ಸರ್ಕಾರಿ ಶಾಲಾ ಶಿಕ್ಷಕಿಗೆ ರಾಜ್ಯಮಟ್ಟದ ಪ್ರಶಸ್ತಿಯ ಗರಿ.
ಗದಗ:ಸತ್ಯಮಿಥ್ಯ ( ಸ -04).
ಸರ್ಕಾರಿ ಶಾಲೆ ಎಂದರೆ ಹೀಗಿರಬೇಕು ಇಲ್ಲಿ ಓದುವ ಮಕ್ಕಳೇ ಧನ್ಯರು ಸರ್ಕಾರಿ ಶಾಲೆಗಳು ಹೀಗೂ ಉಂಟಾ? ಎಂಬ ರೀತಿ ಬೆರಗು ಮೂಡಿಸುವಂತಹ ಶಾಲೆ ಅಭಿವೃದ್ಧಿಪಡಿಸಿದ ಸರ್ಕಾರಿ ಶಾಲಾ ಶಿಕ್ಷಕಿಗೆ ರಾಜ್ಯಮಟ್ಟದ ಪ್ರಶಸ್ತಿ ಅರಸಿ ಬಂದಿದೆ.ಈ ಗೌರವಕ್ಕೆ ಪಾತ್ರರಾದವರು ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ರತ್ನಾ ಬದಿ.
ಅವರು ಸದಾ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ ಮೂಲ ಸೌಕರ್ಯ ಕೊರತೆಯಾಗದಂತೆ ನಿಗಾ ವಹಿಸುವುದು ಒಂದು ಪರಿಪೂರ್ಣ ಶಾಲೆ ಎಂದರೆ ಹೀಗಿರಬೇಕು ಎಂಬ ಪರಿಕಲ್ಪನೆಯಲ್ಲಿ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡು ಬಂದವರು ಮುಖ್ಯ ಶಿಕ್ಷಕರಾದ ರತ್ನಾ ಬದಿಯವರ .
ಅವರು 19ವರ್ಷ 8 ತಿಂಗಳು ಸ ಹಿ ಪ್ರಾ ಶಾಲೆ ಬಸಾಪುರದ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದ್ದು.ಮುಳುಗುಂದ ಕ್ಲಸ್ಟರ್, ಗದಗ ಜಿಲ್ಲಾ ಮಟ್ಟದ 2022-23 ನೇ ಸಾಲಿನಲ್ಲಿ ಗದಗ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ
2024 ಪ್ರಸ್ತುತ ವರ್ಷದ ಕರ್ನಾಟಕ ಸರ್ಕಾರ ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿಧಾನಸೌಧ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಸಹಿತ ಭಾಜನರಾಗಿದ್ದಾರೆ.
ಇವರು ರಾಷ್ಟ್ರೀಯ ದೇಹ ದಾನ ಸಮಿತಿಯಲ್ಲಿ ಚತುರವಾಗ್ಮಿ ಲೇಖನ ಕಣ್ಮಣಿ ಪ್ರಶಸ್ತಿ ಪಡೆದಿರುವರು
ವಿಜಯಪುರ ಸಿದ್ದೇಶ್ವರ ಸ್ವಾಮೀಜಿ ಆಶ್ರಮದಲ್ಲಿ ಶ್ರೀಗಳವರ ಕವನ ರಚಿಸಿದ್ದಾಕ್ಕಾಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಆಗಿದೆ. 2023 ರಲ್ಲಿ ಬೆಂಗಳೂರ ಜನಸಿರಿ ಫೌಂಡೇಶನ್ ಶ್ರೀಜನಸ್ನೆಹಿಯಾದ ಶ್ರೀ ನಾಗಳೇಖ ಅವರಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸಮಿತಿಯಲ್ಲಿ ಹಲವಾರು ಕವನ ರಚಿಸಿ ಕೀರ್ತಿ ಗಳಿಸಿದ್ದಾರೆ. ಸರ್ಕಾರಿ ಅರೆಸರ್ಕಾರಿ ನೌಕರರ ಸಂಘ ದ ವತಿಯಿಂದ ಶಿಕ್ಷಕ ರತ್ನ ಪ್ರಶಸ್ತಿ ಪಡೆದವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರ ಅಖಿಲ ಕರ್ನಾಟಕ.ಸಾoಸ್ಕೃತಿಕ. ಪರಿಷತ್ತಿನ ಗದಗ ಜಿಲ್ಲೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.2023 ರಲ್ಲಿ ಗದಗ ವಾಣಿ ಚಾನಲ್ ನವರು ಕರುನಾಡ ಕಾಯಕ ಅತ್ಯುತ್ತಮ ಶಿಕ್ಷಕಪ್ರಶಸ್ತಿಗೆ ಕೊಡಮಾಡಿದರು.ತನ್ನದೇ ಹೆಸರಿನ ರತ್ನನ್ ಪದ ಎಂಬ ಕವನ ಸಂಕಲನ ಲೋಕಾರ್ಪಣೆ ಮಾಡಿದರು. 75 ನೆ ಸ್ವಾತಂತ್ರ ಸುವರ್ಣ ಮಹೋತ್ಸವ ಅಂಗವಾಗಿ ಮಂಡ್ಯದಲ್ಲಿ ರಾಜ್ಯ.ಮಟ್ಟದ ಕವಿ.ಕಾವ್ಯಮೆಳದ ಸಮ್ಮೇಳಾಧ್ಯಕ್ಷರಾಗಿ , ಹಾಗೂ.ಕರುನಾಡ ಸಿರಿ ವೆದಿಕೆರಾಜ್ಯಮಟ್ಟದ ಸಮ್ಮೇಳನಾಧ್ಯಕ್ಷರಾಗಿ,.ಅಷ್ಟೇ ಅಲ್ಲದೆ ಶಾಲಾ. ಏಲ್ಲ..ಮಕ್ಕಳ ಅಭ್ಯಾಸಕ್ಕಾಗಿ ಸ್ವಂತ.ಹಣದಿಂದ ಪ್ರೊಜೆಕ್ಟರ್ ಖರೀದಿಸಿ ಪಾಠ ಮಾಡುತ್ತಾರೆ.ನಾವೀನ್ಯಯುತ ಕಲಿಕೆಗಾಗಿ ವಿವಿಧ ರೂಪದ ಕಲಿಕೆಯ ತಂತ್ರ ಬಳಸಿ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿಗಳೇ ನನ್ನ ಆಸ್ತಿ ನನ್ನ ಸೇವೆ ಗುರುತಿಸಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಎಂಬ ಪ್ರಶಸ್ತಿ ನೀಡುತ್ತಿರುವುದು ಇನ್ನಷ್ಟು ಸೇವೆ ಸಲ್ಲಿಸಲು ಉತ್ಸಾಹ ನೀಡುತ್ತಿದೆ ಈ ಪ್ರಶಸ್ತಿಯನ್ನು ನಮ್ಮ ಶಿಷ್ಯ ವೃಂದಕ್ಕೆ ಅರ್ಪಿಸುತ್ತೇನೆ –ರತ್ನಾ ಬದಿ.ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಜನರಾದವರು.
ವರದಿ:ಮುತ್ತು ಗೋಸಲ