ತಾಲೂಕು

ಗಜೇಂದ್ರಗಡ ತಾಲೂಕ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ರೇಣುಕಾ ಏವೂರ ಪದಗ್ರಹಣ.

Share News

ಗಜೇಂದ್ರಗಡ ತಾಲೂಕ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ರೇಣುಕಾ ಏವೂರ ಪದಗ್ರಹಣ.

ಗಜೇಂದ್ರಗಡ:ಸತ್ಯಮಿಥ್ಯ (ಸೆ-21).

 ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಗಜೇಂದ್ರಗಡ ತಾಲೂಕಾ ಘಟಕದ ಅಧ್ಯಕ್ಷರಾಗಿ ರೇಣುಕಾ ಏವೂರ ಇಂದು ಅಧಿಕಾರ ಸ್ವೀಕರಿಸಿದರು.

ಗಜೇಂದ್ರಗಡದ ಕನುಸು ಸೇವಾಪೌಂಡೇಶನ್ ಕಾರ್ಯಾಲಯದಲ್ಲಿ ಇಂದು ಗದಗ ಜಿಲ್ಲಾ ಕ.ಚು.ಸಾ. ಪರಿಷತ್ ಪ್ರಧಾನ ಕಾರ್ಯದರ್ಶಿ ವಿ. ಬಿ. ಸೋಮನಕಟ್ಟಿಮಠರವರ ನೇತೃತ್ವದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮ ನೂತನ ತಾಲೂಕಾ ಮಟ್ಟದ ಚುಟುಕು ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿ. ಬಿ. ಸೋಮನಕಟ್ಟಿಮಠ.ಚುಟುಕು ಚಿಕ್ಕದಾದರೂ ಅದರ ಅರ್ಥ ವಿಶಾಲ. ಇಂದು ಚುಟುಕು ಸಾಹಿತ್ಯ ಪರಿಷತ್ ಎನ್ನುವ ಸಸಿಯನ್ನು ನೆಟ್ಟಿದ್ದೇವೆ ಅದನ್ನು ಉಳಿಸಿ-ಬೆಳೆಸಿ ಹೆಮ್ಮರವಾಗಿ ಮಾಡುವ ಜವಾಬ್ದಾರಿ ನಿಮ್ಮೆಲರದು.ಗಜೇಂದ್ರಗಡ ನಗರದಲ್ಲಿ ಸಾಹಿತ್ಯ ಅಭಿರುಚಿ ಹೊಂದಿದವರು ಬಹಳಷ್ಟು ಜನರಿದ್ದಾರೆ. ಅವರನ್ನೆಲ್ಲ ಗಣನೆಗೆ ತೆಗೆದುಕೊಂಡು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರು ಸಾಹಿತ್ಯ ಬೆಳೆಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ರೇಣುಕಾ ಏವೂರರವರಿಗೆ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು. ನನಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಗಜೇಂದ್ರಗಡ ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷಳಾಗಿ ನಗರದ ಎಲ್ಲ ಹಿರಿಯ ಮತ್ತು ಕಿರಿಯ ಸಾಹಿತಿಗಳ ಮಾರ್ಗದರ್ಶನ ತೆಗೆದುಕೊಂಡು ಮುಂಬರುವ ದಿನಗಳಲ್ಲಿ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಅನೇಕ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ.ಜಿಲ್ಲಾಧ್ಯಕ್ಷರಾದ ಶ್ರೀಮತಿ ಮೇಟಿಯವರ,ಹಿರಿಯರಾದ ವಿ. ಬಿ. ಸೋಮನಕಟ್ಟಿಮಠ ಗುರುಗಳ ಸಹಕಾರ ಮತ್ತು ಇವತ್ತು ಇಲ್ಲಿ ಆಗಮಿಸಿದ ಸಾಹಿತ್ಯ ಬಳಗದ ನೆರವಿನಿಂದ ಮುಂದುವರೆಯುತ್ತೇವೆ ಎಂದರು.

* ಸಾಹಿತ್ಯಸಾಕ್ತರ ಅಭಿಪ್ರಾಯ *

 “ನೂತನ ಚುಟುಕು ಸಾಹಿತ್ಯ ಪರಿಷತ್ ಗಜೇಂದ್ರಗಡ ಸಾಹಿತ್ಯಾಸಕ್ತರಿಗೆ ಸಂತಸ ತಂದಿದೆ, ಜಿಲ್ಲೆಯಲ್ಲಿಯೇ ಕ್ರಿಯಾಶೀಲ ಪರಿಷತ್ತ ಆಗಿ ಕಾರ್ಯಕ್ರಮಗಳು ರೂಪಗೊಳ್ಳಲಿ” ಬಸವರಾಜ ಮುನವಳ್ಳಿ – ಉಪನ್ಯಾಸಕರು ಗಜೇಂದ್ರಗಡ.

