
ಬಲಿಗಾಗಿ ಕಾಯುತ್ತಿವೆ ವಿದ್ಯುತ್ ತಂತಿಗಳು ಕಣ್ಣ್ ತೆರೆದು ನೋಡುತ್ತಾರಾ ಅಧಿಕಾರಿಗಳು?
ಕೊಪ್ಪಳ:ಸತ್ಯಮಿಥ್ಯ (ಸ -25)
ಜಿಲ್ಲೆಯ ಕುಕನೂರು ಪಟ್ಟಣದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 15ನೇ ವಾರ್ಡಿನ ಜವಳ ನಗರದ ಆಶ್ರಯ ಕಾಲೋನಿ ಸಾರ್ವಜನಿಕರು ಮತ್ತು ಕುಟುಂಬಗಳು ಅತ್ಯಂತ ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದು ಅಂತಹ ಜವಳ ಕಾಲೋನಿಯಲ್ಲಿ ಈ ಹಿಂದಿನ ರಾಜಕೀಯ ಪಕ್ಷದವರು ಸಾರ್ವಜನಿಕರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸ್ಥಳಾವಕಾಶ ಕಲ್ಪಿಸಿದ್ದರು .
ಅಲ್ಲಿ ವಾಸಿಸುವ ಮನೆ ಮೇಲ್ಚಾವಣಿ ಮೇಲೆ 11 ಕೆ.ವಿ. ವಿದ್ಯುತ್ ತಂತಿಗಳು ಹಾದು ಹೋಗಿದ್ದು ದಿನ ನಿತ್ಯ ಅತ್ಯಂತ ಹೆಚ್ಚಿನ ವಿದ್ಯುತ್ ಪ್ರವಾಹದ ತಂತಿಗಳ ಮಧ್ಯೆ ಜೀವ ಹಿಡಿದು ಜೀವ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಆದಷ್ಟು ಬೇಗನೆ 11 ಕೆ. ವಿ. ವಿದ್ಯುತ್ ತಂತಿ ಮತ್ತು ಕಂಬಗಳನ್ನು ಸ್ಥಳಾಂತರಗೊಳಿಸಬೇಕು ಎಂದು ವಿದ್ಯುತ್ ಶಾಖಾ ಅಧಿಕಾರಿಗಳಿಗೆ ಕಾರ್ಯ ಮತ್ತು ಪಾಲನ ಶಾಖೆ ಇವರಿಗೆ ಮತ್ತು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು ಇವರಿಗೆ ಹಲವು ಬಾರಿ ಮನವಿಯನ್ನ ಸಲ್ಲಿಸಿದ್ದಾರೆ.
ಇದುವರೆಗೂ ಯಾವ ಅಧಿಕಾರಿಗಳು ಇತ್ತ ಕಡೆ ತಿರುಗಿಸಹ ನೋಡುತ್ತಿಲ್ಲ. ಸಾರ್ವಜನಿಕರು ಇಲಾಖೆಯ ಅಧಿಕಾರಿಗಳ ಹತ್ತಿರ ಹೋದಾಗ 25 ರಿಂದ 30 ಸಾವಿರ ರೂಪಾಯಿಗಳು ಕಂಬಗಳನ್ನು ಸ್ಥಳಾಂತರಿಸಲು ವ್ಯಯ ಆಗುತ್ತವೆ ಎಂದು ಕಂಬಗಳ ಮತ್ತು ಸ್ಥಳಾಂತರಿಸಲು ಬೇಕಾದ ವಸ್ತುಗಳ ಪಟ್ಟಿಯನ್ನು ನೀಡುತ್ತಾರೆ ಎಂದು ಜವಳ ಕಾಲೋನಿಯ ನಿವಾಸಿ ಕುಬೇರಪ್ಪ ಭಜಂತ್ರಿ ಮಾಧ್ಯಮದ ಮುಂದೆ ತಿಳಿಸಿದರು.
ಚಿತ್ರ : ಅಧಿಕಾರಿಗಳು ಬರೆದು ಕೊಟ್ಟ ಮಟಿರಿಯಲ್ ಚೀಟಿ.
ಇದೆ ಸಂದರ್ಭದಲ್ಲಿ ಮಾತನಾಡಿದ ಬಸವರಾಜ್ ಕಿತ್ತೂರು ಮತ್ತು ಶಶಿ ಹಾಳಕೇರಿ ಮಾತನಾಡುತ್ತ ಜವಳ ಕಾಲೋನಿಯಲ್ಲಿ ಕಡು ಬಡತನದ ಜನಗಳು ವಾಸಿಸುತ್ತಿದ್ದು ಸಂಬಂಧಪಟ್ಟ ಇಲಾಖೆಗಳಿಗೆ ಸಾಕಷ್ಟು ಬಾರಿ ಮನವಿಯನ್ನ ನೀಡಿದ್ದು. ಹಾರಕ್ಕೆ ಉತ್ತರವನ್ನು ನೀಡುತ್ತಾ ಬರುತ್ತಿದ್ದು. ಇನ್ನು ಮುಂದೆ ಯಾವುದಾದರೂ ಅವಗಡ ಸಂಭವಿಸುವ ಮುನ್ನ ಎಚ್ಚರಿಕೆ ವಹಿಸಿ ಸಂಬಂಧ ಪಟ್ಟ ಇಲಾಖೆಗಳು ಜವಳ ಕಾಲೋನಿಯ ನಿವಾಸಿಗಳಿಗೆ ನೆರವಾಗದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಅವಗಡಗಳು ನಡೆದಲ್ಲಿ ಅದಕ್ಕೆ ನೇರ ಹೊಣೆಗಾರರು ಇಲಾಖೆಯವರೇ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಸಾಬ ಯಲಿಗಾರ, ಜಗದೀಶ ಪೂಜಾರ, ಪರಶುರಾಮ, ಸಿದ್ದಪ್ಪ ತಿಪ್ಪರಸನಾಳ, ಹಂಚ್ಯಾಳಪ್ಪ ಭಜಂತ್ರಿ, ಉಮೇಶ ಭಜಂತ್ರಿ, ಹಸನ್ ಸಾಬ, ಮಾರುತಿ ಭಜಂತ್ರಿ, ಉಮೇಶ್ ಕಾಳಿ, ಚಾಂದ ಸಾಬ್ ಗದ್ವಾಲ್, ದೇವಪ್ಪ ಜಾಲಿ, ರುದ್ರಪ್ಪ ಕೂಡ್ಲಿಗಿ, ಜವಳ ಕಾಲೋನಿಯ ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.