ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ – ಸಾರ್ವಜನಿಕರು ಮುಕ್ತವಾಗಿ ಬಾಗವಹಿಸಿ ಜಿಲ್ಲಾಧಿಕಾರಿ ಸುಶೀಲಾ.ಬಿ.ಕರೆ.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ – ಸಾರ್ವಜನಿಕರು ಮುಕ್ತವಾಗಿ ಬಾಗವಹಿಸಿ ಜಿಲ್ಲಾಧಿಕಾರಿ ಸುಶೀಲಾ.ಬಿ.ಕರೆ.
ಯಾದಗಿರಿ:ಸತ್ಯಮಿಥ್ಯ(ಸ-12).
ಸೆಪ್ಟೆಂಬರ್ 15 ರಂದು ಕರ್ನಾಟಕ ಸರ್ಕಾರ ಹಾಗೂ ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಚರಿಸುತ್ತಿರುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಯಾದಗಿರಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು,ಪತ್ರಕರ್ತರು ಮಾಧ್ಯಮ ಮಿತ್ರರು, ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು,ಪಧಾದಿಕಾರಿಗಳು ಮುಕ್ತವಾಗಿ ಕಾರ್ಯಕ್ರಮದಲ್ಲಿ ಬಾಗವಹಿಸಲು ಯಾದಗಿರಿ ಜಿಲ್ಲಾಧಿಕಾರಿ ಸುಶೀಲ ಬಿ ಅವರೂ ಮನವಿ ಮಾಡಿದ್ದಾರೆ.
ನಂತರ ಮಾತನಾಡಿದ ಅವರೂ ಯಾದಗಿರಿ ಜಿಲ್ಲೆಯ ಯರಗೋಳದಿಂದ ರಾಯಚೂರ ಜಿಲ್ಲೆಯ ಗಡಿಬಾಗ ಗೂಗಲ್ ಬ್ರಿಡ್ಜ್ ನ ಸುಮಾರು 61 ಕಿಲೋ ಮೀಟರ್ ವರೆಗೆ ಮಾನವ ಸರಪಳಿಯನ್ನು ವಿಶೇಷವಾಗಿ ಸರ್ಕಾರದಿಂದ ಹಮ್ಮಿಕೊಂಡಿದ್ದೂ ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ವಿವಿಧ ಸಂಘಟನೆಯ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಬಾಗವಹಿಸಿ ಕಾರ್ಯಕ್ರಮವನ್ನೂ ಯಶಸ್ವಿಗೊಳಿಸಲು ಮನವಿ ಮಾಡಿದರು.
ವರದಿ : ಶಿವು ರಾಠೋಡ್.