ಆಕರ್ಷಕವಾಗಿ ಮಹಾಭಾರತದ ಭೀಷ್ಮಚಾರ್ಯ ಮರಣಾ ಸನ್ನಿವೇಶ ಸೃಷ್ಟಿಸಿದ ಶಾಲಾ ಮಕ್ಕಳು.
ಮುರಡಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ತಾಲೂಕ ಮಟ್ಟಕ್ಕೆ ಆಯ್ಕೆ
ಇಳಕಲ:ಸತ್ಯಮಿಥ್ಯ (ಸ -20)
ತಾಲೂಕಿನ ಗುಡೂರ ಕ್ಲಸ್ಟರ್ನ ಕೆ ಜಿ ಎಂ ಪಿ ಎಸ್ ಗುಡೂರ (ಎಸ್ ಸಿ) ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಕ್ಲಸ್ಟರ್ನ ಎಲ್ಲಾ ಶಾಲೆಯ ಮಕ್ಕಳು ಅತಿ ಉತ್ಸಾಹದಿಂದ ಭಾಗವಹಿಸಿದ್ದರು.
ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಮುರಡಿ ಶಾಲೆಯ ಮುತ್ತಪ್ಪ ರಂಗಪ್ಪ ಬನ್ನಿ ವಿದ್ಯಾರ್ಥಿಯು ಮಾಡಿದ ಮಹಾಭಾರತದ ಮಹಾಮಹಿಮ ಇಚ್ಛಾಮರಣಿ ಕುರುಕುಲ ಪಿತಾಮಹ ಭೀಷ್ಮಾಚಾರ್ಯರು ಶೈಲಿಯನ್ನು ಮಲಗಿರುವುದು ಎಂಬ ಛದ್ಮವೇಷ ನಿಜಕ್ಕೂ ಆಕರ್ಷಕವಾಗಿತ್ತು ಹಾಗೂ ವಿನೂತನವಾಗಿತ್ತು.
ಈ ಹಳ್ಳಿಯ ಪ್ರತಿಭೆಯ ಅನಾವರಣಕ್ಕೆ ಭವ್ಯ ವೇದಿಕೆ ಬಳಸಿಕೊಂಡು ಮಗುವಿನ ಪ್ರತಿಭೆಯ ಅನಾವರಣಕ್ಕೆ ಬೆನ್ನೆಲುಬಾಗಿ ನಿಂತ ಶಾಲೆಯ ಎಲ್ಲಾ ಗುರು ಬಳಗ ಮಾದರಿಯಾಗಿತ್ತು.
ಹುನಗುಂದ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸದಾಶಿವ ಗುಡಗುಂಟೆಯವರು, ಗುಡೂರ್ ಭಾಗದ ಶಿಕ್ಷಣ ಸಂಯೋಜಕರಾದ ವಿನೋದ್ ಭೋವಿ ಹಾಗೂ ಗುಡೂರ ಕ್ಲಸ್ಟರಿನ ಸಿ ಆರ್ ಪಿ ಯವರಾದ ಶ್ರೀ ಮಹಾಂತೇಶ ತಿಪ್ಪನ್ನವರ ಹಾಗೂ ಕ್ಲಸ್ಟರ್ನ ಎಲ್ಲಾ ಶಾಲೆಯ ಗುರುಗಳು ಗುರುಮಾತೆಯರು ಮುದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೆಚ್ಚುಗೆ ಅಪಾರ ವ್ಯಕ್ತಪಡಿಸಿದರು.
ತೀರ್ಪುಗಾರರು ನಿಸ್ಪಕ್ಷಪಾತವಾದ ತೀರ್ಪಿನಿಂದಾಗಿ ಈ ಭೀಷ್ಮಾಚಾರ್ಯರ ಕುರಿತಾದ ಛದ್ಮವೇಷವು ಪ್ರಥಮ ಸ್ಥಾನವನ್ನು ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದೆ ಶಾಲೆಯ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಊರಿನ ಶಿಕ್ಷಣ ಪ್ರೇಮಿಗಳು ಅಭಿನಂದನೆಗಳನ್ನು ವ್ಯಕ್ತಪಡಿಸಿದರು.
ವರದಿ : ಮುತ್ತು.