
ಧರ್ಮ ರಕ್ಷಣೆಯಲ್ಲಿ ಪುರಾಣಗಳ ಪಾತ್ರ ಹಿರಿದು : ಶ್ರೀ ಅಭಿನವ ಪಂಚಾಕ್ಷರ ಸ್ವಾಮೀಜಿ.
ಕುಕನೂರು: ಸತ್ಯಮಿಥ್ಯ ( ಸ -04)
ಧರ್ಮದ ರಕ್ಷಣೆಗಳಲ್ಲಿ ಪುರಾಣದ ಪಾತ್ರ ಹಿರಿದು. ಪುರಾಣಗಳು ಮನುಷ್ಯನ ಬಾಳಿಗೆ ಬೆಳಕು ನೀಡುತ್ತವೆ. ಅಂತಹ ಪುರಾಣಗಳನ್ನು ದ್ಯಾಂಪೂರು ಗ್ರಾಮದ ಕವಿಗಳು ರಚಿಸಿದ್ದಾರೆ ಎಂದು ರಾಜೂರು, ಅಡ್ನೂರು, ಗದಗ ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಸ್ವಾಮೀಜಿ ಹೇಳಿದರು.
ಕೊಪ್ಪಳ ಜಿಲ್ಲೆ ಕುಕನೂರತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ 15ನೇ ವರ್ಷದ ಪುರಾಣ ಮಂಗಳ, ಶ್ರೀ ಶರಣಬಸವೇಶ್ವರ ಭಜನಾ ಮಂಗಳ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನ ಬಾಳಿನಲ್ಲಿ ಖುಷಿ ಕ್ಷಣಗಳು ಬೇಕು. ಅಂತಹ ಕ್ಷಣಗಳು ಮನುಷ್ಯನ ಮನಸ್ಸು ನಿರ್ಮಲವಾಗಿದ್ದಾಗ ದೊರೆಯುತ್ತವೆ.ಮನುಷ್ಯನ ಮನಸ್ಸು ನಿರ್ಮಲ ಆಗಿರಲು ಭಕ್ತಿ ಮಾರ್ಗಬೇಕು.ಮನುಷ್ಯನಲ್ಲಿ ಶಕ್ತಿ ಹಾಗು ಭಕ್ತಿಯನ್ನು ಪುರಾಣಗಳು ನೀಡುತ್ತವೆ. ಮನುಷ್ಯ ಜನ್ಮ ಸಿಕ್ಕಿರುವುದು ಪುಣ್ಯದ ಫಲ. ಅದನ್ನು ಸಮಾಜ ಸೇವೆಗೆ ಅರ್ಪಣೆ ಮಾಡಬೇಕು. ಗ್ರಾಮದಲ್ಲಿ 15 ವರ್ಷದಿಂದ ಪುರಾಣ ಕಾರ್ಯ ಜರುಗುತ್ತಾ ಬಂದಿದೆ. ದ್ಯಾಂಪೂರು ಗ್ರಾಮದ ಕವಿಗಳು ಪುರಾಣಗಳನ್ನು ರಚಿಸಿದ್ದಾರೆ. ಈ ಗ್ರಾಮದ ಹೆಸರು ಸದಾ ಅಜರಾಮರ ಎಂದರು.
ಪುರಾಣ ಸೇವಾ ಸಮಿತಿ ಸಂಚಾಲಕ ಈಶಯ್ಯ ಶಿರೂರಮಠ ಮಾತನಾಡಿ, ಪುರಾಣ ಹಾಗು ಭಜನಾ ಮಂಗಳ ನಿಮಿತ್ತ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆ, ಭಜನಾ ಕಾರ್ಯಕ್ರಮ ಜರುಗಿದವು. ಅನ್ನಸಂತರ್ಪಣೆ ಜರುಗಿತು. ಪುರಾಣ ಸೇವಾ ಸಮಿತಿಯವರು, ಶ್ರೀ ಶರಣಬಸವೇಶ್ವರ ಭಜನಾ ಮಂಡಳಿಯವರು, ಪುರಾಣಿಕರು ಹಾಗು ಗ್ರಾಮಸ್ಥರಿದ್ದರು.
ವರದಿ : ಚೆನ್ನಯ್ಯ ಹಿರೇಮಠ.