ಒಣಮೆಣಸಿನಕಾಯಿ ಬೆಲೆ ಕುಸಿತ ಸಂಗ್ರಹಿಸಿದ್ದ ರೈತರಿಗೆ ಆತಂಕ.
ದೊಡ್ಡ ಪ್ರಮಾಣದಲ್ಲಿ ಸಂಗ್ರಹಣೆ ಮಾಡಿದ ರೈತರಿಗೆ ಗೋಳು.
ಒಣಮೆಣಸಿನಕಾಯಿ ಬೆಲೆ ಕುಸಿತ ಸಂಗ್ರಹಿಸಿದ್ದ ರೈತರಿಗೆ ಆತಂಕ.
ಗದಗ:ಸತ್ಯಮಿಥ್ಯ ( ಜು -02)
ಉತ್ತಮ ಬೆಲೆ ಬರುತ್ತದೆ ಎಂಬ ಭರವಸೆ ಮೇರೆಗೆ.ಮನೆಗಳಲ್ಲಿ ಮೂರು ತಿಂಗಳಿನಿಂದ ಸಂಗ್ರಹಿಸಿ ಇಡಲಾಗಿದ್ದ ಕೆಂಪು ಮೆಣಸಿನಕಾಯಿ ಗುಣಮಟ್ಟ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಇದರಿಂದ ಆತಂಕಗೊಂಡಿರುವ ರೈತರಿಗೆ ದಿಕ್ಕೇ ತೋಚದಾಗಿದೆ.
ಗದಗ ಜಿಲ್ಲೆ ರೋಣ ಮುಂಡರಗಿ ಗಜೆಂದ್ರಗಡ ನರಗುಂದ ತಾಲ್ಲೂಕಿನ ಸುತ್ತಮುತ್ತಲಿನ ರೈತರು ಒಣಬೇಸಾಯದಲ್ಲಿ ಕೆಂಪುಮೆಣಸಿನಕಾಯಿ ಬೆಳೆದಿದ್ದರು.
ಎಕರೆಗೆ ₹30 ಸಾವಿರ ಖರ್ಚು ಆಗಿತ್ತು. ಬೆಳೆ ಬರುವುದಕ್ಕೂ ಮುನ್ನ ಕ್ವಿಂಟಲ್‌ಗೆ ₹45 ಸಾವಿರ ಇದ್ದ ಕೆಂಪುಮೆಣಸಿನಕಾಯಿ ದರ ಈಗ ₹8,500ಕ್ಕೆ ಕುಸಿದಿದೆ. ಬೆಳೆಯನ್ನು ಇಟ್ಟುಕೊಳ್ಳಲು ಮತ್ತು ಮಾರಲು ಆಗದೇ ರೈತರು ಅಸಹಾಯಕ ಸ್ಥಿತಿಯಲ್ಲಿದ್ದಾರೆ.
‘ರೋಣ ತಾಲ್ಲೂಕಿನಲ್ಲಿ ಇದೇ ವರ್ಷ ಜನವರಿಯಲ್ಲಿ ಜವಾರಿ ತಳಿಯ ಕೆಂಪು ಮೆಣಸಿನಕಾಯಿ ಕ್ವಿಂಟಲ್‌ಗೆ ₹35 ಸಾವಿರಕ್ಕೆ ಮಾರಾಟವಾಗಿತ್ತು. ನಂತರದ ದಿನಗಳಲ್ಲಿ ಬೆಲೆ ಕುಸಿಯತೊಡಗಿತು. ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿ ಬೆಳೆಯನ್ನು ಮನೆಯಲ್ಲೇ ಸಂಗ್ರಹಿಸಿ ಇಟ್ಟೆವು. ಆದರೆ, ಈಗ ಬೆಳೆಯನ್ನು ಕ್ವಿಂಟಲ್‌ಗೆ ₹8,500ರ ದರಕ್ಕೆ ಕೇಳುತ್ತಾರೆ’ ಎಂದು ರೃತರು ತಿಳಿಸುತ್ತಿದಾರೆ.
ರೈತರು ಕೆಂಪುಮೆಣಸಿನಕಾಯಿ ಬೆಳೆದಿದ್ದು, ಈಗಿನ ಬೆಲೆಗೆ ಮಾರಿದರೆ ಹಾಕಿದ ಖರ್ಚು ಕೂಡ ಬರಲ್ಲ. ಸರ್ಕಾರ ಸ್ಥಳೀಯ ಮೆಣಸಿನಕಾಯಿ ಬೆಳೆಗಾರರ ಹಿತ ಕಾಯಬೇಕು. ಅಷ್ಟೂ ಬೆಳೆಯನ್ನು ಬೆಂಬಲ ಬೆಲೆಯಡಿ ಖರೀದಿಸಲು ಸರ್ಕಾರ ಮುಂದಾಗಬೇಕು ಎಂದು ರೈತರು ಹೇಳುತ್ತಿದಾರೆ.
ವರದಿ : ಮುತ್ತು.