ದರಿಂದ ಇಂದು ಕಾರ್ಗಿಲ್ ವಿಜಯ ದಿವಸನ್ನು ಹೆಮ್ಮೆಯ ಪ್ರತೀಕವಾಗಿ ಆಚರಣೆ ಮಾಡುತ್ತಿದ್ದೇವೆ.ಇಂತಹ ಐತಿಹಾಸಿಕ ದೇಶ ಹೆಮ್ಮೆ ಪಡುವ ವಿಜಯೋತ್ಸವದ ಬಗ್ಗೆ ಮಕ್ಕಳಲ್ಲಿ ಇತಿಹಾಸ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡಲು ಸರ್ಕಾರ ಆದೇಶ ಹೊರಡಿಸಬೇಕಿದೆ ಎಂದು ಗಜೇಂದ್ರಗಡ ತಾಲೂಕಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಚ್.ಆರ್.ಮುಜಾವರ ಹೇಳಿದರು.

ನಗರ ಸಮೀಪದ ಸೈನಿಕ ನಗರದಲ್ಲಿನ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಅಮರ ಜವಾನ ಸ್ಮಾರಕಕ್ಕೆ ಗೌರವ ಹಾಗೂ ಪುಷ್ಪ ನಮನ ಸಮರ್ಪಿಸಿ ಮಾತನಾಡಿದರು. 1999 ರಲ್ಲಿ ಭಾರತದ ಕಾರ್ಗಿಲ್ ಮತ್ತು ಲಡಾಖ್‌ನ ಕೆಲವು ಪ್ರದೇಶಗಳನ್ನು ಪಾಕಿಸ್ತಾನಿ ಸೈನಿಕರು ವಶಪಡಿಸಿಕೊಂಡಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆಯು ಪುನಃ ಆ ಪ್ರದೇಶಗಳನ್ನು ಪಡೆದುಕೊಂಡಿತು. ಈ ದಿನವು ದೇಶದ ಸಾರ್ವಭೌಮತ್ವವನ್ನು ಶೌರ್ಯದಿಂದ ರಕ್ಷಿಸಿದ ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು, ಅವರ ಬಲಿದಾನವನ್ನು ಕೊಂಡಾಡುವ, ಭಾರತೀಯರೆಲ್ಲರೂ ಹೆಮ್ಮೆಯಿಂದ ಸ್ಮರಿಸುವ ದಿನವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಎಲ್ಲಾ ಶಾಲಾ ಕಾಲೇಜಿನ ಪುಸ್ತಕಗಳಲ್ಲಿ ಕಾರ್ಗಿಲ್ ವಿಜಯ ದಿವಸದ ಬಗ್ಗೆ ಪಾಠಗಳನ್ನು ರಚಿಸಬೇಕು ಎಂದರು.

ಬಳಿಕ ಮಾಜಿ ಸೈನಿಕರಾದ ಇಮಾಮಸಾಬ ಕೋಲಕಾರ ಮಾತನಾಡಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ೫೨೭ ಸೈನಿಕರು ಹುತಾತ್ಮರಾದ ಕಾರಣ ಭಾರತವು ಈ ದಿನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಅವರ ಬಲಿದಾನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಕಾರ್ಗಿಲ್ ವಿಜಯದ ೨೫ ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ, ಭಾರತೀಯ ವಾಯುಪಡೆಯು ಮೊನ್ನೆ ಜುಲೈ ೧೨ ರಿಂದ ಇಂದಿನವರೆಗೆ ಏರ್ ಫೋರ್ಸ್ ಸ್ಟೇಷನ್ ಸರ್ಸಾವಾದಲ್ಲಿ ‘ಕಾರ್ಗಿಲ್ ವಿಜಯ್ ದಿವಸ್ ರಜತ್ ಜಯಂತಿ’ ಸ್ಮರಣಾರ್ಥವನ್ನು ಆಚರಿಸುತ್ತಿದೆ. ಆದರೆ ಇಂದಿನ ಶಾಲಾ ಕಾಲೇಜಿನಲ್ಲಿನ ಮಕ್ಕಳಿಗೆ ಸೈನಿಕರು, ಅವರ ತ್ಯಾಗದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದರು.

  ಎಲ್ಲಾ ಮಾಜಿ ಸೈನಿಕರಿಂದ ಅಮರ ಜವಾನ ಸ್ಮಾರಕಕ್ಕೆ ಪಥ ಸಂಚಲನದ ಮೂಲಕ ಪುಷ್ಪ ನಮನ, ಮೌನಚಾರಣೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಬ್ರೈಟ್ ಬಿಗಿನಿಂಗ್ ಶಾಲೆಯ ಮುದ್ದು ಮಕ್ಕಳು ಭಾಗಿಯಾಗಿದ್ದು ವಿಶೇಷವಾಗಿತ್ತು.

 ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಕಳಕಪ್ಪ ಡೊಂಬರ, ಕಾರ್ಯದರ್ಶಿ ಶೇಖರಪ್ಪ ಅಂಗಡಿ, ಅಶೋಕ ದಡ್ಡಿ,ವಿ.ಎಸ್.ಕಂದಗಲ್ಲ. ಎಸ್.ಎಎ.ಅಚನೂರ, ಎ.ಸಿ.ಮುಳ್ಳೂರ, ಬಸವರಾಜ ಕಡೆತೋಟದ, ಶೇಖರಪ್ಪ ಮೇದಾರ, ಶರಣಪ್ಪ ಗುರಿಕಾರ, ಎಮ್.ಎನ್.ವೈದ್ಯ, ಲಕ್ಷ್ಮಣ ಮುಧೋಳ, ಬಸವರಾಜ ಶೀಲವಂತರ, ಶೇಖಪ್ಪ ರಾಮಜಿ, ವಿ.ಬಿ.ಕಂಬಿ, ಕುಮಾರೇಶ ಗಡಾದ, ಕೆ.ಪಿ.ರಾಮಜಿ,ಶಿವಪ್ಪ ಕುರುಮನಾಳ, ಶರಣಪ್ಪ ಮಾರನಬಸರಿ, ಎಸ್.ಎಸ್.ಇಂಡಿ, ಹನಮಂತಪ್ಪ ಉಪ್ಪಾರ, ಬ್ರೈಟ್ಬಿಗಿನಿಂಗ್ ಶಾಲೆಯ ಮುಖ್ಯಶಿಕ್ಷಕಿ ನಾಜೀಯಾ ಮುದಗಲ್,ಶಿಕ್ಷಕಿ ರೂಪಾ ಗೊಂಧಳೆ, ರವಿ ನಿಡಗುಂದಿ,ಅಶಪಾಕ ಹುಟಗೂರ ಸೇರಿದಂತೆ ಅನೇಕರು ಇದ್ದರು.

ವರದಿ : ಸುರೇಶ ಭಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!