ಗಜೇಂದ್ರಗಡ : ಸಿದ್ದಪ್ಪ ಬಂಡಿ ಜನ್ಮ ದಿನಾಚರಣೆ ಕಾರ್ಯಕ್ರಮ ಯುವ ಸಮೂಹಕ್ಕೆ ಆದರ್ಶಪ್ರಾಯ – ಬಸವ ಜಯ ಮೃತ್ಯುಂಜಯ ಶ್ರೀ.
ಸಿದ್ದಪ್ಪ ಬಂಡಿ ನನ್ನ ಸಹೋದರನಿದ್ದಂತೆ ನನ್ನ ಗೆಲುವಿಗೆ ಬಹಳಷ್ಟು ಶ್ರಮಿಸಿದ್ದಾರೆ - ಜಿ. ಎಸ್. ಪಾಟೀಲ್

ನನ್ನ ಸಮಾಜ ಸೇವೆ ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲಾ – ಸಿದ್ದಪ್ಪ ಬಂಡಿ ಬಾವುಕ.
ಗಜೇಂದ್ರಗಡ – ಸತ್ಯಮಿಥ್ಯ (ಜುಲೈ -27).
ಗಜೇಂದ್ರಗಡ ಭಾವೈಕ್ಯತೆಯ ತವರೂರು ಹದಿನೆಂಟು ಮಂದಿರ ಮಸೀದಿ ಬಾವಿಗಳ ಸಂಗಮ.ಅದೇ ರೀತಿ ಯುವ ಮುಖಂಡ ಸಮಾಜ ಸೇವಕ ಸಿದ್ದಣ್ಣ ಬಂಡಿ ಕೂಡಾ ಊರಿನ ಸರ್ವಧರ್ಮದವರೊಂದಿಗೆ ಭಾವೈಕ್ಯತೆಯಿಂದ ಸಾಗುವ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಸರ್ವಧರ್ಮದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಅವರು ತಮ್ಮ ಜನ್ಮ ದಿನಾಚರಣೆಯನ್ನು ರಕ್ತದಾನ ಮತ್ತು ಉಚಿತ ನೇತ್ರ ತಪಾಸಣೆ ಕಾರ್ಯಕ್ರಮ ಮೂಲಕ ಆಚರಿಸುತ್ತಿರುವುದು ಯುವ ಸಮೂಹಕ್ಕೆ ಆದರ್ಶಪ್ರಾಯ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ನುಡಿದರು.
ಅವರು ಇಂದು ಜಿ. ಕೆ. ಬಂಡಿ ಗಾರ್ಡನ್ ನಲ್ಲಿ ನಡೆದ ಕಾಂಗ್ರೇಸ್ ಮುಖಂಡ ಸಿದ್ದಪ್ಪ ಬಂಡಿಯವರ ಜನ್ಮದಿನ ಪ್ರಯುಕ್ತ ರಕ್ತಧಾನ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಿದ್ದಪ್ಪ ಬಂಡಿಯವರು ಸಮಯ ಪ್ರಜ್ಞೆ ಮತ್ತು ಕ್ರಿಯಾಶೀಲತೆಗೆ ಹೆಸರಾದವರು. ವೀರಶೈವ ಲಿಂಗಾಯತ ಸಮಾಜ ಜೊತೆಗೆ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಸಮಾಜ ಸೇವೆಯಲ್ಲಿ ನಿಂದಾಪ ನಿಂದನೆಗಳು ಬರುತ್ತವೆ ಅದಕ್ಕೆ ಕಿವಿಗೊಡದೆ ಮುಂದುವರೆಯಿರಿ ಎಂದು ಶ್ರೀಗಳು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದದೇವರಮಠ. ಪ್ರಸ್ತುತ ಸಂದರ್ಭದಲ್ಲಿ ಯುವ ಸಮೂಹ ಜನ್ಮದಿನಾಚರಣೆಯನ್ನು ಮೋಜು ಮಸ್ತಿ ಮಾಡುತ್ತಾ ಆಚರಿಸುತ್ತಾರೆ. ಅಂತಹ ಯುವಪೀಳಿಗೆಗೆ ಸಿದ್ದಣ್ಣ ಬಂಡಿಯವರ ಈ ಕಾರ್ಯಕ್ರಮ ಮಾರ್ಗದರ್ಶನವಾಗಬೇಕು. ಇಂದು ತಮ್ಮ ನಾಯಕನ ಮೇಲಿನ ಅಭಿಮಾನಕ್ಕೆ ನೂರಾರು ಜನ ರಕ್ತವನ್ನು ಧಾನಮಾಡಿದ್ದಾರೆ. ಒಬ್ಬ ವ್ಯಕ್ತಿಯ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತದೆ ಎಂದಾದರೆ. ಆ ವ್ಯಕ್ತಿ ಸಮಾಜ ಏಳಿಗೆಗೆ ಶ್ರಮಿಸಿದ್ದಾನೆ ಎಂದರ್ಥ ಎಂದರು.
