
ಜಗದ್ಗುರು ತೋಂಟದಾರ್ಯ ಸಿಬಿಎಸ್ಈ ಯಲ್ಲಿ ಬ್ರೈನ್ ವೇವ್ ವಿಜ್ಞಾನ ಮೇಳ.ವಿಜ್ಞಾನ ಆವಿಸ್ಕಾರಗಳ ಅನಾವರಣ.
ಗಜೇಂದ್ರಗಡ : ಸತ್ಯಮಿಥ್ಯ (ಜ -04).
ನಗರದ ರೋಣ ರಸ್ತೆಯ ಜಗದ್ಗುರು ತೋಂಟದಾರ್ಯ ಸಿ ಬಿ ಎಸ್ ಈ ಶಾಲೆಯಲ್ಲಿ ಜನೆವರಿ 2 ಗುರುವಾರ ಬ್ರೈನ್ ವೇವ್ ವಿಜ್ಞಾನ ಮೇಳವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪ್ರೊ.ವಿಜಯ್ ಮಾಲಗಿತ್ತಿ ವಹಿಸಿಕೊಂಡು ಮಾತನಾಡಿದರು. ವಿಜ್ಞಾನ ಎಂಬುವದು ಯಾವ ವಿಷಯವನ್ನಾದರೂ ಸುಲಭವಾಗಿ ಒಪ್ಪಿಕೊಳ್ಳುವಂತಹದ್ದಲ್ಲ. ಎಲ್ಲವನ್ನು ತನ್ನ ಪರಿಮಿತಿಯಲ್ಲಿ ತರ್ಕಬದ್ದವಾಗಿ ಪರಿಶೀಲನೆ ಮಾಡಿ ಒಪ್ಪಿಕೊಳ್ಳುವಂತಹದು. ನಿಮ್ಮ ಪ್ರತಿನಿತ್ಯದ ಎಲ್ಲ ಚಟುವಟಿಕೆಯಲ್ಲಿ ವಿಜ್ಞಾನ ಅಡಗಿದೆ. ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜುವ ಪೇಸ್ಟ್ ನಿಂದ ಹಿಡಿದು ನಿಮ್ಮ ದಿನಚರಿ ಮುಗಿಯುವವರೆಗೆ ಬಳಸುವ ಪ್ರತಿ ವಸ್ತುಗಳು ವಿಜ್ಞಾನ ಪ್ರಾಮುಖ್ಯತೆಯನ್ನು ತಿಳಿಸಿಕೊಡುತ್ತವೆ ಎಂದರು .
ಅತಿಥಿಗಳಾಗಿ ಅಶೋಕ್ ಪಾಟೀಲ ಮತ್ತು ಸಂಗಮೇಶ ಬಾಗೂರ ಹಾಗೂ ನಿರ್ಣಾಯಕರಾಗಿ ನಾಗರಾಜ ತುಪ್ಪದರವರು ಆಗಮಿಸಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕವಿತಾ ಪಾಟೀಲ ರವರು ವಹಿಸಿಕೊಂಡಿದ್ದರು ಸಿಬ್ಬಂದಿಯು ತಯಾರಿಸಿದ ಶಾಲಾ ಮಾದರಿಯನ್ನು ವಿವರಿಸಿ ಹೇಳಿದರು. ವಿದ್ಯುತ್ ಶಾಕೋತ್ಪನ್ನ ಮಾದರಿಯನ್ನು ಸಿಬ್ಬಂದಿಯವರು ತಯಾರಿಸಿ ಪ್ರದರ್ಶಿಸಿದರು.
ಶಾಲೆಯ ತಂತ್ರಜ್ಞಾನ ವಿಭಾಗವನ್ನು ಶ್ರೀ ಶಿವಕುಮಾರ ಕೋಸಗಿ , ಮಾಹಾಂತೇಶ ಬೀಜಕಲ, ಸಿದ್ದು ಹರನಟ್ಟಿ ಮತ್ತು ಶಿವಕುಮಾರ ಹಿರೇಮಠ, ಈರಣ್ಣ ಮಲಕನ್ನವರ ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಜವಾಬ್ದಾರಿಯನ್ನು ಶರಣು ಅಂಗಡಿ ಮತ್ತು ಅಶೋಕ ಅಂಗಡಿ ವಹಿಸಿಕೊಂಡಿದ್ದರು. ಮತ್ತು ಈ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಈ ವಿಜ್ಞಾನ ಮೇಳದಲ್ಲಿ 120 ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ವರದಿ :ಚನ್ನು. ಎಸ್.