ವಿಶ್ವ ಬಂಧು ಸೇವಾ ಗುರು ಬಳಗದ ಗೋಡೆ ಬರಹ ಕಾರ್ಯಕ್ರಮ ಮಕ್ಕಳ ಕಲಿಕೆಗೆ ಸ್ಪೂರ್ತಿ:-ಈರಪ್ಪ ಹಿರೇಮನಿ
ಯಲಬುರ್ಗಾ:ಸತ್ಯಮಿಥ್ಯ (ಅ -01).
ವಿಶೇಷವಾಗಿ ರವಿವಾರ ಶಾಲೆಯ ರಜೆ ದಿನ.ಯಲಬುರ್ಗಾದ ವಿಶ್ವ ಬಂಧು ಸೇವಾ ಗುರು ಬಳಗದವರಿಂದ ಚಂಡೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಡೆ ಬರಹ ಸೇವೆ ಕಾರ್ಯ ಮಕ್ಕಳ ಕಲಿಕೆಗೆ ಸ್ಪೂರ್ತಿ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಈರಪ್ಪ ಹಿರೇಮನಿ ಹೇಳಿದರು.
ಚಿತ್ರ : ಈರಪ್ಪ ಹಿರೇಮನಿ.ಎಸ್ಡಿಎಂಸಿ ಅಧ್ಯಕ್ಷರು.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಚಂಡೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಸೆಪ್ಟೆಂಬರ್ 29 ರವಿವಾರದಂದು ವಿಶ್ವ ಬಂದು ಸೇವಾ ಗುರು ಬಳಗ ಯಲಬುರ್ಗಾ ವತಿಯಿಂದ 20ನೇ ಗೋಡೆ ಬರಹ ಸೇವೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ವಿಶ್ವ ಬಂದು ಸೇವಾ ಗುರು ಬಳಗದ ಗೋಡೆ ಬರಹ ಸೇವೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಲಿಂಗಪ್ಪ ಶ್ಯಾಗೋಟಿ ಶಿಕ್ಷಕರ ನೇತೃತ್ವದಲ್ಲಿ ಇವರ ತಂಡ ಪ್ರತಿ ರವಿವಾರ ಆಯ್ದ ಶಾಲೆಗಳನ್ನು ಆರಿಸಿ ಉಚಿತವಾಗಿ ಗೋಡೆ ಬರಹ ಕಾರ್ಯಕ್ರಮವನ್ನು ನೆರವೇರಿಸುತ್ತ ಬರುತ್ತಿದ್ದಾರೆ.
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಮತ್ತು ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಬರುವಂತಹ ಅಂಕಿ ಅಂಶಗಳು ಮತ್ತು ಮಕ್ಕಳ ಶಿಕ್ಷಣದ ಸುಧಾರಣೆಗೆ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಹೆಚ್ಚಿನ ಪ್ರಭಾವ ಬೀರಲು ಗೋಡೆ ಬರಹದಲ್ಲಿ ಗಣಿತ, ಸಾಮಾಜಿಕ, ವಿಷಯಗಳಿಗೆ ತಕ್ಕಂತೆ ಬರವಣಿಗೆಯ ಮೂಲಕ ಮಕ್ಕಳ ಕಲಿಕೆಗೆ ಸ್ಪೂರ್ತಿಯಾಗಿದೆ ವಿಶ್ವ ಬಂಧು ಸೇವಾ ಗುರು ಬಳಗ ಇದರಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಭಯ ತಾಲೂಕಿನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ವಿಶ್ವ ಬಂಧು ಸೇವಾ ಗುರು ಬಳಗದವರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ, ಶಿಕ್ಷಕರಿಗೂ ಹಾಗೂ ಸಹ ಶಿಕ್ಷಕರಿಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಎಸ್. ಡಿ. ಎಮ್. ಸಿ. ಅಧ್ಯಕ್ಷ ಈರಪ್ಪ ಹಿರೇಮನಿ ಹೇಳಿದರು.
ಈ ಸಂದರ್ಭದಲ್ಲಿ ನಾಗಪ್ಪ ಆರ್. ಉಂಕಿ ಮುಖ್ಯೋಪಾಧ್ಯಾಯರು, ಎಸ್. ಡಿ. ಎಂ. ಸಿ. ಉಪಾಧ್ಯಕ್ಷರಾದ ಶಂಕ್ರಮ್ಮ ಡಿ. ಮಾಸ್ತಿ, ಗ್ರಾಮ ಪಂಚಾಯತ್ ಸದಸ್ಯರಾದ ಶಂಕ್ರಪ್ಪ ,ಮಲ್ಲವ್ವ ಹನುಮರೆಡ್ಡಿ ಜ್ಯೋತಿ, ಲಕ್ಷ್ಮವ್ವ ನಿಂಗಪ್ಪ ಕುರಿ, ಶಿಕ್ಷಕರಾದ ಲಾಲ್ ಬಾಷಾ ಗುಡಿಹಿಂದಲ್, ದಾಸರಡ್ಡಿ ಹನಸಿ, ವೀರೇಶ್ ಸೋಂಪೂರ,ಅಲ್ತಾಫ್ ಕೊಪ್ಪಳ, ಮಂಜುನಾಥಯ್ಯ ತೆಗ್ಗಿನಮನಿ,
ಗೋಡೆ ಬರಹ ಸೇವಾ ಕಾರ್ಯದಲ್ಲಿ ಶಿಕ್ಷಕರಾದ ಶಿವಕುಮಾರ ಮುತ್ತಾಳ, ಖಾಜಾ ಸಾಬ ಹೊಸಳ್ಳಿ, ಪ್ರಭು ಶಿವನಗೌಡರ, ಸಿದ್ದರಾಮಪ್ಪ ಅರಕೇರಿ, ಶಂಭುಲಿಂಗಪ್ಪ ಹರಿಷಣದ, ಬಸವರಾಜ ಉಪ್ಪಿನ, ವಿಶ್ವನಾಥ ಕಂಪ್ಲಿ, ಮಹಾವೀರ ಕಲಬಾವಿ, ಮಂಜುನಾಥ್ ಮನ್ನಾಪೂರ್, ಕಳಕನ ಗೌಡ ಪಾಟೀಲ್, ವೆಂಕಟೇಶ್ ಬಿ. ಶೇಖರ್ ಅಳವಂಡಿ, ಯಲ್ಲಪ್ಪ ಗುನ್ನಾಳ, ಶಿವಪುತ್ರಪ್ಪ ಮುತ್ತಾಳ, ಪರಮೇಶ ಚಿಂತಾಮಣಿ, ಗ್ರಾಮದ ಗುರು ಹಿರಿಯರು ಇತರರಿದ್ದರು.
ವರದಿ : ಚನ್ನಯ್ಯ ಹಿರೇಮಠ.