“ಸಾಹಿತ್ಯ ಚಟುವಟಿಕೆಗಳಲ್ಲಿ ಚುಟುಕು ಸಾಹಿತ್ಯವೂ ಒಂದಾಗಿದೆ ಚುಟುಕುಗಳ ಮೂಲಕ ಜ್ವಲಂತ ಸಮಸ್ಯೆಗಳನ್ನು ಸರಳವಾಗಿ ಹೇಳಬವುದಾಗಿದೆ” ಡಿ. ಎಸ್. ಗಾಳಿ ಶಿಕ್ಷಕರು ಗಜೇಂದ್ರಗಡ.

“ನಗರದಲ್ಲಿ ಚುಟುಕು ಸಾಹಿತಿಗಳು ಬಹಳಷ್ಟು ಜನರಿದ್ದಾರೆ. ಅವರಿಗೆ ವೇದಿಕೆ ಕೊರತೆ ಇತ್ತು. ಅದನ್ನು ನೂತನ ಕ.ಚು.ಸಾ. ಪರಿಷತ್ ಸಂಪೂರ್ಣವಾಗಿ ಹೋಗಲಾಡಿಸಿ. ನವ ಚುಟುಕು ಸಾಹಿತಿಗಳಿಗೆ ವೇದಿಕೆ ಕಲ್ಪಿಸಬೇಕು” ಎಸ್. ಎಸ್. ನರೇಗಲ್ಶಿಕ್ಷಕರು ಗಜೇಂದ್ರಗಡ.

“ಚುಟುಕಿನ ಮೂಲಕ ಪಂಚ್ ಕೊಡುವ ಸಾಹಿತಿಗಳು ಆಡಳಿತ ವರ್ಗಕ್ಕೆ. ಹಾಸ್ಯದ ಮೂಲಕ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ಅನೇಕ ಉದಾಹರಣೆಗಳಿವೆ” ರಮೇಶ ಮರಾಠಿ – ಉಪನ್ಯಾಸಕರು.

“ಚುಟುಕುಗಳನ್ನು ರಚನೆ ಮಾಡುತ್ತೇವೆ ಆದರೆ ಅದರ ಬಗ್ಗೆ ವಿಚಾರ ವಿನಿಮಯಕ್ಕೆ ತಾಲೂಕಿನಲ್ಲಿ ಒಂದು ವೇದಿಕೆ ಕೊರತೆ ಇತ್ತು. ಇಂದು ಆ ಕೊರತೆ ನಿಗಿದೆ. ಚುಟುಕು ಸಾಹಿತ್ಯ ಪರಿಷತ್ ಕಾರ್ಯಚಟುವಟಿಕೆಯಲ್ಲಿ ನಿರಂತರವಿರುತ್ತೇವೆ” ಡಾ.ಜಯದೇವ ಗಂಜಿಹಾಳ – ಚುಟುಕು ಸಾಹಿತಿ ಮತ್ತು ಕಥೆಗಾರರು ರಾಜೂರ.

“ಕ.ಸಾ.ಪ ಮತ್ತು ಚು.ಸಾ.ಪ ಗಳು ಸಾಹಿತ್ಯಾಸಕ್ತರ ಮನದ ಮಿಡಿತವನ್ನು ಅರಿತುಕೊಂಡು ಕೆಲಸ ಮಾಡಲಿ. ಚುಟುಕು ಸಾಹಿತ್ಯ ಪರಿಷತ್ ನಮ್ಮೂರಲ್ಲಿ ಅಸ್ತಿತ್ವಕ್ಕೆ ಬಂದದ್ದು ಖುಷಿಯಾಗಿದೆ ” ಡಾ.ಮಹಾಂತೇಶ ಅಂಗಡಿ ಸಾಹಿತ್ಯ ಪೋಷಕರು ಗಜೇಂದ್ರಗಡ.

“ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್. ಚುಟುಕು ಸಾಹಿತಿಗಳಿಗೆ ಮತ್ತು ಯುವ ಸಾಹಿತಿಗಳಿಗೆ ಬರೆಯಲು ಪ್ರೇರಣೆಯಾಗುವಂತಹ ಕಾರ್ಯವನ್ನು ಮಾಡಲು ರೂಪರೇಷಗಳನ್ನು ತಯಾರಿಸಲಿ ” ಸಂಗಮೇಶ ಹೆರಕಲ್ – ಸಾಹಿತ್ಯ ಪೋಷಕರು ಗಜೇಂದ್ರಗಡ.

ಈ ರೀತಿಯಲ್ಲಿ ಎಲ್ಲ ಸಾಹಿತ್ಯಾಸಕ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಾಗರಾಜ, ದೀಪಾ, ಮಧು, ಮನುಶ್ರೀ ಚುಟುಕು ಸಾಹಿತ್ಯದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!