ತಾಲೂಕು

ಪುರಸಭೆ ಸಾಮಾನ್ಯ ಸಭೆ – ನಗರದ ಅನೇಕ ಸಮಸ್ಯೆಗಳ ಚರ್ಚೆ.ಕೆಲವಕ್ಕೆ ಪರಿಹಾರ.

Share News

ಪುರಸಭೆ ಸಾಮಾನ್ಯ ಸಭೆ – ನಗರದ ಅನೇಕ ಸಮಸ್ಯೆಗಳ ಚರ್ಚೆ.ಕೆಲವಕ್ಕೆ ಪರಿಹಾರ.

ಗಜೇಂದ್ರಗಡ : ಸತ್ಯಮಿಥ್ಯ (ಸ-30).

ಗಜೇಂದ್ರಗಡ ಪುರಸಭೆಯ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರವಹಿಸಿಕೊಂಡ ಬಳಿಕ ಮೊದಲ ಸಾಮಾನ್ಯ ಸಭೆ ಇಂದು ಮದ್ಯಾಹ್ನ 3 ಗಂಟೆಗೆ ಜರುಗಿತು.

ಪ್ರಮುಖವಾಗಿ ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಯಾದ ಅಂಗಡಿ ಸ್ಥಳಾಂತರ ಮತ್ತು ಮರಳಿ ಮೂಲ ಸ್ಥಳಗಳಲ್ಲೇ ವ್ಯಾಪಾರಕ್ಕೆ ಅನುಕೂಲ ಮಾಡಲು ಬಿಜೆಪಿ ಸದಸ್ಯ ಯಮನೂರಪ್ಪ ತೀರಕೋಜಿ ಮತ್ತು ರೂಪಲೇಶ ರಾಠೋಡ್ ಗಮನ ಸೆಳೆದರು.ಎಸ್ ಪಿ ಟ್ರೇನಿಂಗ ಹೋಗಿದ್ದಾರೆ ಅವರು ಬಂದ ಬಳಿಕ ಪರಸ್ಪರ ಚರ್ಚೆಮಾಡಿ ಕ್ರಮಕೈಗೊಳ್ಳಲಾಗುವದು ಎಂದು ಶಾಸಕ ಜಿ. ಎಸ್ ಪಾಟೀಲರು ನುಡಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಸುಭಾಸ್ ಮ್ಯಾಗೇರಿ ಮಾತನಾಡುತ್ತ. ಗಜೇಂದ್ರಗಡ ನಗರದ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ.ಶಾಸಕರಾದ ಜಿ. ಎಸ್. ಪಾಟೀಲರು ನಮ್ಮ ಪುರಸಭೆಗೆ ಹೆಚ್ಚಿಗೆ ಅನುದಾನ ನೀಡಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

*ಚರ್ಚಿತ ವಿಷಯಗಳು.

* ನಗರಕ್ಕೆ 24×7 ಕುಡಿಯುವ ನೀರು ಒದಗಿಸುವ ಅಮೃತ -2 ಯೋಜನೆ ಸರಿಯಾಗಿ ನಡೆಯುತ್ತಿಲ್ಲ ಅದನ್ನು ಕ್ರಮಬದ್ದವಾಗಿ ನಡೆಸಲು. ವಿಶೇಷ ಸಭೆ ಕರೆಯಬೇಕು ಮತ್ತು ಅದಕ್ಕೆ ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಹಾಜರಿರಲು ತಾಕಿತು ಮಾಡಲಾಯಿತು.

* ಬಿಡಾಡಿ ದನ, ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಧಿಕಾರಿಗೆ ಸೂಚಿಸಲಾಯಿತು.

* 7 ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಗೆ ಟೆಂಡರ್ ಕರೆಯಲು ಒಪ್ಪಿಗೆ ನೀಡಲಾಯಿತು.

* ಪೌರಕಾರ್ಮಿಕರ ಬೆಳಗಿನ ಉಪಹಾರದ ಟೆಂಡರ್ ಮತ್ತು ಬೀದಿ ದೀಪಗಳ ನಿರ್ವಹಣೆ ಮಾಡಲು ಟೆಂಡರ್ ಕರೆಯಲು ಸೂಚಿಸಲಾಗಿದೆ.

* ಪ್ರಾಥಮಿಕ ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ಮೂರು ಕಡೆ ಜಾಗದ ಶೋಧನೆಗೆ ಒಪ್ಪಿಗೆ.

* ನೂತನ ತಾಲೂಕಾ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಪಂಪಹೌಸ್ ಹತ್ತಿರ ಜಾಗೆಯನ್ನು ಅಂತಿಮಗೊಳಿಸಲಾಗಿದೆ.

* ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯಕ್ಕೆ ಜಾಗ ಒದಗಿಸಲು ಪುರಸಭೆಗೆ ಸೂಚಿಸಲಾಗಿದೆ.

* ಅಂಬೇಡ್ಕರ್ ಮೂರ್ತಿ ನಿರ್ಮಾಣ ಕುರಿತು ಚರ್ಚಿಸಲಾಯಿತು.