ಚಿತ್ರ : ರಕ್ತಧಾನ ಮಾಡಿದವರಿಗೆ ಅಭಿನಂದನಾ ಪತ್ರ ವಿತರಿಸಿದ ಶಾಸಕ ಜಿ. ಎಸ್. ಪಾಟೀಲ್ ಮತ್ತು ಆನಂದಸ್ವಾಮಿ ಗಡ್ಡದದೇವರಮಠ
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಪ್ಪ ಬಂಡಿ. ಇವತ್ತು ಈ ಕಾರ್ಯಕ್ರಮವನ್ನು ನನ್ನೆಲ್ಲ ಅಭಿಮಾನಿಗಳು ಸೇರಿಕೊಂಡು ಆಚರಿಸುತ್ತಿರುವುದಕ್ಕೆ ಸಂತೋಷವಾಗಿದೆ. ನಾನು ನಿರಂತರ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ. ಇದರಲ್ಲಿ ನಾನು ರಾಜಕೀಯವಾಗಿ ಯಾವುದೇ ಗುರಿಸಾಧನೆಯ ಆಸಕ್ತಿಯಿಲ್ಲವೆಂದು ನುಡಿಯುತ್ತ ಬಾವುಕರಾದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ. ಎಸ್. ಪಾಟೀಲ್. ಸಿದ್ದಪ್ಪ ನನ್ನ ಸಹೋದರನಿದ್ದಂತೆ . ನನ್ನ ಚುನಾವಣೆ ಗೆಲುವಿನಲ್ಲಿ ಬಹುಮುಖ್ಯ ಪಾತ್ರವಹಿಸಿದವರು. ಅವರದು ಇನ್ನು ಚಿಕ್ಕ ವಯಸ್ಸು ತಾಳ್ಮೆ ರಾಜಕೀಯದಲ್ಲಿ ಕಾರ್ಯ ಸಾಧನೆಗೆ ದಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಸಿದ್ದಪ್ಪ ಬಂಡಿಯವರು ನಿರಂತರ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲಿ. .ವೀರಶೈವ ಲಿಂಗಾಯತ ಸಮಾಜದ ಏಳಿಗೆಯ ಬಗ್ಗೆ ನನ್ನ ಜೊತೆ ನಿರಂತರ ಚರ್ಚೆ ಮಾಡುತ್ತಿರುತ್ತಾರೆ ಎಂದು ಹೇಳುತ್ತಾ ಅವರ ತಂದೆ ಗುರುಶಾಂತಪ್ಪ ಬಂಡಿಯವರ ಒಡನಾಟದ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ವೀರಣ್ಣ ಶಟ್ಟರ, ಶಿವರಾಜ ಘೋರ್ಪಡೆ, ಎಚ್. ಎಸ್. ಸೋಂಪುರ ಸೇರಿದಂತೆ ಅನೇಕ ಗಣ್ಯರು ಮಾತನಾಡಿದರು.
ಮಲ್ಲಿಕಾರ್ಜುನ ಹಿರೇಕೊಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು, ಎಸ್.ಎಸ್. ನರೇಗಲ್ ನಿರೂಪಿಸಿದರು .
ವೇದಿಕೆಯ ಮೇಲೆ ಎಂಎಲ್ ಸಿ ಶರಣಬಸವ ಬಯ್ಯಾಪುರ, ಚಂಬಣ್ಣ ಚವಡಿ, ಡಾ. ಬಿ. ವ್ಹಿ. ಕಂಬಳ್ಯಾಳ,ಐ. ಎಸ್. ಪಾಟೀಲ್,ಶ್ರೀಮತಿ ಮಂಜುಳಾ ರೇವಡಿ, ಎಸ್. ಎಸ್. ವಾಲಿ, ಅಪ್ಪು ಮತ್ತಿಕಟ್ಟಿ, ಶಿವಕುಮಾರ ಕೊರಧಾನ್ಯಮಠ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.