ಅಲ್ಲದೇ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಪ್ರಮುಖವಾಗಿ ಕುಡಿಯುವ ನೀರಿನ ಅಮೃತ್ – 2 ಯೋಜನೆಯಲ್ಲಿ ಎಸ್ಟಿಮೇಟ್ ಮತ್ತು ವಾಸ್ತವ ಪರಿಸ್ಥಿತಿ ಬದಲಾಗಿದೆ ಅದಕ್ಕನುಗುಣವಾಗಿ ಕಾಮಗಾರಿ ಕೈಗೊಳ್ಳುತ್ತಿಲ್ಲ ಎಂಬ ಕೂಗು ಪ್ರಮುಖವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕ ತಡೆ ಹಿಡಿಯಲು ಸೂಚಿಸಿ ಮತ್ತು ಸಂಬಂಧಪಟ್ಟ ಗುತ್ತಿಗೆದಾರ ಮತ್ತು ಅಧಿಕಾರಿಗಳು ಜನಪ್ರತಿನಿದಿನಗಳ ಸಭೆ ಕರೆದು ಸಮಸ್ಯೆ ಬಗೆ ಹರಿಸುವ ಮಾತನ್ನು ಶಾಸಕ ಜಿ. ಎಸ್. ಪಾಟೀಲ್ ನುಡಿದರು.

ಅಲ್ಲದೇ ಬೀದಿಬದಿ ವ್ಯಾಪಾರಸ್ಥರ ಸಮಸ್ಯೆ ರಾಜಕೀಯ ತಿರುವು ಪಡೆದುಕೊಂದದ್ದು ಜಗಜ್ಜಾಹಿರವಾಗಿದೆ. ಶಾಸಕ vs ಸಂಸದ ರೀತಿಯಲ್ಲಿ ಚಟುವಟಿಕೆಗಳು ನಡೆಯುತ್ತಿದ್ದು. ಎಸ್ ಪಿ ಟ್ರೇನಿಂಗ ಹೋಗಿದ್ದರಿಂದ ಸಮಸ್ಯೆಯ ಚಂಡು ಎಸ್ ಪಿ ಅಂಗಳಕ್ಕೆ ಶಾಸಕ ಜಿ. ಎಸ್. ಪಾಟೀಲರು ಕಳುಹಿಸಿದ್ದಾರೆ.ವ್ಯಾಪಾರಸ್ಥರು ಮೂಲ ಸ್ಥಳಗಳಿಗೆ ಮರಳುವ ಒಂದು ಮಾತನ್ನು ಆಡದ ಶಾಸಕರು ತಳ್ಳುಗಾಡಿ ಮೂಲಕ ವ್ಯಾಪಾರ ಮಾಡುವ ಮಾತುಗಳನ್ನು ಆಡಿದ್ದಾರೆ. ಟೈನಿಂಗೆ ಹೋದ ಎಸ್ ಪಿ ಯವರು ಮರಳಿ ಬಂದ ನಂತರ ಏನಾಗುತ್ತದೋ ಎಂದು ಕಾಯುವ ಪರಿಸ್ಥಿತಿ ಬೀದಿಬದಿ ವ್ಯಾಪಾರಸ್ಥರದ್ದಾಗಿದೆ.

ಸಭೆಯಲ್ಲಿ ಬಹುತೇಕ ಎಲ್ಲ ಸಮಸ್ಯೆಗಳಿಗೆ ಶಾಸಕ ಜಿ. ಎಸ್. ಪಾಟೀಲರೆ ಉತ್ತರ ನೀಡಿದ್ದು ವಿಶೇಷವಾಗಿತ್ತು ಮತ್ತು ಅಧ್ಯಕ್ಷ ಸುಭಾಸ್ ಮ್ಯಾಗೇರಿ, ಉಪಾಧ್ಯಕ್ಷರಾದ ಸವಿತಾ ಬಿದರಳ್ಳಿ, ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸೇರಿದಂತೆ ಎಲ್ಲ ವಾರ್ಡಿನ ಜನಪ್ರತಿನಿದಿನಗಳು, ನಾಮನಿರ್ದೇಶನ ಸದಸ್ಯರು ಹಾಗೂ ಪುರಸಭೆ ನೌಕರ ವರ್ಗ ಉಪಸ್ಥಿತಿ ಕಂಡುಬಂದಿತು.

ಒಟ್ಟಾರೆ ನಗರದ ಸಮಸ್ಯೆಗಳು ನೂರಾರು. ಚರ್ಚೆಗೆ ತೆಗೆದುಕೊಂಡಿದ್ದು ಕೆಲವಾರು. ಹಲವಕ್ಕೆ ಮಾತ್ರ ತಾತ್ಕಾಲಿಕ ಪರಿಹಾರ ನೀಡುವಲ್ಲಿ ಸಭೆ ಯಶಸ್ವಿಯಾಯಿತು ಎನ್ನಲಾಗಿದೆ.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!